More

    ಅಂತರ್ಜಲ ಅಭಿವೃದ್ಧಿಗೆ ನರೇಗಾದಲ್ಲಿ ಆದ್ಯತೆ – ತಾಪಂ ಇಒ ಸೋಮಶೇಖರ ಬಿರಾದಾರ ಹೇಳಿಕೆ

    ಕುಕನೂರು: ಈ ಬಾರಿಯ ನರೇಗಾ ಯೋಜನೆಯಡಿ ತಾಲೂಕಿನಲ್ಲಿರುವ ಅಂತರ್ಜಲ ಮೂಲಗಳ ಅಭಿವೃದ್ಧಿಪಡಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ವಿಶೇಷ ಒತ್ತು ನೀಡಲಾಗುವುದು ಎಂದು ತಾಪಂ ಇಒ ಸೋಮಶೇಖರ ಬಿರಾದಾರ ಹೇಳಿದರು.

    ತಾಲೂಕಿನ ಮಂಡ್ಲಿಗೇರಿ, ಗಾವರಾಳ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಾಲಾ ಸುಧಾರಣೆ ಕಾಮಗಾರಿ ಸ್ಥಳದಲ್ಲಿ ದುಡಿಯೋಣ ಬಾ ಅಭಿಯಾನದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನರೇಗಾ ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳನ್ನು ಬೇಸಿಗೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಹಾಗೂ ಸ್ವಾವಲಂಬಿಗಳಾಗಿ ಬದುಕುವಂತೆ ಮಾಡುವುದು ಯೋಜನೆ ಧ್ಯೇಯ. ಏ.1 ರಿಂದ ಕಾರ್ಮಿಕರ ಶ್ರಮಕ್ಕೆ ತಕ್ಕಂತೆ 289 ರೂ. ಕೂಲಿ ಹಣ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

    ಎಲ್ಲರಿಗೂ ಮುಂದಿನ ದಿನಗಳಲ್ಲಿ ಈಗಿರುವ 275 ರೂ. ಕೂಲಿಹಣಕ್ಕಿಂತ ಹೆಚ್ಚು ಸಿಗಲಿದೆ ಎಂದರು. ಯೋಜನೆಯನ್ವಯ ಒಂದು ಕುಟುಂಬವು 100 ದಿನಗಳ ಕೆಲಸ ಮಾಡಲು ಅವಕಾಶವಿದೆ. ಬೇಸಿಗೆಯಲ್ಲಿ 60 ದಿನ ಕೆಲಸ ಮಾಡಿದಲ್ಲಿ 17,340 ರೂ. ಬರುತ್ತದೆ. ಇದರಿಂದ ಮುಂಬರುವ ಕೃಷಿ ಚಟುವಟಿಕೆಗೆ ಅಗತ್ಯವಿರುವ ಬೀಜ ಮತ್ತು ಗೊಬ್ಬರ ಖರೀದಿ, ಮಕ್ಕಳ ಶಾಲೆ, ಕಾಲೇಜು ಶುಲ್ಕ ಭರಿಸಲು ಅನುಕೂಲವಾಗಲಿದೆ ಎಂದರು. 2020-21ನೇ ಸಾಲಿನ ಮೊದಲ ಹಂತದ ಸಾಮಾಜಿಕ ಪರಿಶೋಧನಾ ಕಾರ್ಯಕ್ರಮ ನಡೆಯಿತು. ಗ್ರಾಪಂ ಪಿಡಿಒಗಳಾದ ಪರಶುರಾಮ ನಾಯಕ್, ಮಹೇಶ ಎಚ್, ಸಾಮಾಜಿಕ ಲೆಕ್ಕಪರಿಶೋಧಕ ಮಹೇಶ್ ಗೋರಟ್ಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts