More

    ತಳಬಾಳ ಗ್ರಾಮದ ಭೀಮಲಿಂಗೇಶ್ವರ ದೇಗುಲ ಕಳಸಾರೋಹಣ ಅದ್ದೂರಿ

    ಕುಕನೂರು: ತಾಲೂಕಿನ ತಳಬಾಳ ಗ್ರಾಮದ ಶ್ರೀ ಭೀಮಲಿಂಗೇಶ್ವರ ದೇವಸ್ಥಾನದ ಕಳಸಾರೋಹಣ ಹಾಗೂ ನವಗ್ರಹ ಮೂರ್ತಿ ಪ್ರತಿಷ್ಠಾಪನೆ ಮಂಗಳವಾರ ಅದ್ದೂರಿಯಾಗಿ ಜರುಗಿತು.

    ಬೆಳಗ್ಗೆಯಿಂದಲೇ ಶ್ರೀ ಭೀಮಲಿಂಗೇಶ್ವರ ದೇವರಿಗೆ ವಿವಿಧ ಪೂಜಾ ವಿಧಾನ ನೆರವೇರಿಸಿದ್ದು, ಶಾಂತಯ್ಯ ಹಿರೇಮಠ, ಶಶಿಧರಯ್ಯ ಅರಳೆಲೆ ಹಿರೇಮಠ ಅವರು ಹೋಮ ಹವನಾದಿ ಕಾರ್ಯಕ್ರಮ ನಡೆಸಿದರು. ಅರಳೆಲೆ ಹಿರೇಮಠ ಮಂಗಳೂರಿನ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ನವಗ್ರಹ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಾಸಾರೋಹಣ ನೆರವೇರಿಸಿದರು.

    ಗ್ರಾಮದ ರಾಜಬೀದಿಯಲ್ಲಿ 108 ಕಳಸ, ಕುಂಭದೊಂದಿಗೆ ಮಹಿಳೆಯರು ಸಾಗಿದರು. ಅದ್ದೂರಿ ಭಜನಾ ಮೇಳದೊಂದಿಗೆ ಕಳಸ ದೇವಸ್ಥಾನದವರೆಗೆ ಸಾಗಿ ಬಂತು. ಪ್ರಮುಖರಾದ ಶಂಕರಗೌಡ ಪೊಲೀಸ್ ಪಾಟೀಲ್, ದೇವಿಂದ್ರಪ್ಪ ಕಮ್ಮಾರ, ಮಲ್ಲಣ್ಣ ಸಾದರ, ವೀರಭದ್ರಯ್ಯ ಮನ್ನಾಪುರ, ಅಂದಯ್ಯ ಲಕಮಾಪುರಮಠ, ಶೇಖಪ್ಪ ಭೋವಿ, ಮಲಿಕ್‌ಸಾಬ್ ನೂರ್‌ಬಾಷಾ, ಫಕ್ಕಪ್ಪ ತಳವಾರ, ನಿಂಗಪ್ಪ ಬಿಕನಹಳ್ಳಿ, ಪಕ್ಕಪ್ಪ ಬಾಣದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts