More

    ಕೃಷಿ ಮೇಳದಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ ಕೃಷಿ ಸಚಿವ

    ಚಿತ್ರದುರ್ಗ : ರಾಜ್ಯದ ಪ್ರತಿ ರೈತರಿಗೆ ಐಡೆಂಟಿಟಿ ಕಾರ್ಡ್,ಪ್ರತಿ ರೈತ ಸಂಪರ್ಕಕ್ಕೆ ಸಂಚಾರಿ ಮಣ್ಣು ಪರೀಕ್ಷಾ ಕೇಂದ್ರ, ರಾಜ್ಯದ ನದಿ ನೀರು ಸದ್ಬಳಕೆಗೆ ಶೀಘ್ರದಲ್ಲೇ ರೈತರ ಸಭೆ ನಡೆಸುವುದಾಗಿ ಹೇಳಿದ ಕೃಷಿ ಬಿ.ಸಿ.ಪಾಟೀಲ್,ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವ ಕುರಿತಂತೆ ಅಸಹಾಯಕತೆ ವ್ಯಕ್ತಪಡಿಸಿದರು.

    ಶ್ರೀ ಮುರುಘಾ ಮಠದಲ್ಲಿ ಶನಿವಾರ ಕೃಷಿ, ಕೈಗಾರಿಕೆ ಮೇಳ, ಜೋಡೆತ್ತು, ಸಾಕು ಪ್ರಾಣಿಗಳ ಪ್ರದರ್ಶನ ಹಾಗೂ ಬಯಲು ಸೀಮೆ ನೀರಾವರಿ ಯೋಜನೆ ಮತ್ತು ಅನುಷ್ಠಾನ ವಿಚಾರ ಸಂಕಿರಣದಲ್ಲಿ ಮಾತನಾಡಿ, ಪ್ರತಿ ರೈತರಿಗೆ ವಿತರಿಸುವ ಗುರುತು ಪತ್ರವನ್ನು ರೈತ ಸಂಪರ್ಕ ಕೇಂದ್ರದಲ್ಲಿ ಸ್ವೈಪ್ ಮಾಡಿದರೆ ರೈತನ ಹೆಸರು,ಜಮೀನು ಮೊದಲಾದ ವಿವರಗಳು ದೊರೆಯಲಿವೆ.

    ರಾಜ್ಯದ 786 ರೈತ ಸಂಪರ್ಕ ಕೇಂದ್ರಗಳಿಗೆ ತಲಾ ಒಂದರಂತೆ ಸಂಚಾರಿ ಮಣ್ಣು ಪರೀಕ್ಷಾ ಘಟಕ ಪ್ರಾರಂಭಿಸಲಾಗುವುದು. ಕೊಪ್ಪಳ ದಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಿದೆ. ಇದಕ್ಕೆ ರೈತ ಬಂಧು ಎಂಬ ಹೆಸರಿನ ಈ ಮೊಬೈಲ್‌ಲ್ಯಾಬ್ 108 ಮಾದರಿ ದೂರವಾಣಿ ಕರೆ ಮಾಡಿದರೆ ರೈತ ಜಮೀನಿಗೆ ಧಾವಿಸಲಿದೆ. ರೈತರು ಮಣ್ಣು ಪರೀಕ್ಷೆಯ ಅಗತ್ಯತೆಯನ್ನು ಅರಿಯಬೇಕು. ಕೇವಲ ಯೂರಿಯಾವೊಂದೇ ಲಾಭ ತಂದುಕೊಡದು.

    ಡಿಸೆಂಬರ್ 1ರಿಂದ ಭತ್ತ ಖರೀದಿ ಕೇಂದ್ರಗಳನ್ನು ಪ್ರಾರಂಭವಾಗಲಿವೆ. ರಾಗಿ,ಶೇಂಗಾ,ತೊಗರಿ ಖರೀದಿಗೆ ಪರಿಶೀಲನೆ ನಡೆದಿದೆ. ಆ ದರೆ ಪಡಿತರ ವ್ಯವಸ್ಥೆಯಲ್ಲಿ ಸೇರಿದ್ದರಿಂದಾಗಿ ಮೆಕ್ಕೆಜೋಳದ ಖರೀದಿ ಸಾಧ್ಯವಾಗುತ್ತಿಲ್ಲ. ಆದರೂ ಕೇಂದ್ರಕ್ಕೆ ಸಿಎಂ ಬಿ.ಎಸ್.ಯಡಿಯೂ ರಪ್ಪ ಮತ್ತೆ ಪತ್ರ ಬರೆದು ಅನುಮತಿ ಕೋರಲಿದ್ದಾರೆ. ನಮ್ಮ ಸಿಎಂ ಯಾವತ್ತೂ ರೈತರ ಪರವಿದ್ದು,ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆಂದರು.

    ಕೃಷಿಕರು ರೈತೋದ್ಯಮಿಗಳಾಗ ಬೇಕು. ಸಮಗ್ರ ಬೆಳೆ ನೀತಿ ಅನುಸರಿಸಿದರೆ ಆತ್ಮಹತ್ಯೆ ನಿಯಂತ್ರಿಸಬಹುದು. ವೈಜ್ಞಾನಿಕ, ತಂತ್ರಜ್ಞಾನ ಹಾಗೂ ಆಹಾರ ಸಂಸ್ಕರಣೆ ಮೂಲಕ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯುವ ನಿಟ್ಟಿನಲ್ಲಿ ರಾಜ್ಯದ ಆಸಕ್ತ ರೈತರಿಗೆ ಮೈಸೂರು ಸಿಎಫ್‌ಟಿ ಆರ್‌ನಲ್ಲಿ ತರಬೇತಿ ಕೊಡಿಸಲಾಗುವುದು.

    ಕರೊನಾದಿಂದಾಗಿ ಕೃಷಿ ಪದವಿ ಕಾಲೇಜುಗಳಿಗೆ ಪ್ರವೇಶ ಪರೀಕ್ಷೆ ನಡೆದಿಲ್ಲ. ಆದರೂ ಕೃಷಿಕರ ಮಕ್ಕಳ ಕೋಟಾಕ್ಕೆ ತೊಂದರೆ ಆಗದೆಂದು ಭರವಸೆ ನೀಡಿದರು. ಅತಿವೃಷ್ಟಿಯಿಂದ ಉತ್ತರ ಕರ್ನಾಟಕ,ಕಲ್ಯಾಣ ಕರ್ನಾಟಕಗಳಲ್ಲಿ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಈರು ಳ್ಳಿ,ಶೇಂಗಾ ಸೇರಿದಂತೆ ಹಲವು ಬೆಳೆಗಳು ನಾಶವಾಗಿದ್ದು,ನದಿ ನೀರಿನ ಸದ್ಬಳಕೆ,ಬೆಳೆ ವಿಮೆ ಪರಿಹಾರ ಮತ್ತಿತರ ಸಮಸ್ಯೆಗಳ ಕುರಿತಂತೆ ಶೀಘ್ರದಲ್ಲೇ ಸಿಎಂ ನೇತೃತ್ವದಲ್ಲೇ ರೈತರ ಸಭೆ ನಡೆಸಲಾಗುವುದು. ಪ್ರಧಾನಿ ಹಾಗೂ ಸಿಎಂ ಕೃಷಿಕರ ಪರವಾಗಿದ್ದಾರೆ ಎಂದ ಅವರು, ಕೃಷಿ ಖಾತೆ ಹಾವಿನ ಹಾಸಿಗೆಯಲ್ಲ ಎಂಬ ಅರಿವು ಇಟ್ಟುಕೊಂಡೇ ಕೆಲಸ ಮಾಡುತ್ತಿದ್ದೇನೆ ಎಂದರು.

    ಸಾನಿಧ್ಯ ವಹಿಸಿದ್ದ ಡಾ.ಶಿವಮೂರ್ತಿ ಮುರುಘಾ ಶರಣರು,ರಾಜ್ಯಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್, ರಾಜ್ಯರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್,ಉತ್ಸವ ಸಮಿತಿ ಗೌರವಾಧ್ಯಕ್ಷ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕಾರ‌್ಯಾಧ್ಯಕ್ಷ ಎನ್.ಜಯಣ್ಣ,ಇಳಕಲ್‌ನ ಶ್ರೀ ಗುರು ಮಹಾಂತ ಸ್ವಾಮೀಜಿ,ರಾಜ್ಯಬಿಜೆಪಿ ಕಾರ‌್ಯದರ್ಶಿ ಕೆ.ಎಸ್.ನವೀನ್ ಮತ್ತಿತರರು ಇದ್ದರು. ಬೆಂಗಳೂರು ಜ್ಯೋತಿ ಲ್ಯಾಬೊರೇಟೀಸ್‌ನ ಉಲ್ಲಾಸ್ ಕಾರಂತ್,ಚಳ್ಳಕೆರೆ ತಾಲೂಕು ಹಾಲಿಗೊಂಡನಹಳ್ಳಿಯ ಪ್ರಗತಿ ಪರ ರೈತ ಕೆ.ವಿ.ರುದ್ರಮುನಿ ಅವರನ್ನು ಸನ್ಮಾನಿಸಲಾಯಿತು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts