More

    ಕೂಡ್ಲಿಗಿಯಲ್ಲಿ ರಾಜಕೀಯ ಮರುಹುಟ್ಟು; ಸ್ಮರಣೆ ಮಾಡಿದ ಶಾಸಕ ಎನ್.ವೈ.ಗೋಪಾಲಕೃಷ್ಣ

    71ನೇ ಹುಟ್ಟುಹಬ್ಬ ಆಚರಣೆ

    ಕೂಡ್ಲಿಗಿ: ರಾಜಕೀಯವಾಗಿ ಮರು ಹುಟ್ಟು ನೀಡಿದ ಕೂಡ್ಲಿಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುವೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.

    ತಮ್ಮ ಹುಟ್ಟೂರಾದ ರಾಂಪುರ ಗ್ರಾಮದಲ್ಲಿ ಗೋಪಾಲಕೃಷ್ಣ ಅಭಿಮಾನಿ ಬಳಗ ಕೂಡ್ಲಿಗಿ ವತಿಯಿಂದ ಭಾನುವಾರ ಆಯೋಜಿಸಿದ್ದ 71ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತಾನಾಡಿದರು. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ವಂಚಿತನಾದ ನನ್ನನ್ನು ಬಿಜೆಪಿ ಟಿಕೆಟ್ ನೀಡಿ ಕ್ಷೇತ್ರದ ಪರಿಚಯವೇ ಇಲ್ಲದ ಕೂಡ್ಲಿಗಿ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಸೂಚನೆ ನೀಡಿತು. ಕೇವಲ ಹದಿನೈದು ದಿನಗಳಲ್ಲಿ ಕ್ಷೇತ್ರದ ಜನ ನನ್ನ ಮೇಲೆ ವಿಶ್ವಾಸವಿರಿಸಿ ಆಯ್ಕೆ ಮಾಡಿದರು. ಅವರ ನಂಬಿಕೆಗೆ ಚ್ಯುತಿ ಬಾರದಂತೆ 4 ವರ್ಷಗಳಲ್ಲಿ ಮೂಲ ಸೌಕರ್ಯಗಳಾದ ಶಿಕ್ಷಣ, ಕೃಷಿ, ವಸತಿ ಮತ್ತು ಆರೋಗ್ಯ ಸೇರಿ ಹಲವು ಸೌಲಭ್ಯಗಳಿಗಾಗಿ 2 ಸಾವಿರ ಕೋಟಿ ರೂ. ಅನುದಾನ ತಂದಿರುವೆ ಎಂದರು.

    ಪಟ್ಟಣದ ಬಸ್ ಡಿಪೋ ಹಾಗೂ ಹೈಟೆಕ್ ಬಸ್ ನಿಲ್ದಾಣ ಮಾಡುವ ಗುರಿ ಇದೆ. ಅದರಂತೆ ಹಳೇ ಪೋಲಿಸ್ ಠಾಣೆ ಬದಲು ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಿರುವೆ. ಡಿವೈಎಸ್ಪಿ ಕಚೇರಿ ಮಂಜೂರಿಗೆ ಮನವಿ ಸಲ್ಲಿಸಿರುವೆ. ಮುಂದಿನ ದಿನಗಳಲ್ಲಿ ಈ ಕಾರ್ಯ ಮಾಡಲಾಗುವುದು. ಈಗಾಗಲೇ ಪಟ್ಟಣದಲ್ಲಿ ಮಿನಿ ವಿಧಾನಸೌಧ, ಪಪಂ ಕಚೇರಿ ಹಾಗೂ 710 ಕೋಟಿ ರೂ. ವೆಚ್ಚದಲ್ಲಿ 80 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾರ್ಯ ನಡೆದಿದ್ದು, ಅಂತಿಮ ಹಂತದಲ್ಲಿವೆ. ಪೂರ್ಣಗೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಲಿದ್ದಾರೆ ಎಂದರು.

    ಇದೇ ವೇಳೆ ತಾಲೂಕಿನ ಹಲವು ರಾಜಕೀಯ ಮುಖಂಡರು, ಅಧಿಕಾರಿಗಳು, ಕ್ಷೇತ್ರದ ಜನತೆ ಕಾರ್ಯಕ್ರಮಕ್ಕೆ ಆಗಮಿಸಿ ಶಾಸಕಗೆ ಶುಭಾಶಯ ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts