More

    ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಬಿದ್ದ ಚಿರತೆ

    ಕುಕನೂರು: ಪಟ್ಟಣದ ಗಣಿಗಾರಿಕೆ ಪ್ರದೇಶದಲ್ಲಿ ಕೆಲವು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದ ಚಿರತೆ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಬುಧವಾರ ರಾತ್ರಿ ಬಿದ್ದಿದೆ.

    ಕುರಿಗಳನ್ನು ಹೊತ್ತೊಯ್ಯುವ ಮೂಲಕ ಜನರಲ್ಲಿ ಭಯ ಮೂಡಿಸಿತ್ತು. ಚಿರತೆಯ ಹಾವಳಿಯಿಂದ ಭಯಭೀತರಾಗಿದ್ದ ಸುತ್ತಮುತ್ತಲಿನ ಜನ ಜಮೀನುಗಳಿಗೆ ತೆರಳುವುದನ್ನು ಸಹ ಬಿಟ್ಟಿದ್ದರು. ಚಿರತೆ ಸೆರೆಯಿಂದ ಜನ ಆತಂಕದಿಂದ ನಿರ್ಭೀತರಾಗಿದ್ದಾರೆ.

    ಚಿರತೆಯನ್ನು ಕಮಲಾಪುರ ಪ್ರಾಣಿ ಸಂಗ್ರಹಾಲಯಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಕಳುಹಿಸಿದ್ದಾರೆ. ಮುನಿರಾಬಾದ್ ವಲಯ ಅರಣ್ಯಾಧಿಕಾರಿ ಎ.ಎಸ್ ಮುಲ್ಲಾ, ಯಲಬುರ್ಗಾ ಅರಣ್ಯಾಧಿಕಾರಿ ಅಂದಪ್ಪ ಕುರಿ, ಅರಣ್ಯರಕ್ಷಕ ಶರೀಫ್, ಪಿಎಸ್‌ಐ ಎನ್.ವೆಂಕಟೇಶ ಹಾಗೂ ಅರಣ್ಯಇಲಾಖೆ ಸಿಬ್ಬಂದಿ ಇದ್ದರು. ಚಿರತೆ 5 ರಿಂದ 6 ವರ್ಷದಿದ್ದು, ಗಂಡು ಚಿರತೆ ಆಗಿದೆ. ಆಹಾರ ಅರಸಿ ಕುಕನೂರು ಭಾಗಕ್ಕೆ ಬಂದಿತ್ತು ಎಂದು ಯಲಬುರ್ಗಾ ಉಪ ವಲಯ ಅರಣ್ಯಾಧಿಕಾರಿ ಅಂದಪ್ಪ ಕುರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts