More

    ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡಲು ಮನವಿ

    ಕೂಡ್ಲಿಗಿ: ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಕಾಡುಗೊಲ್ಲ ಸಂಘದ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರ್‌ಗೆ ಗುರುವಾರ ಮನವಿ ಸಲ್ಲಿಸಿದರು.

    ಬುಡಕಟ್ಟು ಸಮುದಾಯಕ್ಕೆ ಸೇರಿರುವ ಕಾಡುಗೊಲ್ಲ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ತೀರ ಹಿಂದುಳಿದಿದ್ದು, ಈ ಮೊದಲು ಹಿಂದು ಗೊಲ್ಲ ಎಂದು ಪ್ರವರ್ಗ-1ರಲ್ಲಿ ಜಾತಿ ಪ್ರಮಾಣ ಪತ್ರ ಪಡೆಯಲಾಗುತ್ತಿತ್ತು.

    ಆದರೆ ರಾಜ್ಯ ಕಾಡುಗೊಲ್ಲ ಸಂಘ ಹಾಗೂ ಇತರ ಸಂಘಗಳ ವತಿಯಿಂದ ಪರಿಶಿಷ್ಟ ಜಾತಿ, ಪಂಗಡ ಮೀಸಲಾತಿಗಾಗಿ ಹೋರಾಟ ನಡೆಸಲಾಗುತ್ತಿದ್ದು, ಈಗಾಗಲೇ ರಾಜ್ಯ ಸರ್ಕಾರ ಅನುಮೋದಿಸಿ ಪರಿಶಿಷ್ಟ ಜಾತಿ ಮೀಸಲಾತಿಗಾಗಿ ಕೇಂದ್ರದ ಅನುಮೋದನೆಗೆ ಸಲ್ಲಿಸಲಾಗಿದೆ.

    ಅಲ್ಲದೆ ಈ ಹಿಂದೆ ಪಡೆಯುತ್ತಿದ್ದ ಹಿಂದು ಗೊಲ್ಲ ಬದಲು ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡಲು ಸರ್ಕಾರ 2018ರಲ್ಲೇ ಆದೇಶ ಮಾಡಿದೆ. ಈ ಆದೇಶದ ಪ್ರಕಾರ ತಾಲೂಕಿನ 33 ಗೊಲ್ಲರಹಟ್ಟಿಗಳಲ್ಲಿ ವಾಸ ಮಾಡುವ ಗೊಲ್ಲ ಸಮುದಾಯಕ್ಕೆ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.

    ಇದನ್ನೂ ಓದಿ: ಜಾತಿ ಪ್ರಮಾಣ ಪತ್ರಕ್ಕಾಗಿ ಆಹೋರಾತ್ರಿ ಧರಣಿ

    ಸಂಘದ ಜಿಲ್ಲಾಧ್ಯಕ್ಷ ಸಣ್ಣ ಬಾಲಪ್ಪ, ತಾಲೂಕು ಅಧ್ಯಕ್ಷ ಜಿ.ಎಸ. ದೊಡ್ಡಪ್ಪ, ಗೌರವಾಧ್ಯಕ್ಷ ಸಿರಿಯಪ್ಪ, ಉಪಾಧ್ಯಕ್ಷರಾದ ತಿಮ್ಮಣ್ಣ, ಬಾವಿ ರಂಗಪ್ಪ, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ, ರಾಘವೇಂದ್ರ, ಖಜಾಂಚಿ ಗೌಡ ಚಿತ್ತಪ್ಪ, ಸಿದ್ದೇಶ, ವೀರೇಶ್, ಕೃಷ್ಣಮೂರ್ತಿ, ಸಣ್ಣಯ್ಯ, ಕೆ. ನಾಗರಾಜ, ಗೋಪಲಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts