More

    ಪ್ರಕಾಶ್​ ರಾಜ್​ ಅಪ್ಪ-ಅಮ್ಮನಿಗೆ ಹುಟ್ಟಿದ್ದಾನೆ ಎನ್ನುವುದಕ್ಕೆ ಗ್ಯಾರಂಟಿ ಏನಿದೆ: ಕೆ.ಎಸ್​. ಈಶ್ವರಪ್ಪ

    ವಿಜಯಪುರ: ನಾನು ಸನಾತನ ಧರ್ಮಕ್ಕಲ್ಲ ಅಪ್ಪ-ಅಮ್ಮನಿಗೆ ಹುಟ್ಟಿದ್ದೇನೆ ಎಂಬ ನಟ ಪ್ರಕಾಶ್​ ರಾಜ್​ ಹೇಳಿಕೆಗೆ ಕಿಡಿಕಾರಿರುವ ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪ ಅದಕ್ಕೆ ಗ್ಯಾರಂಟಿ ಏನು ಎಂದು ಪ್ರಶ್ನಿಸುವ ಮೂಲಕ ಹೊಸ ಮೂಲಕ ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ದಾರೆ.

    ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪ ಅವರ ತಾಯಿಯ ಬಗ್ಗೆ ನನಗೆ ಗೌರವ ಇದೆ. ಆದರೆ, ಪ್ರಕಾಶ್​ ರಾಜ್​ ಯಾರಿಗೆ ಹುಟ್ಟಿದ್ದಾರೆ ಎಂಬ ವಿಚಾರವನ್ನ ಅವರ ತಾಯಿ ಹೇಳಬೇಕಷ್ಟೇ ಎಂದಿದ್ದಾರೆ.

    ಅವನೊಬ್ಬ ಅಯೋಗ್ಯ, ಹುಚ್ಚ

    ಸಾವಿರಾರು ವರ್ಷ ಇತಿಹಾಸವಿರುವ ಸನಾತನ ಧರ್ಮದ ಕುರಿತು ಮಾತನಾಡಿರುವ ತಮಿಳುನಾಡು ಸಿಎಂ ಸ್ಟಾಲಿನ್​ ಪುತ್ರ, ಸಚಿವ ಉದಯನಿಧಿ ಒಬ್ಬ ಅಯೋಗ್ಯ, ಹುಚ್ಚ ಇದರ ಬಗ್ಗೆ ಮಾತನಾಡಲು ಅವನ್ಯಾರು ಎಂದು ಕಿಡಿಕಾರಿದ್ದಾರೆ.

    KSE

    ಇದನ್ನೂ ಓದಿ: ನಿಮ್ಮ ಸ್ನೇಹ ಏನಿದ್ದರೂ ಮೈದಾನದಿಂದ ಹೊರಗಿರಲಿ; ಗಂಭೀರ್​​ ಹೇಳಿಕೆಗೆ ಅಫ್ರಿದಿ ತಿರುಗೇಟು

    ಇಂಡಿಯಾ ಹೆಸರನ್ನು ಭಾರತ ಎಂದು ಬದಲಾವಣೆ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಭಾರತ ಮತ್ತು ಇಂಡಿಯಾ ಎಂದು ಕರೆಯಲು ಸಂವಿಧಾನದಲ್ಲೇ ಅವಕಾಶ ನೀಡಲಾಗಿದೆ. ಭಾರತ್​ ಮಾತಾ ಕಿ ಜೈ ಎಂದು ಕೂಗಿದಾಗ ರೋಮಾಂಚನವಾಗುತ್ತದೆ. ಇಂಡಿಯಾ ಮಾತಾ ಕಿ ಜೈ ಎನ್ನಲಾಗದು. ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಭಾರತ ಪದ ಪ್ರಯೋಗಕ್ಕೆ ದೇಶದ ಜನಸಾಮಾನ್ಯರ ಕಿಂಚಿತ್ತೂ ಆಕ್ಷೇಪವಿಲ್ಲ.

    ಲಿಂಗಾಯತ ನಾಯಕರನ್ನು ಬಿಜೆಪಿಯಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ವಿಧಾನಪರಿಷತ್​ ಸದಸ್ಯ ಪ್ರದೀಪ್​ ಶೆಟ್ಟರ್​ ಆರೋಪಕ್ಕೆ ಪ್ರತಿಕ್ರಿಯಿಸಿ ಅವರ ಅಣ್ಣ ಮುಖ್ಯಮಂತ್ರಿಯಾದಾಗ, ಇವರು ವಿಧಾನಪರಿಷತ್​ ಸದಸ್ಯರಾಗಿ ಆಯ್ಕೆಯಾದಾಗ ಈ ಪ್ರಶ್ನೆ ಏಕೆ ಉದ್ಭವಿಸಲಿಲ್ಲ. ಅವರ ಅಣ್ಣನ ರೀತಿಯಲ್ಲೇ ಪಕ್ಷದಿಂದ ಒಂದು ಕಾಲು ಹೊರಗಿಟ್ಟು, ಪ್ರದೀಪ್​ ಶೆಟ್ಟರ್​ ಬಿಜೆಪಿ ವಿರುದ್ಧ ಮಾತನಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts