More

  ಬಸ್ ಡಿಪೋ ಕಾಮಗಾರಿ ವೀಕ್ಷಿಸಿದ ಬಿವೈಆರ್

  ಶಿಕಾರಿಪುರ: ಸಮೀಪದ ಕುಟ್ರಹಳ್ಳಿ ಬಳಿ ನಿರ್ವಿುಸುತ್ತಿರುವ ಕೆಎಸ್​ಆರ್​ಟಿಸಿ ಡಿಪೋ ಕಾಮಗಾರಿಯನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸೋಮವಾರ ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು, ತಾಲೂಕಿನ ಸಾರಿಗೆ ಸಂಪರ್ಕ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಯಾಗಿದೆ. ತಾಲೂಕಿನಲ್ಲಿ ಎರಡು ಹೆದ್ದಾರಿ ಹಾದುಹೋಗಿದ್ದು ಬೆಳಗಾವಿ-ಬೆಂಗಳೂರು ಹಾಗೂ ಬಳ್ಳಾರಿಯಿಂದ ಶಿಕಾರಿಪುರ ತಾಲೂಕಿಗೆ ಸಂಪರ್ಕ ಸಾಧ್ಯವಾಗಿದೆ. ಡಿಪೋ ಆದರೆ ಇಲ್ಲಿಂದ ಹೆಚ್ಚಿನ ಬಸ್​ಗಳು ದೂರದ ಊರುಗಳಿಗೆ ಸಂಚರಿಸಲಿದ್ದು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು. ರೈಲು ಮಾರ್ಗ ನಿರ್ವಣಕ್ಕೆ ಚಾಲನೆ ನೀಡಲಾಗಿದೆ. ಇದರಿಂದ ತಾಲೂಕಿನ ಸಂಪರ್ಕ ಕ್ಷೇತ್ರಕ್ಕೆ ಗರಿ ಮೂಡಿದಂತಾಗುತ್ತದೆ. ರಾಜ್ಯದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ತಾಲೂಕುಗಳಲ್ಲಿ ಶಿಕಾರಿಪುರ ಮುಂಚೂಣಿಯಲ್ಲಿದೆ. ತಾಲೂಕನ್ನು ಮಾದರಿಯನ್ನಾಗಿ ಮಾಡುವ ಸಿಎಂ ಕನಸು ನನಸಾಗುತ್ತಿದೆ ಎಂದು ತಿಳಿಸಿದರು. ಮೆಸ್ಕಾಂ ನಿರ್ದೇಶಕ ರುದ್ರೇಶ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts