More

    ಹಿಂಜರಿಯದೆ ಏಡ್ಸ್ ಪರೀಕ್ಷೆ ಮಾಡಿಸಿಕೊಳ್ಳಿ

    ಕೂಡ್ಲಿಗಿ: ಗರ್ಭಿಣಿಯರು ಹಿಂಜರಿಯದೆ ಏಡ್ಸ್ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಹುಟ್ಟುವ ಮಗುವನ್ನು ಎಚ್‌ಐವಿಯಿಂದ ಮುಕ್ತ ಮಾಡಬಹುದು ಎಂದು ಟಿಎಚ್ ಒ ಷಣ್ಮುಖ ನಾಯ್ಕ ತಿಳಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಏಡ್ಸ್ ಪ್ರಿವೆನ್ಷನ್ ಬಳ್ಳಾರಿ ವತಿಯಿಂದ ತಾಯಿಯಿಂದ ಮಗುವಿಗೆ ಎಚ್‌ಐವಿ ಸೋಂಕು ಹರಡುವಿಕೆ ನಿರ್ಮೂಲನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ತಮ್ಮ ತಪ್ಪಿನಿಂದ ಅಲ್ಲದೆ ಯಾವುದೋ ಕಾರಣದಿಂದಾಗಿ ಗರ್ಭಿಣಿಯರು ಎಚ್‌ಐವಿ ಸೋಂಕಿಗೆ ಕಾರಣರಾಗಿರುತ್ತಾರೆ. ಅದಕ್ಕಾಗಿ ತಾಯಿ ಪರೀಕ್ಷೆ ಮಾಡಿಸಿ ಸರಿಯಾದ ಔಷದೋಪಚಾರ ಮಾಡಿಸಿದರೆ ಸಾಕು ಅರೋಗ್ಯವಾಗಿರುತ್ತಾರೆ. ಅದರಂತೆ ಪ್ರಸವದ ನಂತರ ಮಗುವಿಗೆ ಬಾಯಲ್ಲಿ ಈ ರೋಗದ ವಿರುದ್ಧವಾದ ಸಿರಪ್ ಹಾಕಿದರೆ ಈ ಸೋಂಕು ಮಗುವಿಗೆ ಹರಡುವುದಿಲ್ಲ. ಇದರಿಂದ ಮಗುವಿನ ಭವಿಷ್ಯ ಉತ್ತಮವಾಗುತ್ತದೆ. ಆ ನಿಟ್ಟಿನಲ್ಲಿ ಮಗು ಗರ್ಭದಲ್ಲಿ ಇದ್ದಾಗಲೇ ಎಚ್‌ಐವಿ ಪರೀಕ್ಷೆ ಮಾಡಿಸಿ ರೋಗದಿಂದ ಮುಕ್ತ ಮಾಡಬಹುದು. ಇದರಿಂದ ಕುಟುಂಬ ನೆಮ್ಮದಿಯಿಂದ ಜೀವನ ಮಾಡಬಹುದು ಎಂದು ತಿಳಿಸಿದರು. 40 ಗರ್ಭಿಣಿಯರಿಗೆ ಉಡಿತುಂಬಿ ಸೀಮಂತ ಕಾರ್ಯಕ್ರಮ ನಡೆಸಲಾಯಿತು. ಡಾ.ಮನ್ಸೂರ್ ಅಲಿ, ಪಪಂ ಅಧ್ಯಕ್ಷೆ ಎಂ.ಶಾರದಬಾಯಿ, ಉಪಾಧ್ಯಕ್ಷೆ ಬಿ.ಸರಸ್ವತಿ ರಾಘವೇಂದ್ರ, ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಎಸ್. ವೀರಣ್ಣ, ಅಧೀಕ್ಷಕ ಕೆ.ಬಿ.ಎಂ.ವೀರಭದ್ರಯ್ಯ, ಐಸಿಟಿಸಿ ಆಪ್ತ ಸಹಾಯಕ ಕೆ.ಪ್ರಶಾಂತ್ ಕುಮಾರ್, ಸಿಬಂದಿ ಓಬಣ್ಣ, ನಾಗರತ್ನಾ, ವೇದಾವತಿ, ಗಂಗಮ್ಮ, ಬೋರಣ್ಣ, ಸುನೀತಾ, ಚಿದಾನಂದಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts