More

    ಪಂಚಮಸಾಲಿ ಸಮಾಜ ಜತೆಗಿನ ಸಂಧಾನ ವಿಫಲ

    ಕೂಡಲಸಂಗಮ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳದಂತೆ ಮನವೊಲಿಸುವ ಹಿನ್ನೆಲೆ ಸಚಿವ ಸಿ.ಸಿ.ಪಾಟೀಲ ಹಾಗೂ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಸಮಾಜದ ಮುಖಂಡರ ನಡುವೆ ಶನಿವಾರ ನಡೆದ ಸಂಧಾನ ಸಭೆ ವಿಫಲವಾಗಿದೆ.

    ಜ.14 ರಿಂದ ಹಮ್ಮಿಕೊಳ್ಳಲಿರುವ ಪಾದಯಾತ್ರೆ ಹೋರಾಟ ಬಿಟ್ಟು ಸಮಯ ನೀಡುವಂತೆ ಸಚಿವ ಸಿ.ಸಿ. ಪಾಟೀಲ ಮನವಿ ಮಾಡಿದರು.

    ಶ್ರೀಗಳು, ಸಮಾಜದ ಮುಖಂಡರು ಹೋರಾಟದ ಪಟ್ಟು ಸಡಿಲಿಸದೆ ಪುನಃ 14 ರವರೆಗೆ ಗಡುವು ನೀಡಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋದರು. ಪಾದಯಾತ್ರೆಗೆ ಮಾನಸಿಕವಾಗಿ ಸಿದ್ಧರಾಗಬೇಕು. ಸರ್ಕಾರದ ವಿರುದ್ಧ ಟೀಕೆ ಬೇಡ, ಹಳ್ಳಿಗಳಲ್ಲಿ ಜನರ ಸಂಘಟನೆ ಮಾಡಬೇಕು. ಭರವಸೆ ಈಡೇರಿದರೆ ವಿಜಯೋತ್ಸವ, ಇಲ್ಲದೆ ಹೋದರೆ ಪಾದಯಾತ್ರೆ ಎಂದು ಶ್ರೀಗಳು ಸಭೆಯಲ್ಲಿ ಘೋಷಿಸಿದರು.

    ಪಂಚಮಸಾಲಿ ಪೀಠದ ಕೊಠಡಿಯೊಂದರಲ್ಲಿ ಸಚಿವ ಸಿ.ಸಿ. ಪಾಟೀಲ, ಲೋಕಸಭೆ ಸದಸ್ಯ ಸಂಗಣ್ಣ ಕರಡಿಯೊಂದಿಗೆ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಪಂಚಮಸಾಲಿ ಟ್ರಸ್ಟ್ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ರವಿಕಾಂತ ಪಾಟೀಲ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ತೇಜಸ್ವಿ ಪಟೇಲ, ಸಂಗಮೇಶ ಬಬಲೇಶ್ವರ ಮುಂತಾದವರು ಅರ್ಧ ಗಂಟೆಯವರೆಗೆ ಚರ್ಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts