More

    ಕುಕನೂರು ತಾಲೂಕಾದ್ಯಂತ ಎರಡು ದಿನಗಳಿಂದ ಉತ್ತಮ ಮಳೆ

    ಕುಕನೂರು: ತಾಲೂಕಾದ್ಯಂತ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗ್ಗೆವರೆಗೆ ಉತ್ತಮ ಮಳೆ ಸುರಿದಿದ್ದರಿಂದ ವಿವಿಧ ಕೆರೆಗಳು ಭರ್ತಿ ಆಗಿವೆ. ಅಲ್ಪ-ಸ್ವಲ್ಪ ಮಳೆಯಿಂದ ತೇವಾಂಶ ಇಲ್ಲದೆ ಬೆಳೆ ಬಾಡುತ್ತಿದ್ದವು. ಗಾಳಿಗೆ ಸರಿಯುತ್ತಿದ್ದ ಮೋಡಗಳ ಕಂಡು ರೈತ ವರ್ಗ ಆತಂಕಕ್ಕೀಡಾಗಿತ್ತು. ಶುಕ್ರವಾರ ರಾತ್ರಿ ಪುಷ್ಯ ಮಳೆ ಉತ್ತಮವಾಗಿ ಸುರಿದಿದ್ದು, ತೇವಾಂಶ ಭರಿತ ಮಳೆ ಆಗಿದೆ. ಯರೇಭಾಗದಲ್ಲಿ ಕೆರೆಗಳೇ ಕುಡಿವ ನೀರಿಗೆ ಆಸರೆಯಾಗಿದ್ದು, ಯರೇಹಂಚಿನಾಳ, ಬಿನ್ನಾಳ, ಚಿಕೇನಕೊಪ್ಪ, ಭಟಪ್ಪನಹಳ್ಳಿ, ಶಿದ್ನೇಕೊಪ್ಪ, ಸೋಂಪುರ, ಮಾಳೆಕೊಪ್ಪ, ಬನ್ನಿಕೊಪ್ಪದ ಕೆರೆಗಳು ತುಂಬಿವೆ.

    ಉತ್ತಮ ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ, ರಾತ್ರಿ ಸುರಿದ ಮಳೆ ಕೃಷಿ ಚಟುವಟಿಕೆಗೆ ಇಂಬು ನೀಡಿದೆ. ತೇವಾಂಶ ಇಲ್ಲದೆ ಬಿತ್ತನೆ ಕಾರ್ಯ ಸ್ಥಗಿತಗೊಳಿಸಿದ್ದ ಕೆಲ ರೈತರು ಕೃಷಿ ಚಟುವಟಿಕೆಗೆ ಮುಂದಾಗಿದ್ದಾರೆ. ಮೆಕ್ಕೆಜೋಳವೇ ತಾಲೂಕಾದ್ಯಂತ ಹೆಚ್ಚಾಗಿ ಬಿತ್ತನೆ ಆಗುತ್ತಿದೆ. ರೈತ ಸಂಪರ್ಕ ಕೇಂದ್ರ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಹೆಚ್ಚು ಮೆಕ್ಕೆಜೋಳ ಬೀಜ ಮಾರಾಟ ಆಗಿವೆ. ಅಲ್ಲದೆ, ಸಜ್ಜೆ ಸಹ ಮಸಾರಿ ಭಾಗದಲ್ಲಿ ಹೆಚ್ಚು ಬಿತ್ತನೆ ಆಗುತ್ತಿದೆ. ಹೆಸರು ಬೆಳೆ ಕಾಳು ಕಟ್ಟುತ್ತಿದ್ದು, ಮಳೆ ಬೆಳೆಗೆ ಪೂರಕವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts