More

    ಕೊಟ್ಟೂರು-ಉಜ್ಜಿನಿ ರಸ್ತೆಯಲ್ಲಿ ಗುಂಡಿಗಳು; ವಾಹನ ಪ್ರಯಾಣಿಕರಿಗೆ ತೀವ್ರ ತೊಂದರೆ; ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ

    ಕೊಟ್ಟೂರು: ಸತತ ಮಳೆಗೆ ಪಟ್ಟಣದಿಂದ ಉಜ್ಜಿನಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ರಾಡ್‌ಗಳು ಹೊರಗೆ ಬಂದಿವೆ. ಇದರಿಂದ ವಾಹನ ಸಂಚಾರ ತೀರ ಕಷ್ಟವಾಗಿದೆ.

    ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದ ರಸ್ತೆಯಲ್ಲಿ ಎರಡು ಬದಿ ದೊಡ್ಡ ಗುಂಡಿಗಳು ಬಿದಿದ್ದು ನೀರು ನಿಂತಿದೆ. ಇನ್ನೊಂದೆಡೆ ಅಲ್ಲಲ್ಲಿ ರಸ್ತೆಗಳು ಹದಗೆಟ್ಟು ರಾರ್ಡ್‌ಗಳು ಕಾಣಿಸುತ್ತಿದ್ದು, ವಾಹನಗಳು ಓಡಾಡುವುದು ದುಸ್ತರವಾಗಿದೆ. ರಾತ್ರಿ ವೇಳೆ ಸಂಚರಿಸಿದರೆ ಟೈರ್‌ಗೆ ರಾಡ್‌ಗಳು ಚುಚ್ಚಿಕೊಂಡು ಬೀಳುವ ಸಾಧ್ಯತೆ ಇದೆ. ಹೀಗಾಗಿ ವಾಹನ ಸವಾರರು, ಚಾಲಕರು ಎಚ್ಚರಿಕೆಯಿಂದ ಓಡಾಡಬೇಕು. ಇಲ್ಲವೆ ಅಪಾಯ ಕಟ್ಟಿಟ್ಟ ಬುತ್ತಿ. ಪ್ರತಿ ಸಲ ಮಳೆ ಬಂದರೆ ಹೊಲಗಳ ನೀರು ಇದೇ ರಸ್ತೆ ಮೇಲೆ ಹರಿಯುತ್ತದೆ. ಮುಂದೆ ಹೋಗಲು ಜಾಗವಿಲ್ಲದ ಕಾರಣ ರಸ್ತೆ ಕೆರೆಯಂತಾಗುತ್ತದೆ. ಹೊಸಬರು ಈ ರಸ್ತೆ ಮೂಲಕ ತೆರಳಿದರೆ ಅಪಾಯಕ್ಕೆ ಸಿಲುಕಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಚಿತ್ರದುರ್ಗ, ಬೆಂಗಳೂರುಗೆ ಇದೇ ಮಾರ್ಗವಾಗಿ ದಿನವೂ ನೂರಾರು ವಾಹನಗಳು ಓಡಾಡುತ್ತ್ತಿದ್ದು, ಜನ ತೊಂದರೆ ಅನುಭವಿಸುತ್ತಿದ್ದಾರೆ. ಅನಾಹುತ ಸಂಭವಿಸುವ ಮೊದಲೇ ಸಂಬಂಧಿಸಿದ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts