ಸಂತ, ಶರಣರ ನಾಡಿನಲ್ಲಿ ಅಸಮಾನತೆ

blank

ಕೂಡಲಸಂಗಮ: ಶತ ಶತಮಾನಗಳಿಂದ ಶರಣರು, ಸಂತರು ಸಮಾನತೆ ಭಿತ್ತರಿಸಿದ ನಾಡಿನಲ್ಲಿ ಸಿಎಎ, ಎನ್‌ಆರ್‌ಸಿ ಮೂಲಕ ಅಸಮಾನತೆ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಹೇಳಿದರು.

ಕೂಡಲಸಂಗಮ ಸಾರಂಗಮಠದ ಸಮುದಾಯ ಭವನದಲ್ಲಿ ಧಾರವಾಡದ ಜನತಂತ್ರ ಸಮಾಜ, ರಾಯಚೂರಿನ ಜನ ಸಂಗ್ರಾಮ ಪರಿಷತ್ ಹಾಗೂ ಮೈಸೂರಿನ ಜನಾಂದೋಲಗಳ ಮಹಾಮೈತಿ ಸಹಯೋಗದಲ್ಲಿ ಭಾನವಾರ ಹಮ್ಮಿಕೊಂಡಿದ್ದ ಸಂತ ಶರಣರ ಸಂದೇಶ ಯಾತ್ರೆ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.

ಶರಣರ, ಸಂತರ ನಾಡಿನಲ್ಲಿ ಸರ್ಕಾರ ಸಂವಿಧಾನಕ್ಕೆ ವಿರುದ್ಧವಾದ ಕೆಲಸ ಮಾಡುತ್ತಿದೆ. ಅದಕ್ಕಾಗಿ ನಾವೆಲ್ಲರೂ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಮೂಲಕ ಸಂವಿಧಾನ ಉಳಿಸಿ, ಬೆಳೆಸುವ ಕಾರ್ಯವನ್ನು ಮಾಡಬೇಕು ಎಂದರು.

ದೇಶದಲ್ಲಿ ಸಂಸ್ಕೃತಿ, ಸಮಾಜ, ನಿಸರ್ಗ ಹಾಗೂ ಅಭಿವೃದ್ಧಿ ನೀತಿ ಜಾರಿಗೆ ಬಂದಾಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣವಾಗಲು ಸಾಧ್ಯ. ಸ್ವಾರ್ಥ ರಾಜಕೀಯ ಉದ್ದೇಶಕ್ಕೆ ರಾಜಕಾರಣಿಗಳು ಧರ್ಮ, ಜನಾಂಗಳ ಮಧ್ಯೆ ದ್ವೇಷ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ನಾವು ಈ ಯಾತ್ರೆ ಮೂಲಕ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಚಿಂತಕ ರಂಜಾನ ದರ್ಗಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ದೇಶ ಒಂದಾಗಿರಲೂ ಶರಣ, ಸಂತರ ತತ್ವಗಳೇ ಕಾರಣ. ಇದನ್ನು ಯಾರಿಂದಲೂ ಕೆಡಿಸಲು ಸಾಧ್ಯವಿಲ್ಲ. ಬಹು ಸಂಸ್ಕೃತಿಯ ಭಾರತದಲ್ಲಿ ಮಾನವೀಯತೆಯ ಸಂಸ್ಕೃತಿ ಇದೆ. ಅದನ್ನು ಕೆಡಿಸುವ ಕಾರ್ಯವನ್ನು ಯಾರೂ ಮಾಡಬಾರದು ಎಂದರು.

ರೈತ ಮುಖಂಡ ಕೃಷ್ಣಾ ಜಾಲಿಹಾಳ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ಗಾಂಧಿ ಸೇವಾ ಆಶ್ರಮದ ದಿಲೀಪ ಕಾಮತ್, ಹೋರಾಟಗಾರ ಅಶೋಕ ಡೊಮಲೂರ, ಮಲ್ಲಿಕಾರ್ಜುನ ಬೂದಿಹಳ್ಳಿ, ಮಲ್ಲಿಕಾರ್ಜುನ ಬಿಟ್ರಹಳ್ಳಿ, ರಾಮಯ್ಯ ಹುರುಗಲವಾಡಿ, ಅಬ್ದುಲ್ ರಹಮಾನ್ ಬಿದರಕುಂದಿ ಇದ್ದರು. ಮಹಾಂತೇಶ ಅಗಸಿ ಮುಂದಿನ ಸ್ವಾಗತಿಸಿದರು. ಅಮರೇಶ ನಾಗೂರ ವಂದಿಸಿದರು.

ಸರ್ವಜ್ಞನ ಅಬಲೂರಿನಿಂದ 24 ರಿಂದ ಆರಂಭವಾಗಿದ್ದ ಶರಣ-ಸಂತರ ಸಂದೇಶ ಯಾತ್ರೆ ಮಾ.1 ರಂದು ಕೂಡಲಸಂಗಮದ ಸಂಗಮೇಶ್ವರ ದೇವಾಲಯಕ್ಕೆ ಆಗಮಿಸಿ ಮೆರವಣಿಗೆ ಮೂಲಕ ಸಾರಂಗಮಠ ಸಭಾಭವನಕ್ಕೆ ತಲುಪಿ ಮುಕ್ತಾಯಗೊಂಡಿತು.

Share This Article

ಈ ಸಮಯದಲ್ಲಿ ನೀವು ನಿಂಬು ಜ್ಯೂಸ್​​ ಕುಡಿದರೆ ಅಪಾಯವಾಗಬಹುದು..ಎಚ್ಚರ! Lemon Water

Lemon Water: ಬೇಸಿಗೆಯ ಬಿಸಿಲಿಗೆ ಬೆವೆತು ದೇಹವನ್ನು ತಂಪಾಗಿಸಲು ಮತ್ತು ದಾಹವನ್ನು ನೀಗಿಸಲು ನಾವು ಸಾಮಾನ್ಯವಾಗಿ…

ರಾತ್ರಿ ಚೆನ್ನಾಗಿ ನಿದ್ದೆ ಮಾಡಬೇಕೆಂದರೆ ಈ ಒಂದು ಕೆಲಸ ಮಾಡಿ: ಬೆಳಗ್ಗೆ ಉತ್ಸಾಹದಿಂದ ಎದ್ದೇಳಬಹುದು.. sleeping tips

sleeping tips : ಸಾಕಷ್ಟು ನಿದ್ರೆ ಬರದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ನಾವು ಎಷ್ಟು…

ಮಧ್ಯರಾತ್ರಿ ಕಳೆದರೂ ನಿದ್ದೆ ಬರ್ತಿಲ್ವಾ? ಹಾಗಾದರೆ ಈ ಸಮಸ್ಯೆಗಳನ್ನು ಎದುರಿಸಲು ನೀವು ರೆಡಿಯಾಗಿ! Sleep

Sleep : ಇಂದಿನ ಕಾರ್ಯನಿರತ ಜೀವನದಲ್ಲಿ ಕಾಲದ ಜೊತೆಗೆ, ಜನರ ಜೀವನಶೈಲಿಯಲ್ಲಿಯೂ ಅನೇಕ ದೊಡ್ಡ ಬದಲಾವಣೆಗಳಾಗಿವೆ.…