More

    ನಾಳೆಯಿಂದ ಬೃಹತ್ ಕೃಷಿ ಮೇಳ

    ಐನಾಪುರ: ಪಟ್ಟಣದ ಶ್ರೀ ಸಿದ್ಧೇಶ್ವರ ದೇವರ 54ನೇ ಜಾತ್ರಾ ಮಹೋತ್ಸವ ನಿಮಿತ್ತ ಜಾನುವಾರುಗಳ ಜಾತ್ರೆ ಹಾಗೂ ಬಹತ್ ಕೃಷಿ ಮೇಳ ಜ. 15ರಿಂದ 19ರವರೆಗೆ ಜರುಗಲಿದೆ.

    ಜ. 15ರಂದು ಬೆಳಗ್ಗೆ 9 ಗಂಟೆಗೆ ಶ್ರೀ ಸಿದ್ದೇಶ್ವರ ಮಹಾಪೂಜೆ, ನೈವೇದ್ಯ, ಅಭಿಷೇಕ, ಮಹಾಮಂಗಳಾರತಿ, ಸಂಜೆ 4ಕ್ಕೆ ಜಾತ್ರಾ ಮಹೋತ್ಸವ ಹಾಗೂ ಕೃಷಿ ಮೇಳ ಉದ್ಘಾಟನೆಯನ್ನು ಶಾಸಕ ಭರಮಗೌಡ ಕಾಗೆ ನೆರವೇರಿಸುವದು. ಕೌಲಗುಡ್ಡ ಸಿದ್ಧಾಶ್ರಮದ ಅಮರೇಶ್ವರ ಮಹಾರಾಜರು ದಿವ್ಯ ಸಾನ್ನಿಧ್ಯ, ಗುರುದೇವಾಶ್ರಮದ ಬಸವೇಶ್ವರ ಶ್ರೀಗಳು ನೇತತ್ವ, ಜಾತ್ರಾ ಕಮಿಟಿ ಅಧ್ಯಕ್ಷ ಸುಭಾಷ ಪಾಟೀಲ ಅಧ್ಯಕ್ಷತೆ ವಹಿಸುವರು. ಶಾಸಕ ಲಕ್ಷ್ಮಣ ಸವದಿ ಧ್ವಜಾರೋಹಣ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಚಂದ್ರಶೇಖರ ಗಾಣಿಗೇರ, ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜಯ ಕುಚನೂರೆ, ಸಂಜು ಭಿರಡಿ, ದಾದಾಸಾಬ ಜಂತೆನ್ನವರ ಆಗಮಿಸುವರು. ಸಂಜೆ 6 ಗಂಟೆಗೆ 11 ಗ್ರಾಮಗಳ ದೇವರ ಪಲ್ಲಕ್ಕಿ ಭೇಟಿ ಕಾರ್ಯಕ್ರಮ.

    ಜ. 16ರಂದು ಜೋಡು ಕುದುರೆ ಶರ್ಯತ್ತು, ನಂತರ ಶ್ವಾನ ಪ್ರದರ್ಶನವಿದೆ. ಸಂಜೆ 4 ಗಂಟೆಗೆ ಬಹುಮಾನ ವಿತರಣೆ ಪ್ರಶಾಂತ ಅಪರಾಜ ನೇತತ್ವದಲ್ಲಿ ಜರುಗಲಿದೆ. ಜ. 17ರಂದು ಒಂದು ಕುದುರೆ ಒಂದು ಎತ್ತಿನ ಗಾಡಿ ಶರ್ಯತ್ತು, ಸಂಜೆ ಕೃಷಿ ವಿಚಾರ ಸಂಕಿರಣವಿದೆ. ಜ.18ರಂದು ಸಂಗ್ರಾಮ ಕಲ್ಲು ಎತ್ತುವ ಹಾಗೂ ಗುಂಡು ಎತ್ತುವ ಸರ್ಧೆಯನ್ನು ಮಾಜಿ ಸಚಿವ ಶ್ರೀಮಂತ ಪಾಟೀಲ ಉದ್ಘಾಟಿಸುವರು. ಜ.19ರಂದು ಜೋಡೆತ್ತಿನ ಗಾಡಿ ಶರ್ಯತ್ತು ಜರುಗಲಿದೆ. ಸಂಜೆ ಸತ್ಕಾರ ಸಮಾರಂಭವಿದೆ. ಸತತ 5 ದಿನ ಅನ್ನಸಂತರ್ಪಣೆ ಇದೆ ಎಂದು ಜಾತ್ರಾ ಕಮಿಟಿ ಅಧ್ಯಕ್ಷ ಸುಭಾಷ ಪಾಟೀಲ, ಉಪಾಧ್ಯಕ್ಷ ರಾಜುಗೌಡ ಪಾಟೀಲ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts