More

    ಜಿಲ್ಲೆಯ ಹೆಸರಿಗೆ ಸೊಬಗು ತಂದವರು ಕೆ.ಎಸ್.ನರಸಿಂಹಸ್ವಾಮಿ

    ಕಿಕ್ಕೇರಿ: ಕಾವ್ಯದ ಮೂಲಕ ಜಿಲ್ಲೆಯ ಹೆಸರನ್ನು ವಿಶ್ವಮಾನ್ಯ ಮಾಡಿದವರು ಕಿಕ್ಕೇರಿಯವರಾದ ಮೈಸೂರು ಮಲ್ಲಿಗೆ ಕವಿ ಕೆ.ಎಸ್. ನರಸಿಂಹಸ್ವಾಮಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

    ಕಿಕ್ಕೇರಿಯ ಒಲವಿನ ಕವಿ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್‌ಗೆ ಇತ್ತೀಚೆಗೆ ಭೇಟಿ ನೀಡಿ, ಟ್ರಸ್ಟ್‌ನಿಂದ ಪ್ರಕಟಿತಗೊಂಡಿರುವ ಹಲವು ಕವಿಯ ಮಾಹಿತಿ, ಕಾವ್ಯಸಂಕಲನ, ಹಲವು ಕವಿಗಳ ಪರಿಚಯದ ಪುಸ್ತಕಗಳ ಭಂಡಾರ, ಮಕ್ಕಳಿಗಾಗಿ ಕೆ.ಎಸ್.ನರಸಿಂಹಸ್ವಾಮಿ ಅವರ ವರ್ಣರಂಜಿತ ಪುಸ್ತಕಗಳನ್ನು ನೋಡಿ ಮಾತನಾಡಿದರು.

    ಕೆಎಸ್‌ನ ತಾವೆಂದೂ ದೊಡ್ಡ ಕವಿ ಎಂಬ ಬಿಗುಮಾನ ಹೊಂದಿರಲಿಲ್ಲ. ಬಡತನದಲ್ಲಿ ಹುಟ್ಟಿ, ಬಡತನದಲ್ಲೇ ಸಾವು ಕಂಡರೂ ಕಾವ್ಯ ಶ್ರೀಮಂತಿಕೆಯನ್ನು ಇಡೀ ಸಮುದಾಯಕ್ಕೆ ಉಣಬಡಿಸಿದ ಮಹಾನ್ ಕವಿ. ತಮ್ಮ ನೈಜ ಬದುಕು, ಕಿಕ್ಕೇರಿ ಸುತ್ತಮುತ್ತಲ ಪರಿಸರ ಎಲ್ಲವನ್ನೂ ಕಾವ್ಯದ ಮೂಲಕ ನವಿರಾಗಿ ತಿಳಿಸಿಕೊಟ್ಟವರು ಎಂದು ಸ್ಮರಿಸಿದರು.

    ಕನ್ನಡ ಕಾವ್ಯ ಪರಂಪರೆಯಲ್ಲಿ ಅತಿ ಹೆಚ್ಚು ಮರುಮುದ್ರಣ ಕಂಡ ಮೈಸೂರು ಮಲ್ಲಿಗೆ ಕಾವ್ಯ ಸಂಕಲನ ಯುವಕರಿಗೆ ಬದುಕಿನ ಸಾರ ತಿಳಿಸುವ ಗ್ರಂಥವಾಗಿದೆ. ಯುವಕರು ದಾರಿತಪ್ಪದಂತೆ ದಾಂಪತ್ಯ ಬದುಕು ಹೇಗಿರಬೇಕು ಎಂದು ತೋರಿಸಿಕೊಟ್ಟ ಕವಿ ಹೆಸರಿನಲ್ಲಿ ಪಟ್ಟಣದ ಹೆಬ್ಬಾಗಿಲಿನಲ್ಲಿರುವ ಸ್ವಾಗತ ಕಮಾನು ಗ್ರಾಮದ ಹೆಸರನ್ನು ಗುರುತಿಸುವಂತಿದೆ. ಕವಿ ಹೆಸರಿನಲ್ಲಿ ಸ್ಮಾರಕ, ಉದ್ಯಾನ, ವಸ್ತುಸಂಗ್ರಹಾಲಯದಂತಹ ಅವಶ್ಯಕ ಬೇಡಿಕೆಗಳನ್ನು ಪೂರೈಸಲು ಕ್ರಮವಹಿಸುವುದು ನಮ್ಮ ಸೌಭಾಗ್ಯವಾಗಿದೆ ಎಂದು ನುಡಿದರು.

    ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ, ಸುರೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts