More

    ಅಪೋಲೋ ಆಸ್ಪತ್ರೆಯಲ್ಲಿ ಕೋವಿಡ್ ರಿಕವರಿ ಕ್ಲಿನಿಕ್ ಆರಂಭ

    ಮೈಸೂರು: ಕೊರೊನಾ ಚೇತರಿಕೆಯಾದ ವ್ಯಕ್ತಿಗಳಲ್ಲಿ ನಾನಾ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತಿರುವ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲು ಕುವೆಂಪುನಗರದಲ್ಲಿರುವ ಅಪೋಲೊ ಬಿಜಿಎಸ್ ಆಸ್ಪತ್ರೆ ಕೋವಿಡ್ ನಂತರದ ಚಿಕಿತ್ಸೆಗಾಗಿ ಪೋಸ್ಟ್- ಕೋವಿಡ್ ರಿಕವರಿ ಕ್ಲಿನಿಕ್ ಆರಂಭಿಸಲಾಗಿದೆ

    ಅಪೋಲೊ ಬಿಜಿಎಸ್ ಆಸ್ಪತ್ರೆ ವೈದ್ಯ ಡಾ.ಸಂಜೀವ್ ರಾವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊರೊನಾದಿಂದ ಚೇತರಿಸಿಕೊಂಡ ಶೇ.50ರಷ್ಟು ಜನರಲ್ಲಿ ನಾನಾ ರೀತಿಯ ಸಮಸ್ಯೆ ಕಾಣಿಸಿಕೊಳ್ಳತ್ತಿದೆ. ಎದೆ ನೋವು, ಹೃದಯ ಸಮಸ್ಯೆ, ಶ್ವಾಸಕೋಶ ಸಮಸ್ಯೆ, ಸುಸ್ತು, ಊಸಿರಾಟದ ತೊಂದರೆ, ಕೀಲು ನೋವು, ದೃಷ್ಟಿದೋಷ, ಜ್ಞಾನಪ ಸಮಸ್ಯೆ , ಊರಿಊತ, ರಕ್ತ ಹೆಪ್ಪುಗಟ್ಟುವುದು, ನಿದ್ರೆ ಸಮಸ್ಯೆ, ಬಾಯಿ ರುಚಿಸದೆ ಇರುವುದು ಸೇರಿದಂತೆ ಕೊರೊನೇತರ 2ನೇ ಹಂತದ ಸೋಂಕು ಬಾಸುತ್ತಿದೆ. ಈ ರೀತಿ ಲಕ್ಷಣಗಳು ಇರುವವರಯ ಆಸ್ಪತ್ರೆಗೆ ಬರುತ್ತಿದ್ದಾರೆ. ಇಂಥವರಿಗೆ ಸರಿಯಾದ ಚಿಕಿತ್ಸೆ ನೀಡಲು ಅಪೋಲೋ ಆಸ್ಪತ್ರೆಯಲ್ಲಿ ಕೋವಿಡ್ ರಿಕವರಿ ಕ್ಲಿನಿಕ್ ಆರಂಭಿಸಲಾಗಿದೆ. ಇದರಲ್ಲಿ ಕೋವಿಡ್-19 ನಂತರದ ರೋಗಿಗಳಿಗೆ ಅಗತ್ಯವಿರುವ ವಿಶೇಷ ಆರೈಕೆ ಮಾಡಲಾಗುವುದು. ಇದಕ್ಕಾಗಿ ವೈದ್ಯರನ್ನು ತರಬೇತಿ ನೀಡಿದ್ದೇವೆ. ಕೋವಿಡ್ ನಂತರದ ರೋಗಿಗಳು ಸಂಪೂರ್ಣ ಚೇತರಿಸಿಕೊಳ್ಳಲು ಮತ್ತು ಸಹಜ ಸ್ಥಿತಿ ಮರಳಲು ಈ ಕ್ಲಿನಿಕ್ ಸಹಾಯವಾಗಲಿದೆ. ಈ ಕ್ಲಿನಿಕ್ ನಲ್ಲಿ ಎಲ್ಲ ರೀತಿಯ ವಿಷಯ ತಜ್ಞರು, ಮನೋ ವೈದ್ಯರು, ಆಹಾರ ತಜ್ಞರು ಚಿಕಿತ್ಸೆ ನೀಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕೋವಿಡ್-19 ದೇಹದ ಎಲ್ಲಾ ಪ್ರವಮುಖ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ ಪಾರ್ಶ್ವವಾಯು ಮತ್ತು ಹೃದಯ ಸ್ನಾಯುಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಮಧುಮೇಹ ಮತ್ತು ಅಕ ರಕ್ತದೊತ್ತಡದಲ್ಲಿ ಆಗುವ ಬದಲಾವಣೆಯಿಂದ ಕೊರೊನಾದಿಂದ ಚೇತರಿಸಿಕೊಂಡವರು ಹಠಾತ್ ಆಗಿ ಸಾವು ಸಂಬಂವಿಸಿರುವ ಕುರಿತು ವರದಿಯಾಗಿವೆ ಎಂದು ತಿಳಿಸಿದರು.

    ಆಸ್ಪತ್ರೆಯ ಶಾಶ್ವಕೋಶ ತಜ ಡಾ.ಕೆ.ಮಧು ಮಾತನಾಡಿ, ಕೊರೊನಾ ಸೋಂಕು ಶ್ವಾಶಕೋಶ ಮಾತ್ರವಲ್ಲ ದೇಹದ ಇತರೆ ಅಂಗಗಳಲ ಮೇಲೆ ದುಷ್ಪಾರಿಣಾಮ ಬೀರಲಿದೆ. ಕೊರೊನಾದಿಂದ ಮುಕ್ತಿಯಾಗಿ ಚೇತರಿಸಿಕೊಂಡವರಿಗೆ ದೀರ್ಘಕಾಲ ಸಮಸ್ಯೆಗಳು ಕಾಡಲಿವೆ. ಕೊರೊನಾದಿಂದ ಉಂಟಾಗಿವ ದೀರ್ಘಕಾಲಿನ ಸಮಸ್ಯೆಗಳಿಗೆ ಅಪೋಲೋ ಆಸ್ಪತ್ರೆಯಲ್ಲಿ ಕೋವಿಡ್ ರಿಕವರಿ ಕ್ಲಿನಿಕ್ ಚಿಕಿತ್ಸೆ ನೀಡಲಿದೆ ಎಂದರು.

    ಆಸ್ಪತ್ರೆಯ ಆಡಳಿತ ವಿಭಾಗದ ಉಪಾಧ್ಯಕ್ಷ ಎನ್.ಜಿ.ಭರತೇಶ ರೆಡ್ಡಿ ಮಾತನಾಡಿ, ಕೋವಿಡ್ ನಂತರದ ರೋಗ ಲಕ್ಷಣಗಳು ದೇಹದ ಮೇಲೆ ಪರಿಣಾಮ ಬೀರಲಿದೆ. ಇದರಿಂದ ದೀರ್ಘಕಾಲಿಕ ರೋಗಿಗಳಿಗೆ ತುತ್ತಾಗಿ ಮರಣ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಇಂಥ ಮರಣಗಳನ್ನು ಕೋವಿಡ್ ರಿಕವರಿ ಕ್ಲಿನಿಕ್‌ನಿಂದ ನಿಯಂತ್ರಿಸಬಹುದು ಹಾಗೂ ದೀರ್ಘಕಾಲಿಕ ರೋಗಗಳಿಂದ ರೋಗಿಗಳನ್ನು ಪಾರು ಮಾಡಬಹುದು. ಈ ಕ್ಲಿನಿಕ್ ಟೆಲಿ ಮೆಡಿಸನ್ ಸೌಲಭ್ಯವನ್ನು ಒದಗಿಸಲಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts