More

    4 ಎಸೆತಗಳಲ್ಲಿ 4 ವಿಕೆಟ್​; ರಣಜಿ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆರ್​ಸಿಬಿ ಮಾಜಿ ಪ್ಲೇಯರ್

    ಇಂದೋರ್​: ಇಲ್ಲಿನ ಹೋಳ್ಕರ್​ ಕ್ರೀಡಾಂಗಣದಲ್ಲಿ ನಡೆದ ಮಧ್ಯಪ್ರದೇಶ ಹಾಗೂ ಬರೋಡಾ ನಡುವಿನ ರಣಜಿ ಪಂದ್ಯದಲ್ಲಿ ಅತಿಥೇಯರು ಪ್ರವಾಸಿ ತಂಡವನ್ನು ಇನಿಂಗ್ಸ್ ಹಾಗೂ 52 ರನ್ ಗಳಿಂದ ಸೋಲಿಸಿದ್ದಾರೆ. ತಂಡದ ಪರ ಉತ್ತಮ ಪ್ರದರ್ಶನ ನೀಡಿದ ವೇಗಿ ಕುಲ್ವಂತ್​ ಖೇಜ್ರೋಲಿಯಾ ಮಧ್ಯಪ್ರದೇಶದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಹೊಸ ದಾಖಲೆ ಒಂದನ್ನು ಬರೆದಿದ್ದಾರೆ.

    ಬರೋಡಾ ವಿರುದ್ಧದ ಪಂದ್ಯದಲ್ಲಿ  4 ಎಸೆತಗಳಲ್ಲಿ 4 ವಿಕೆಟ್ ಪಡೆಯುವ ಮೂಲಕ ಕುಲ್ವಂತ್​ ಖೇಜ್ರೋಲಿಯಾ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 4 ಎಸೆತಗಳಲ್ಲಿ 4 ವಿಕೆಟ್​ ಪಡೆಯುವ ಮೂಲಕ ಕುಲ್ವಂತ್​ ರಣಜಿಯಲ್ಲಿ ಈ ಸಾಧನೆ ಮಾಡಿದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ಅಲ್ಲದೇ ಈ ಪಂದ್ಯದಲ್ಲಿ 7 ವಿಕೆಟ್​ಗಳನ್ನು ಪಡೆಯುವ ಮೂಲಕ ಕುಲ್ವಂತ್​ ಪಂದ್ಯಪುರುಷೋತ್ತಮ ಪ್ರಶಸ್ತಿಗೂ ಭಾಜನರಾಗಿದ್ದಾರೆ.

    ಮೊದಲ ಇನ್ನಿಂಗ್ಸ್​ನಲ್ಲಿ ಮಧ್ಯಪ್ರದೇಶ 454 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬರೋಡಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 132 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 270 ರನ್ ಗಳಿಸಲಷ್ಟೇ ಶಕ್ತವಾಯಿತು. ಕುಮೊದಲ ಇನಿಂಗ್ಸ್‌ನಲ್ಲಿ 8.1 ಓವರ್‌ ಬೌಲ್ ಮಾಡಿ 2 ವಿಕೆಟ್ ಪಡೆದ ಕುಲ್ವಂತ್​ ಎರಡನೇ ಇನಿಂಗ್ಸ್​ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. 13.3 ಓವರ್​ಗಳಲ್ಲಿ 5 ವಿಕೆಟ್ ಕಬಳಿಸಿದರು. ಅದರಲ್ಲಿ ಸತತ ನಾಲ್ಕು ಎಸೆತಗಳಲ್ಲಿ 4 ವಿಕೆಟ್ ಪಡೆದದ್ದು ಪಂದ್ಯದ ದಿಕ್ಕನೇ ಬದಲಿಸಿತ್ತು ಮತ್ತು ಉಮಧ್ಯಪ್ರದೇಶಕ್ಕೆ ಗೆಲುವನ್ನು ದಕ್ಕಿಸಿತ್ತು.

    ಇದನ್ನೂ ಓದಿ: ಕತಾರ್​ನಿಂದ ನೌಕಾಪಡೆಯ ಮಾಜಿ ಅಧಿಕಾರಿಗಳ ಬಿಡುಗಡೆಯಲ್ಲಿ ನನ್ನ ಪಾತ್ರವಿಲ್ಲ: ಶಾರುಖ್​ ಖಾನ್​

    ರಣಜಿ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೂರನೇ ವೌಲರ್​ ಎಂಬ ಹೆಗ್ಗಳಿಕೆಗೆ ಕುಲ್ವಂತ್​ ಪಾತ್ರರಾದರು. 1988ರಲ್ಲಿ ಶಂಕರ್ ಸೈನಿ, 2018ರಲ್ಲಿ ಮೊಹಮ್ಮದ್ ಮುಧಾಸಿರ್ 4 ಎಸೆತಗಳಲ್ಲಿ 4 ವಿಕೆಟ್​ ಪಡೆಯುವ ಮೂಲಕ ದಾಖಲೆ ಬರೆದಿದ್ದರು. ಈಗ ಕುಲ್ವಂತ್ ಈ ಪಟ್ಟಿಯಲ್ಲಿ ಮೂರನೇ ಬೌಲರ್ ಆಗಿದ್ದಾರೆ. ರಣಜಿಯಲ್ಲಿ 4 ಎಸೆತಗಳಲ್ಲಿ 4 ವಿಕೆಟ್ ಪಡೆದು ಸಂಚಲನ ಮೂಡಿಸಿದ್ದಾರೆ.

    2018 ಹಾಗೂ 19ರಲ್ಲಿ ರಾಯಲ್​ ಚಾಲೆಂಜರ್ಸ್​ ತಂಡವನ್ನು ಪ್ರತಿನಿಧಿಸಿದ್ದ ಕುಲ್ವಂತ್​ 5 ಪಂದ್ಯಗಳಿಂದ 3 ವಿಕೆಟ್​ ಪಡೆದಿದ್ದರು. ಆ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಕುಲ್ವಂತ್ ಅವರನ್ನು ಬಿಡುಗಡೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts