More

    ಸ್ತ್ರೀ ಸಮಾನತೆ ಕಲ್ಪಿಸಿದ ಅಂಬೇಡ್ಕರ್

    ಕೂಡ್ಲಿಗಿ: ಭಾರತದ ಸಂವಿಧಾನ ಇಡೀ ವಿಶ್ವಕ್ಕೆ ಮಾನ್ಯವಾಗಿದೆ ಎಂದು ಅಂಬೇಡ್ಕರ್ ಸಂಘದ ತಾಲೂಕಾಧ್ಯಕ್ಷ ಗುಣಸಾಗರ ಕೃಷ್ಣಪ್ಪ ತಿಳಿಸಿದರು.
    ತಾಲೂಕಿನ ಗುಡೇಕೋಟೆಯ ಪರಿಶಿಷ್ಟ ವರ್ಗಗಳ ವಸತಿ ನಿಲಯದಲ್ಲಿ ಭಾನುವಾರ ತಾಲೂಕು ಅಂಬೇಡ್ಕರ್ ಸಂಘ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆ-2024 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಭಾರತದ ಸಂವಿಧಾನ ಇಡೀ ವಿಶ್ವಕ್ಕೆ ಮಾನ್ಯ

    ಭಾರತದ ಸಂವಿಧಾನಕ್ಕೆ ಸ್ಫೂರ್ತಿ ಡಾ.ಅಂಬೇಡ್ಕರ್. ನಿಂದನೆಗೊಳಗಾದ ಮತ್ತು ನಿರುತ್ಸಾಹಕ್ಕೊಳಗಾದ ವರ್ಗಗಳ ಪ್ರಗತಿಗಾಗಿ ಸಂವಿಧಾನದಲ್ಲಿ ಹಕ್ಕುಗಳನ್ನು ನೀಡಿ ಅಭ್ಯುದಯಕ್ಕೆ ಕಾರಣಿಭೂತರಾದರು. ಸಮತೋಲನ ಸಮಾಜವನ್ನು ಸ್ವಾಧೀನಪಡಿಸಿಕೊಳ್ಳಲು ಅಸ್ಪಶ್ಯರಿಗೆ ನ್ಯಾಯ ಒದಗಿಸಿದರು ಎಂದರು.

    ಇದನ್ನೂ ಓದಿ: ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 61ನೇ ಶತಕ ಸಿಡಿಸಿದ ಚೇತೇಶ್ವರ ಪೂಜಾರ

    ಭಾರತದಲ್ಲಿನ ಅಸ್ಪಶ್ಯದ ಸ್ಥಿತಿಯನ್ನು ಮನಗಂಡು ಮೀಸಲಾತಿಯ ವ್ಯವಸ್ಥೆಯನ್ನು ಜಾರಿಗೆ ತಂದರು. ಭಾರತದಲ್ಲಿ ಮಹಿಳೆಯರ ಸ್ಥಾನಮಾನದ ಸುಧಾರಣೆಗೆ ಶ್ರಮಿಸಿ ಸ್ತ್ರೀ ಸಮಾನತೆಯನ್ನು ಕಲ್ಪಿಸಿದರು ಎಂದು ತಿಳಿಸಿದರು’ ಅಸ್ಪಶ್ಯ ಎಂದು ಪರಿಗಣಿಸಲ್ಪಟ್ಟ ಅಂಬೇಡ್ಕರ್ ಶಿಕ್ಷಣವನ್ನು ಸಾಮಾಜಿಕ ಬದಲಾವಣೆಗೆ ಅತ್ಯಂತ ಶಕ್ತಿಶಾಲಿ ಸಾಧನವೆಂದು ಗುರುತಿಸಿದರು. ಆದ್ದರಿಂದ, ಅವರು ಜಾತಿ ಮತ್ತು ಲಿಂಗವನ್ನು ಲೆಕ್ಕಿಸದೆ ಎಲ್ಲರಿಗೂ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿದರು. ಎಲ್ಲರನ್ನು ಒಳಗೊಂಡ ಶೈಕ್ಷಣಿಕ ನೀತಿಗಳಿಗೆ ಅಡಿಪಾಯವನ್ನು ಸಿದ್ಧಪಡಿಸಿದರು. ಅವರು ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು, ಸಮಾಜದ ಅಂಚಿನಲ್ಲಿರುವ ವರ್ಗಗಳನ್ನು ಜ್ಞಾನದಿಂದ ಸಬಲೀಕರಣಗೊಳಿಸಲು ಉದ್ದೇಶಿಸಿದರು ಎಂದು ತಿಳಿಸಿದರು.

    ಉಪನ್ಯಾಸಕ ಗುಡೇಕೋಟೆ ರಾಜಣ್ಣ ಉಪನ್ಯಾಸ ನೀಡಿದರು. ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಬಂಡೆ ರಾಘವೇಂದ್ರ, ಡಿ.ಎಂ.ಈಶ್ವರಪ್ಪ, ನಿಲಯ ಪಾಲಕರಾದ ಹುಲುಗಪ್ಪ, ಶ್ರೀಕಾಂತ್, ಗ್ರಾಪಂ ಸದಸ್ಯೆ ಸುನೀತಾ, ತಿಪ್ಪೇಸ್ವಾಮಿ ಸೇರಿ ವಸತಿ ನಿಲಯದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts