More

    ಗ್ರಾಮ ದಳಪತಿಗಳಿಗೆ ಗೌರವಧನ ನೀಡಿ: ಸಂಘದ ಅಧ್ಯಕ್ಷ ಶರಣಬಸವನಗೌಡ ಹೊರಪೇಟೆ ಒತ್ತಾಯ

    ಕುಕನೂರು: ಪ್ರತಿ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುವ ದಳಪತಿಗಳಿಗೆ ಗೌರವಧನ ನೀಡಬೇಕು ಎಂದು ಅಖಿಲ ಕರ್ನಾಟಕ ಪೊಲೀಸ್ ದಳಪತಿಗಳ ಸಂಘದ ಅಧ್ಯಕ್ಷ ಶರಣಬಸವನಗೌಡ ಹೊರಪೇಟೆ ಒತ್ತಾಯಿಸಿದರು.

    ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಗ್ರಾಮರಕ್ಷಕ ದಳಪತಿಗಳಿಗೆ ಸರ್ಕಾರ ಕನಿಷ್ಠ ಗೌರವಧನ ನೀಡುತ್ತಿಲ್ಲ. ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಗ್ರಾಮದ ವಿವಿಧ ಸಮಸ್ಯೆಗಳಿಗೆ ಸ್ಪಂದಿಸುತ್ತ ಬರಲಾಗುತ್ತಿದೆ. ಗ್ರಾಮಗಳಲ್ಲಿ ಕುಟುಂಬ ಕಲಹ, ಪಂಚನಾಮೆ, ಜಾತ್ರೆ, ಸಂಭ್ರಮ, ಇತರ ಕಾರ್ಯಕ್ರಮಗಳಲ್ಲಿ ಯಾವುದೇ ಗಲಾಟೆ ನಡೆಯದಂತೆ ದಳಪತಿಗಳು ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.

    ಗ್ರಾಮದಲ್ಲಿ ಯಾರದೇ ನ್ಯಾಯಾಲಯದ ವ್ಯಾಜ್ಯವಿದ್ದಲ್ಲಿ ನೋಟಿಸ್ ನೀಡಲು ಬಂದರೆ ಮೊದಲು ದಳಪತಿಗಳ ಮನೆಗೆ ಹೋಗುತ್ತಾರೆ. ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ 5500 ದಳಪತಿಗಳಿದ್ದು, 1996ರ ಮೇ 23ರಂದು ರಾಜ್ಯ ಸರ್ಕಾರ ಗ್ರಾಮ ದಳಪತಿಗಳ ಹುದ್ದೆ ಸಕ್ರಮಗೊಳಿಸಿತ್ತು. ಗೌರವಧನ ನೀಡಬೇಕೆಂಬ ಗೆಜೆಟ್ ಸಹ ಮಂಡಿಸಿತ್ತು. 2002ರಲ್ಲಿ ಕೋರ್ಟ್ ಮೊರೆ ಹೋಗಲಾಗಿತ್ತು. ಕೋರ್ಟ್ ಸಹ ಗೌರವಧನ ನೀಡಲು ಸೂಚಿಸಿತ್ತು. ಆದರೆ ಈವರೆಗೆ ದಳಪತಿಗಳಿಗೆ ಗೌರವಧನ ದೊರಕಿಲ್ಲ. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

    ಸಂಘದ ಕುಕನೂರು ತಾಲೂಕು ಅಧ್ಯಕ್ಷ ಸಂಗಯ್ಯ ಪೂಜಾರ, ಯಲಬುರ್ಗಾ ಅಧ್ಯಕ್ಷ ಶರಣಗೌಡ ಪೊಲೀಸ್ ಪಾಟೀಲ್, ದಳಪತಿಗಳಾದ ಶಾಂತವೀರಯ್ಯ ಲಕಮಾಪುರಮಠ, ವೀರಯ್ಯ ತೋಂಟದಾರ್ಯಮಠ, ಹುಸೇನಸಾಬ್ ಸಂಕನೂರು ಗವಿಸಿದ್ದನಗೌಡ ಕೊಪ್ಪದ, ಮಹಾದೇವಪ್ಪ ಲಿಂಗನಬಂಡಿ, ಗುರಪ್ಪ ಮ್ಯಾಗೇರಿ, ಶಂಕರಗೌಡ ತಳಬಾಳ, ಮಹ್ಮದ್ ಇಸ್ಮಾಯಿಲ್‌ಸಾಬ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts