More

    ದುಡಿಯುವ ಕೈಗಳನ್ನು ಗೌರವಿಸಿ

    ಕುಕನೂರು: ಮಾನವನು ಮನುಷ್ಯತ್ವವನ್ನು ಅಳವಡಿಸಿಕೊಂಡಾಗ ಮಾತ್ರ ಶರಣ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಯಲಬುರ್ಗಾದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಮನುಷ್ಯತ್ವ ಅಳವಡಿಸಿಕೊಂಡಾಗ ಮಾತ್ರ ಶರಣ ಸಂಸ್ಕೃತಿ ಉಳಿಯಲು ಸಾಧ್ಯ

    ಪಟ್ಟಣದ ಮುಂಡರಗಿ ಅನ್ನದಾನೇಶ್ವರ ಶಾಖಾಮಠದಲ್ಲಿ ಪೂಜ್ಯರ ಪ್ರಥಮ ವರ್ಷದ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಪ್ರಥಮ ಶರಣ ಸಂಸ್ಕೃತಿ ಉತ್ಸವದ ಎರಡನೇ ದಿನದ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ದುಡಿಯುವ ಕೈಗಳನ್ನು ಗೌರವಿಸಂತಾಗಬೇಕು. ದೇವರು ನೀಡಿದ ಬದುಕನ್ನು ಸ್ಮರಿಸುವುದು ಅಗತ್ಯ. ಸಮಾಜದಲ್ಲಿ ನೊಂದವರ ಕಲ್ಯಾಣಕ್ಕಾಗಿ ಒಂದಿಷ್ಟು ಸೇವೆ ಮಾಡಬೇಕು. ದಾನ ಧರ್ಮದ ಗುಣಗಳೇ ನಮ್ಮನ್ನು ಎತ್ತರಕ್ಕೆ ಬೆಳಸುತ್ತವೆ ಎಂದರು.

    ಇದನ್ನೂ ಓದಿ: ‘ಪ್ರೊಡಕ್ಷನ್ ನಂ.1’…ಅಯೋಧ್ಯೆ ರಾಮೋತ್ಸವ ದಿನದಂದು ತಂದೆಯಾಗಿ ಬಡ್ತಿ ಪಡೆದ ಖ್ಯಾತ ನಟ

    ಮೈನಹಳ್ಳಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸರ್ವ ಜನಾಂಗದ ಕಲ್ಯಾಣಕ್ಕಾಗಿ ನಾಡಿನ ವೀರಶೈವ ಮಠಗಳು ಅಪಾರ ಸೇವೆ ಸಲ್ಲಿಸಿವೆ. ವೀರಶೈವ ಮಠಾಧೀಶರು ನಾಡಿನ ಆಸ್ತಿ. ಅವರನ್ನು ಉಳಿಸಿಕೊಂಡು ಹೋಗುವ ಕಾರ್ಯ ಭಕ್ತರು ಮಾಡಬೇಕು. ಭಕ್ತರೇ ಮಠದ ಮಾಲೀಕರು ಎಂಬುದನ್ನು ನಾವು ಒಪ್ಪಿಕೊಳ್ಳಬೇಕು ಎಂದರು.

    ಯಲಬುರ್ಗಾದ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕುಕನೂರ ಶ್ರೀಗಳು ಕಿರಿಯ ವಯಸ್ಸಿನಲ್ಲಿ ಅಗಾಧವಾದ ಕಾರ್ಯ ಮಾಡಿದ್ದಾರೆ. ಅವರ ಎಲ್ಲ ಕಾರ್ಯಗಳಿಗೂ ಮುಂಡರಗಿ ಪೂಜ್ಯರ ಆಶೀರ್ವಾದ ಮತ್ತು ಕ್ರಿಯಾಶೀಲತೆ ಕಾರಣವಾಗಿದೆ. ಅವರು ಯಾವುದೇ ಕಾರ್ಯ ಮಾಡಿದರೂ ಭಕ್ತರ ಕಲ್ಯಾಣಕ್ಕಾಗಿ ಎಂದರು.

    ಮಹಾದೇವ ಸ್ವಾಮೀಜಿ ಅವರು ಸಾನಿಧ್ಯ ವಹಿಸಿದರು. ಪ್ರಮುಖರಾದ ಶರಣಪ್ಪ ಹ್ಯಾಟಿ, ಉಮೇಶ ಯತ್ತಿನಮನಿ, ರಾಮಣ್ಣ ಮುಂದಲನಿ, ಶಿವಪ್ಪ ಸಂದಿಮನಿ, ಶೇಕಪ್ಪ ಕಂಬಳಿ, ಮಲ್ಲಪ್ಪ ಚಳಮಠದ, ವೀರಯ್ಯ ಉಳಾಗಡ್ಡಿಮಠ, ಮ್ಯಾಳಿ ಈರಪ್ಪ, ರಾಮಣ್ಣ ಯಡೋಣಿ, ವೀರಯ್ಯ ತೋಂಟದಾರ್ಯಮಠ, ಗದಿಗೆಪ್ಪ ಪವಾಡಶೆಟ್ಟಿ, ಕರಬಸಯ್ಯ ಬಿನ್ನಾಳ, ಲಕ್ಷ್ಮಣ ಕಾಳಿ, ಬಸಪ್ಪ ಈಬೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts