More

    ನದಿಯ ದಡ ಸ್ವಚ್ಛಗೊಳಿದ ಯುವಕರು

    ಕೂಡಲಸಂಗಮ: ರಕ್ಷಿಸೋಣ ಬನ್ನಿ ಕೂಡಲಸಂಗಮ ಅಭಿಯಾನ ಭಾನುವಾರ ಏಳನೇ ವಾರ ಪೂರ್ಣಗೊಳಿಸಿತು. ಕೂಡಲಸಂಗಮದ 15ಕ್ಕೂ ಅಧಿಕ ಯುವಕರು ರಥದ ಬೀದಿ ಬಳಿಯ ಕೃಷ್ಣಾ ನದಿ ದಡದಲ್ಲಿ ಭಕ್ತರು ಸ್ನಾನ ಮಾಡಿ ಬಿಟ್ಟ ಅಪಾರ ಪ್ರಮಾಣದ ಬಟ್ಟೆ, ತ್ಯಾಜ್ಯ, ಕಸವನ್ನು ಸ್ವಚ್ಛಗೊಳಿಸಿದರು.

    ಕರೊನಾ ಹಿನ್ನೆಲೆಯಲ್ಲಿ ಕೃಷ್ಣಾ, ಮಲಪ್ರಭಾ ನದಿ ದಡದಲ್ಲಿ ಪ್ರವೇಶ ನಿಷೇಧಿಸಿದ ಪರಿಣಾಮ ಪುಣ್ಯಸ್ನಾನಕ್ಕೆ ಬರುವ ಭಕ್ತರು ರಥ ಬೀದಿ ಬಳಿಯ ಕೃಷ್ಣಾ ನದಿ ದಡದಲ್ಲಿ ಸ್ನಾನ ಮಾಡಿ ಅಲ್ಲಿಯೇ ಬಟ್ಟೆಗಳನ್ನು, ದೇವರ ಪೂಜೆಗೆ ಬಳಸಿದ ವಸ್ತುಗಳನ್ನು, ಭಗ್ನ ಮೂರ್ತಿಗಳನ್ನು ಬಿಡುತ್ತಿದ್ದಾರೆ. ಅಲ್ಲದೆ, ನವಜೀವನಕ್ಕೆ ಕಾಲಿಟ್ಟ ವಧು-ವರರು ನದಿಯಲ್ಲೇ ಬಾಸಿಂಗ ಬಿಡುವರು. ಇದನ್ನು ತಡೆಯಬೇಕಾದ ಮಂಡಳಿ ಸಿಬ್ಬಂದಿ ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ. ಪರಿಣಾಮ ನದಿಯ ದಡ ತ್ಯಾಜ್ಯ ವಸ್ತುಗಳ, ಬಟ್ಟೆಗಳ ಕಸದ ರಾಶಿಯಿಂದ ತುಂಬಿದೆ. ಪುಣ್ಯಸ್ನಾನಕ್ಕೆ ಬಂದ ಭಕ್ತರು ನಿತ್ಯ ಇಲ್ಲಿಯ ಆಡಳಿತ ವ್ಯವಸ್ಥೆಯನ್ನು ಶಪಿಸುತ್ತ ಕಸದ ರಾಶಿಯಲ್ಲಿಯೇ ಸ್ನಾನ ಮಾಡುತ್ತಿದ್ದಾರೆ. ಆದ್ದರಿಂದ ಭಾನುವಾರ ಯುವಕರು ನದಿ ದಡವನ್ನು ಸ್ವಚ್ಛಗೊಳಿಸಿದರು.

    ನದಿ ಮಲಿನತೆಯನ್ನು ತಡೆಯಲು ಭದ್ರತಾ ಸಿಬ್ಬಂದಿಯನ್ನು ಮಂಡಳಿ ನಿಯೋಜಿಸುವ ಕೆಲಸ ಮಾಡಬೇಕು ಎಂದು ಗ್ರಾಮದ ಮಹಾಂತೇಶ ಕುರಿ, ತೀರ್ಥಲಿಂಗ ಬೆಳಗಲ್ಲ, ಕಲ್ಲೇಶ ಬಿ., ಸಂತೋಷ ಭಜಂತ್ರಿ, ಲಾಲಸಾ ಮಕಾನದಾರ, ಮಹಾಂತೇಶ ಭಜಂತ್ರಿ, ಶರಣು ಹಡಪದ ಮುಂತಾದವರು ಒತ್ತಾಯಿಸಿದರು.

    ಪವಿತ್ರವಾದ ನದಿಗಳು ಮಲಿನಗೊಳ್ಳುತ್ತಿದ್ದರೂ ಇಲ್ಲಿಯ ಮಂಡಳಿ ಸಿಬ್ಬಂದಿ ತಡೆಯುವ ಕಾರ್ಯ ಮಾಡುತ್ತಿಲ್ಲ. ನದಿಯಲ್ಲಿ ಬಾಸಿಂಗ ಬಿಡಲು ಪ್ರೋತ್ಸಾಹಿಸುವರು. ಕನಿಷ್ಠ ಪಕ್ಷ ನದಿಯ ದಡವನ್ನು ಸ್ವಚ್ಛಗೊಳಿಸುವ ಸೌಜನ್ಯತೆ ಇರದೆ ಇರುವುದು ದುರಂತ.
    ಭರತ ಹಂಡಿ, ಭದ್ರಾವತಿಯ ಪ್ರವಾಸಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts