More

    ಶೌಚಗೃಹ ಬಳಕೆಗೆ ನೀಡದಿದ್ದರೆ ತಂಬಿಗೆ ಚಳವಳಿ ನಡೆಸುವುದಾಗಿ ಎಚ್ಚರಿಸಿದ ದಸಂಸ

    ಕುಕನೂರು: ಪಟ್ಟಣದ 8,9,11,12ನೇ ವಾರ್ಡ್‌ನ ನಿವಾಸಿಗಳಿಗಾಗಿ ನಿರ್ಮಿಸಿರುವ ಸುಲಭ ಶೌಚಗೃಹಗಳನ್ನು ಕೂಡಲೇ ಸಾರ್ವಜನಿಕ ಬಳಕೆಗೆ ನೀಡಬೇಕು. ಇಲ್ಲದಿದ್ದರೆ ಶೀಘ್ರವೇ ತಂಬಿಗೆ ಚಳವಳಿ ಮಾಡಲಾಗುವುದು ಎಂದು ಪಟ್ಟಣದ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಪಪಂ ಮುಖ್ಯಾಧಿಕಾರಿ ಶ್ರೀಶೈಲಗೌಡಗೆ ಮಂಗಳವಾರ ಮನವಿ ಸಲ್ಲಿಸಿತು.

    ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಉಸ್ತುವಾರಿ ಶರಣಪ್ಪ ಛಲವಾದಿ ಹಾಗು ಸಮಿತಿಯ ತಾಲೂಕು ಸಂಚಾಲಕ ಗವಿಸಿದ್ದಪ್ಪ ಶಲೂಡಿ ಮಾತನಾಡಿ, 2016- 17ನೇ ಸಾಲಿನ ಗಿರಿಜನ ಉಪ ಯೋಜನೆಯಡಿ ಒಂದು ಕೋಟಿ ರೂ. ಅನುದಾನದಲ್ಲಿ 8, 9, 11 ಹಾಗೂ 12ನೇ ವಾರ್ಡ್‌ನ ಜನರಿಗೆ ಅನುಕೂಲಕ್ಕಾಗಿ ಸುಲಭ ಶೌಚಗೃಹ ನಿರ್ಮಿಸಿದ್ದಾರೆ. ಆದರೆ, ಶೌಚಗೃಹಗಳನ್ನು ಇದುವರೆಗೂ ಸಾರ್ವಜನಿಕ ಬಳಕೆ ನೀಡಿಲ್ಲ. ಇದರಿಂದ ಶೌಚಕ್ಕೆ ಬಯಲೇ ಗತಿ ಆಗಿದೆ. ಕಟ್ಟಡ ನಿರ್ಮಿಸಿ ನಾಲ್ಕು ವರ್ಷ ಗತಿಸಿದರೂ ಇನ್ನೂ ಮೂಲ ಸೌಲಭ್ಯ ಅಳವಡಿಸಿಲ್ಲ. ಕೇಳಿದರೆ ಅಧಿಕಾರಿಗಳು ಬರೀ ಹಾರಿಕೆ ಉತ್ತರ ನೀಡುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ಸಾರ್ವಜನಿಕ ಬಳಕೆಗೆ ಶೌಚಗೃಹ ನೀಡದಿದ್ದರೆ ಪಪಂ ಮುಂದೆ ತಂಬಿಗೆ ಹಿಡಿದು ಪ್ರತಿಭಟಿಸಲಾಗುವುದು ಎಂದರು.

    ಸಮಿತಿ ಸದಸ್ಯರಾದ ನೀಲಪ್ಪ ವೀರಾಪೂರ, ಪ್ರವೀಣ ಬಂಕದಮನಿ, ಸುರೇಶ ಕೊಪ್ಪಳ, ಕಿರಣ ಛಲವಾದಿ, ಮಂಜುನಾಥ ಕೊಪ್ಪಳ, ವೀರೇಶ ಬಂಕದಮನಿ, ಕುಮಾರ ಕಾಳಿ, ಲಾಲು ಜಕ್ಲಿ, ಸುದೀಪ ಕಾಳಿ, ಮಂಜುನಾಥ ಗುಡದಳ್ಳಿ, ಶಂಕರ ಭಂಡಾರಿ, ರವಿಕುಮಾರ ಬಂಡಿಹಾಳ, ಗವಿಸಿದ್ದಪ್ಪ ಬಂಕದಮನಿ, ಶಶಿಕುಮಾರ ಭಜಂತ್ರಿ, ವಾಸೀಮ್, ನಿರಂಜನ ಕಲ್ಮನಿ, ರಮೇಶ ಘಾಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts