More

    ಸಣ್ಣ ಉದ್ಯಮ ಕ್ಷೇತ್ರಕ್ಕೂ ದೈತ್ಯರ ಆಗಮನ

    ಹರಿಹರ: ದ್ಯೆತ್ಯ ಕಂಪನಿಗಳು ಸಣ್ಣ ವ್ಯಾಪಾರ, ಉದ್ಯಮ ಕ್ಷೇತ್ರ ಪ್ರವೇಶದಿಂದ ಕುಲ ಕಸಬು ವೃತ್ತಿ ನಿರತರ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ ಎಂದು ಬೀದರ್‌ನ ಸಾಮಾಜಿಕ ಕಾರ್ಯಕರ್ತ ವೀರಣ್ಣ ಬ್ಯಾಗೋಟಿ ಹೇಳಿದರು.

    ನಗರದ ದೇವಸ್ಥಾನ ರಸ್ತೆಯ ಶ್ರೀ ಮಂಜುನಾಥ ಹೋಟೆಲ್ ಆವರಣದಲ್ಲಿ ಬುಧವಾರ ಅಭಾವಿಪ ಸಮ್ಮಿಲನ ಬಳಗ ಚಿತ್ರದುರ್ಗ, ದಾವಣಗೆರೆ ಘಟಕಗಳು ಆಯೋಜಿಸಿದ್ದ ಕುಲ ಕಸಬು ವೃತ್ತಿ ನಿರತರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.

    ಕುಂಬಾರಿಕೆ, ಕಮ್ಮಾರಿಕೆ, ಬಡಗಿ, ಟೈಲರ್, ಕಿರಾಣಿ, ಹೋಟಲ್, ತಂಪು ಪಾನೀಯ, ಆಭರಣ ತಯಾರಿಕೆ ಸೇರಿ ನಾನಾ ವೃತ್ತಿಗಳಲ್ಲಿ ಅಪಾರ ಸಂಖ್ಯೆಯ ಜನರು ಜೀವನ ಕಟ್ಟಿಕೊಂಡಿದ್ದರು. ವಿಮಾನ, ಕಾರು, ಯಂತ್ರೋಪಕರಣ ಉತ್ಪಾದನೆ, ನಿರ್ಮಾಣದಂತಹ ಬೃಹತ್ ಬಂಡವಾಳ ಹೂಡಿಕೆ ಬಯಸುವ ಕ್ಷೇತ್ರದಲ್ಲಿದ್ದ ಕಂಪನಿ, ಕಾರ್ಪೋರೆಟ್ ಉದ್ಯಮಿಗಳೂ ಈಗ ಸಣ್ಣ ಸಣ್ಣ ಉದ್ಯಮ ಕ್ಷೇತ್ರಕ್ಕೂ ಪ್ರವೇಶಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

    ಹೋಬಳಿ, ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲೂ ತಮ್ಮ ಅಂಗಡಿಗಳನ್ನು ತೆರೆಯುತ್ತಿರುವುದರಿಂದ ಲಕ್ಷಾಂತರ ಕುಟುಂಬಗಳಿಗೆ ಆಪತ್ತು ಬಂದಿದೆ. ಇಂತಹ ಸಂಕಷ್ಟದ ಸಮಯದಲ್ಲೂ ತಮ್ಮ ವೃತ್ತಿಗಳಲ್ಲಿ ತೊಡಗಿರುವವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಸಮ್ಮಿಲನ ಬಳಗದಿಂದ ನಡೆಯುತ್ತಿದೆ. ಮೂರ‌್ನಾಲ್ಕು ಪೀಳಿಗೆಯಿಂದ ವೃತ್ತಿ ನಿರತರಾಗಿದ್ಧವರಲ್ಲಿ ಕೆಲವರನ್ನು ಗುರುತಿಸಿ ಸತ್ಕರಿಸಲಾಗುತ್ತಿದೆ ಎಂದರು.

    ವಿವಿಧ ಕ್ಷೇತ್ರದ ವೃತ್ತಿ ನಿರತರಾದ ಕುಂಬಾರ ಬಸಪ್ಪ, ಕುಲದೀಪ್ ಶ್ರೇಷ್ಠಿ, ಪ್ರದೀಪ್ ಶ್ರೇಷ್ಠಿ, ಸುಬ್ಬಣ್ಣ ಶ್ರೇಷ್ಠಿ, ನಾಗರಾಜ್ ಕಠಾರೆ, ದೀಪಕ್ ಮೆಹರ‌್ವಾಡೆ, ಜಿ.ಬಿ. ಶಾಂತರಾಜ್, ರಾಜು, ತಿಪ್ಪೇಶ್, ಕೆ.ಬಿ.ಗಣೇಶ್, ಚನ್ನವೀರಾಚಾರ್, ಆನಂದ್, ಮೌನೇಶಾಚಾರ್, ವಿಜಯ್ ಹಾಗೂ ಅವರ ಕುಟುಂಬದವರನ್ನು ಸತ್ಕರಿಸಿ, ನೆನಪಿನ ಕಾಣಿಕೆ ನೀಡಲಾಯಿತು.
    ಸಮ್ಮಿಲನ ಬಳಗದ ಚಿತ್ರದುರ್ಗದ ಉದಯರವಿ, ದಾವಣಗೆರೆಯ ಬದರಿನಾರಾಯಣ, ಎಲ್.ಎನ್. ಕಲ್ಲೇಶ್, ಕೆ.ಟಿ.ನಾಗರಾಜ್, ಮಾಲತೇಶ್ ಜಿ.ಭಂಡಾರೆ, ನ್ಯಾಯವಾದಿ ಬಿ. ನಾಗರಾಜ್, ಟಿ. ಇನಾಯತ್, ಜಯದೇವ, ಶೇಖರಪ್ಪ, ಸಂಘಮಿತ್ರ, ಶರತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts