More

    ಜೋಕಪ್ಪನ ಪೂಜೆ ನಡೆದಿದೆ ಜೋರು

    ಕುಕನೂರು: ಭಾದ್ರಪದ ಶುಕ್ಲ ಅಷ್ಟಮಿಯಿಂದ ತಾಲೂಕಿನಾದ್ಯಂತ ಜೋಕಪ್ಪ (ಜೋಕುಮಾರ ಸ್ವಾಮಿ)ನ ಪೂಜೆ ನಡೆಯುತ್ತಿದೆ. ತಳಕಲ್ ಗ್ರಾಮದ ಒಂದು ಸಮುದಾಯದ ಮನೆಯಲ್ಲೇ ಹುಟ್ಟುವ ಜೋಕಪ್ಪನನ್ನು ತಳಕಲ್ ಗ್ರಾಮದ ಲಲಿತಮ್ಮ, ಹುಲಿಗೆಮ್ಮ, ಶಾರದಾ ಹಾಗೂ ಪಾರಮ್ಮ ಇತರರು ಅಲ್ಲಿಂದ ತಳಬಾಳ, ಭಾನಾಪುರ, ಲಕಮಾಪುರ, ಚಿತ್ತಾಪುರ, ಕೋಮಲಾಪುರ, ಅಡವಿಹಳ್ಳಿ ಸುತ್ತ ಏಳು ಗ್ರಾಮಗಳಿಗೆ ಮಣ್ಣಿನಿಂದ ತಯಾರಿಸಿ ದೊಡ್ಡ ಪುಟ್ಟಿಯಲ್ಲಿ ಇಟ್ಟುಕೊಂಡು ಮನೆ ಮನೆ ಹೋಗುತ್ತಿದ್ದಾರೆ.

    ಜೋಕಪ್ಪನನ್ನು ಹೊತ್ತುಕೊಂಡು ಮನೆ ಮನೆಗೆ ಹೋಗಿ, ‘ಅಡ್ಡಡ್ಡ ಮಳೆ ಬಂದು ದೊಡ್ಡದೊಡ್ಡ ಕೆರೆ ತುಂಬಿ…’ ಎಂಬ ಜಾನಪದ ಹಾಡನ್ನು ಹಾಡುತ್ತ, ಕೆರೆ, ಹಳ್ಳಗಳು ತುಂಬಿ, ರೈತರ ಬದುಕು ಹಸನಾಗಲಿ, ಊರಿಗೆ ಮಾರಿ ಬಾರದಿರಲಿ, ಸಮೃದ್ಧ ಬೆಳೆ ಬರಲಿ ಎಂದು ಹಾರೈಸುತ್ತಿದ್ದಾರೆ.

    ಮನೆ ಮುಂದೆ ಜೋಕಪ್ಪನನ್ನು ರೈತ ಕುಟುಂಬದ ಮಹಿಳೆಯರು ಪೂಜೆ ಮಾಡುತ್ತಿದ್ದು, ಜೋಳ, ಎಣ್ಣೆ, ಬೆಣ್ಣೆ ನೈವೇದ್ಯ ನೀಡುತ್ತಿದ್ದಾರೆ. ಜೋಳದಿಂದ ತಯಾರಿಸಿದ ಸಂಗಟಿಯನ್ನು ಎಲೆಯಲ್ಲಿ ಇಟ್ಟು ಕೊಡುತ್ತಿದ್ದು, ಇದನ್ನು ಜಮೀನಿನಲ್ಲಿ ಹಾಕಿದರೆ ಉತ್ತಮ ಬೆಳೆ ಬರುತ್ತದೆ ಎನ್ನುವ ನಂಬಿಕೆ ನಡೆದುಕೊಂಡು ಬಂದಿದೆ.

    ಜೋಕಪ್ಪ ಅಷ್ಟಮಿ ಹುಟ್ಟಿ, ಹುಣ್ಣಿಮೆ ದಿನ ಸಾಯುತ್ತಾನೆ. ನಡುವಿನ ಏಳು ದಿನ ನಾನಾ ಗ್ರಾಮಗಳ ಮನೆ ಮನೆಗೆ ಹೋಗುವ ಸಂಪ್ರದಾಯವಿದೆ. ಜಾನಪದ ಹಾಡನ್ನು ಹಾಡುತ್ತ ರೈತರಿಗೂ, ಊರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಲಾಗುತ್ತದೆ. ಈ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡು ಬಂದಿದ್ದು, ನಾವು ಮುಂದುವರಿಸುತ್ತಿದ್ದೇವೆ.
    | ಪಾರಮ್ಮ, ತಳಕಲ್ ಗ್ರಾಮದ ಜೋಕಪ್ಪನ ಭಕ್ತೆ

    ಜೋಕಪ್ಪನ ಬಗ್ಗೆ ರೈತರಲ್ಲಿ ಭಕ್ತಿ, ನಂಬಿಕೆ ಹೆಚ್ಚಿದೆ. ಆತ ಹುಟ್ಟಿದ ನಂತರ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತವೆ ಎನ್ನುವ ವಿಶ್ವಾಸವಿದೆ. ಊರಿಗೆ ಒಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಇದರಿಂದ ಗ್ರಾಮದಲ್ಲಿ ಜೋಕಪ್ಪ ಬಂದರೆ ಎಲ್ಲರೂ ಪೂಜೆ ಸಲ್ಲಿಸಿ, ಕಾಣಿಕೆ ನೀಡುತ್ತಿದ್ದಾರೆ. ಇವರ ನಿರೀಕ್ಷೆಯಂತೆ ಐದು ದಿನಗಳಿಂದ ಮಳೆ ಸಮೃದ್ಧವಾಗಿ ಮಳೆ ಬರುತ್ತಿದೆ.
    | ವಿರೂಪಾಕ್ಷಪ್ಪ ಅಂಗಡಿ, ರೈತ, ಭಾನಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts