More

    ಕಾಯಕ ನಿಧಿ ಯೋಜನೆ ಮುಂದುವರಿಸಿ: ಹಮಾಲರು-ಕಾರ್ಮಿಕರ ಸಂಘ ಒತ್ತಾಯ

    ಕುಕನೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶ್ರೀರುದ್ರಮುನೀಶ್ವರ ಹಮಾಲರು ಮತ್ತು ಕಾರ್ಮಿಕರ ಸಂಘ ಹಾಗೂ ಹಮಾಲಿ ಕಾರ್ಮಿಕ ಫೆಡರೇಷನ್ ಪಟ್ಟಣದ ಎಪಿಎಂಸಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ, ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿಗೆ ಮನವಿ ಸಲ್ಲಿಸಿತು.

    ಹಮಾಲರಿಗಾಗಿ ಈ ಹಿಂದೆ ಆರಂಭಿಸಲಾದ ಕಾಯಕ ನಿಧಿ ಯೋಜನೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಸರ್ಕಾರ ಹಾಗೂ ಎಪಿಎಂಸಿ ಸಮಿತಿಗಳಿಂದ ನಿರಂತರ ಹಣಕಾಸು ಸಹಾಯ ಪಡೆದು ವೈದ್ಯಕೀಯ ಮರು ಪಾವತಿ ಯೋಜನೆ ಮುಂದುವರಿಸಬೇಕು. 60 ವರ್ಷದ ನಂತರ ಹಮಾಲಿ ಕಾರ್ಮಿಕರಿಗೆ ಒಂದು ಬಾರಿ ಕನಿಷ್ಠ 1 ಲಕ್ಷ ರೂ. ಇಡುಗಂಟು ನೀಡಬೇಕು. ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಉಚಿತವಾಗಿ ಎಲ್ಲ ಕಾರ್ಮಿಕರಿಗೆ ವಿಸ್ತರಿಸಬೇಕು. ವಿವಿಧ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಜಾಗಗಳನ್ನು ಗುರುತಿಸಿ, ಲೈಸೆನ್ಸ್ ಹೊಂದಿದ ವಸತಿ ರಹಿತ ಹಮಾಲಿ ಕಾರ್ಮಿಕರಿಗೆ ಸರ್ಕಾರ ಉಚಿತವಾಗಿ ವಸತಿ ಯೋಜನೆ ರೂಪಿಸಬೇಕು. ಲೋಡಿಂಗ್, ಅನ್‌ಲೋಡಿಂಗ್‌ಗೆ ಕನಿಷ್ಠ ವೇತನ ನಿಗದಿಪಡಿಸಬೇಕು. ಹಮಾಲಿ ಸಂಘಗಳ ಶಿಫಾರಸಿನಂತೆ ಹೊಸ ಲೈಸೆನ್ಸ್ ಮತ್ತು ನವೀಕರಣ ಮಾಡಿಕೊಡಬೇಕು. ಮಾಲೀಕರಿಂದ ಶಿಫಾರಸು ಪತ್ರ ತರಲು ಒತ್ತಡ ಹಾಕದೆ, ಮಹಿಳಾ ಹಮಾಲರಿಗೆ ಪರವಾನಗಿ ನೀಡಬೇಕು. ಮಿಲ್-ಗೋದಾಮು, ವೇರ್‌ಹೌಸ್, ನಗರ ಗ್ರಾಮೀಣ ಬಜಾರ, ಬಸ್ ನಿಲ್ದಾಣ, ಬಂದರು ಮತ್ತು ಸರ್ಕಾರಿ ನಿಗಮಗಳ ಹಮಾಲಿ ಕಾರ್ಮಿಕರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

    ಸಂಘದ ಅಧ್ಯಕ್ಷ ನಿಂಗಪ್ಪ ಗೊರ್ಲೆಕೊಪ್ಪ, ಕಾರ್ಮಿಕರಾದ ದೊಡ್ಡ ಈರಪ್ಪ ಆರಬಳ್ಳಿನ, ನಾಗರಾಜ, ದೇವಪ್ಪ, ಶರಣಪ್ಪ, ತಿರುಪತಿ, ಗಾಳೆಪ್ಪ, ಹನುಮಪ್ಪ, ಮಲ್ಲಪ್ಪ, ತಿಪ್ಪಣ್ಣ, ಹನಮಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts