More

    ಕಾಯ್ದಿರಿಸಿದ ಸೇವಾರ್ಥಿಗಳಿಗೆ ಸರ್ಪಸಂಸ್ಕಾರ ಅವಕಾಶ

    ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ.14ರಂದು ಸರ್ಪಸಂಸ್ಕಾರ, ನಾಗಪ್ರತಿಷ್ಠಾಪನೆ, ಆಶ್ಲೇಷ ಬಲಿ, ಮಹಾಪೂಜೆ, ಪಂಚಾಮೃತಾಭಿಷೇಕ ಸೇವೆಗಳು ಪ್ರಾರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದರು. ರಜಾದಿನ ಮತ್ತು ಶಾಲಾ, ಕಾಲೇಜುಗಳಿಗೆ ರಜೆ ಇರುವುದರಿಂದ ಭಕ್ತರ ಸಂಖ್ಯೆ ಹೆಚ್ಚಿತ್ತು.

    ಬೆಳಗ್ಗೆ 6.30ರಿಂದ 11.30, ಮಧ್ಯಾಹ್ನ 12.15ರಿಂದ 1.30, ಮಧ್ಯಾಹ್ನ 3.30ರಿಂದ ರಾತ್ರಿ 7, 7.30ರಿಂದ 8ರವರೆಗೆ ಭಕ್ತರಿಗೆ ದೇವರ ದರುಶನ ಅವಕಾಶ ಕಲ್ಪಿಸಲಾಗಿದೆ. ಸರ್ಪಸಂಸ್ಕಾರ ಸೇವೆಯನ್ನು ಆನ್‌ಲೈನ್, ನಗದು, ಡಿಡಿ, ಎಂಒ ಮೂಲಕ ಕಾದಿರಿಸಿದ ಸೇವಾಕರ್ತರಿಗೆ ಮಾತ್ರ ಪ್ರಸ್ತುತ ಅವಕಾಶ ಕಲ್ಪಿಸಲಾಗುತ್ತದೆ. ಒಂದು ದಿನದಲ್ಲಿ ಬುಕಿಂಗ್ ಮಾಡಿದ 30 ಸೇವಾಕರ್ತರಿಗೆ ಮಾತ್ರ ಅವಕಾಶ. ಹೊಸದಾಗಿ ಸರ್ಪಸಂಸ್ಕಾರ ಸೇವೆಗೆ ಸದ್ಯಕ್ಕೆ ಅವಕಾಶ ಇಲ್ಲ. 30 ಭಕ್ತರಿಗೆ ಮಾತ್ರ ನಾಗಪ್ರತಿಷ್ಠಾಪನೆ ಸೇವೆ ಅವಕಾಶ.

    ಪ್ರತಿದಿನ ಎರಡು ಪಾಳಿಯಲ್ಲಿ ಆಶ್ಲೇಷ ಬಲಿ ಸೇವೆಯನ್ನು ನಡೆಸಲಾಗುವುದು. ಬೆಳಗ್ಗೆ ಮಾತ್ರ ಆಶ್ಲೇಷ ಬಲಿ ನಡೆಯಲಿದ್ದು, 60 ಸೇವೆಗಳಿಗೆ ಅವಕಾಶವಿದೆ. ಮಹಾಪೂಜೆ, ಪಂಚಾಮೃತಾಭಿಷೇಕ ಸೇವೆಗಳಿಗೆ 10 ಟಿಕೆಟ್‌ಗಳಿಗೆ ಅವಕಾಶ ನೀಡಲಾಗಿದ್ದು, ಇಬ್ಬರು ಮಾತ್ರ ಭಾಗವಹಿಸಬಹುದು. ಕರೊನಾ ಮುಂಜಾಗ್ರತಾ ಕ್ರಮ ಅನುಸರಿಸಿಕೊಂಡು ಸೇವೆಗಳನ್ನು ನೆರವೇರಿಸಲು ಅವಕಾಶ ನೀಡಲಾಗಿದೆ ಎಂದು ದೇವಳದ ಆಡಳಿತಾಧಿಕಾರಿ, ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ತಿಳಿಸಿದ್ದಾರೆ.

    ಸೇವೆಗಳ ವಿವರ
    ಸರ್ಪಸಂಸ್ಕಾರ-ದಿನಕ್ಕೆ 30 ಸೇವೆ, ನಾಗಪ್ರತಿಷ್ಠಾಪನೆ-ದಿನಕ್ಕೆ 30 ರಶೀದಿ, ಆಶ್ಲೇಷ ಬಲಿ-ಒಂದು ಪಾಳಿಯಲ್ಲಿ 30 ರಶೀದಿಯಂತೆ ಎರಡು ಪಾಳಿಗಳಲ್ಲಿ ಒಟ್ಟು 60, ಸಮಯ: ಬೆಳಗ್ಗೆ 7ರಿಂದ 8.30 ಹಾಗೂ ಬೆಳಗ್ಗೆ 9ರಿಂದ 10.30ರ ತನಕ. ಇಡೀ ದಿನದ ಮಹಾಪೂಜೆ, ಮಧ್ಯಾಹ್ನದ ಮಹಾಪೂಜೆ, ಪವಮಾನಯುಕ್ತ ಪಂಚಾಮೃತಾಭಿಷೇಕ, ಕಲಶಪೂಜಾಯುಕ್ತ ಪಂಚಾಮೃತಾಭಿಷೇಕ ಸೇವೆಗಳಿಗೆ-1 ದಿನಕ್ಕೆ 10 ರಶೀದಿ, ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಕ್ಷೀರಾಭಿಷೇಕ, ಕಾರ್ತಿಕ ಪೂಜೆ ಸೇವೆಗಳು ಈ ಹಿಂದಿನಂತೆ ನೆರವೇರಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts