More

    ಸೂಕ್ತ ಚಿಕಿತ್ಸೆಯಿಂದ ಕ್ಷಯ ಗುಣಮುಖ

    ಹುಮನಾಬಾದ್: ಕ್ಷಯರೋಗವನ್ನು ಚಿಕಿತ್ಸೆಯಿಂದ ಗುಣಪಡಿಸಬಹುದು ಎಂದು ಸರ್ಕಾರಿ ಆಸ್ಪತ್ರೆ ಹಿರಿಯ ವೈದ್ಯ ಡಾ.ಬಸವಂತರಾವ್ ಗುಮ್ಮೇದ ಹೇಳಿದರು.
    ಪಟ್ಟಣದ ಕೇಂದ್ರ ಉಪ ಕಾರಾಗೃಹದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಆಸ್ಪತ್ರೆ ಸಹಯೋಗದಡಿ ಆಯೋಜಿಸಿದ್ದ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನಕ್ಕೆ ಚಾಲನೆ ನೀಡಿದ ಅವರು, ಕ್ಷಯರೋಗದ ಬಗ್ಗೆ ಅರಿವು ಅಗತ್ಯ. ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಕಫ ಪರೀಕ್ಷೆ ಮತ್ತು ಚಿಕಿತ್ಸೆ ಸಿಗಲಿದೆ ಎಂದರು.
    ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ನಾಗನಾಥ ಹುಲಸೂರೆ ಮಾತನಾಡಿ, ಬೀದರ್ ಜಿಲ್ಲೆಯಲ್ಲಿ ಜು.೧೭ರಿಂದ ಆ.೨ರವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಒಗ್ಗೂಡಿ ಕ್ಷಯರೋಗದ ವಿರುದ್ಧ ಅಭಿಯಾನ ನಡೆಸಿ ಜಿಲ್ಲೆಯನ್ನು ಕ್ಷಯಮುಕ್ತವಾಗಿಸಬೇಕು. ಸತತ ಎರಡು ವಾರ ಕೆಮ್ಮು, ಜ್ವರ, ಹಸಿವಾಗದಿದ್ದರೆ ತಕ್ಷಣ ಕಫ ಪರೀಕ್ಷೆ ಮಾಡಿಸಬೇಕು ಎಂದು ಸಲಹೆ ನೀಡಿದರು.
    ಕೇಂದ್ರ ಉಪಕಾರಾಗೃಹ ಅಧಿಕಾರಿ ಭೀಮಾಶಂಕರ ಜಮಾದಾರ್, ಡಾ.ಅಬ್ದುಲ್ ಸುಭಾನ, ಗೀತಾ ರೆಡ್ಡಿ, ಶಿವಕುಮಾರ ಕಿವಡೆ, ಶರಣಬಸವ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts