More

    ಸಾಮಾಜಿಕ ಪರಿವರ್ತನೆಗಾಗಿ ಮದ್ಯವರ್ಜನ ಶಿಬಿರ: ವಕೀಲ ಎಂ. ಗುರುಸಿದ್ದನಗೌಡ ಹೇಳಿಕೆ

    ಕೊಟ್ಟೂರು: ಕುಡಿತದ ದುಷ್ಪರಿಣಾಮದಿಂದ ಬಡ ಕುಟುಂಬಗಳು ಆರ್ಥಿಕ, ಸಾಮಾಜಿಕವಾಗಿ ನಲುಗಿ ಹೋಗುತ್ತಿರುವುದನ್ನು ತಪ್ಪಿಸಿ ಸಂತೃಪ್ತ ಸಮಾಜ ನಿರ್ಮಾಣಕ್ಕಾಗಿ ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗಡೆಯವರು, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಭಾಗದಲ್ಲಿ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸುತ್ತಿರುವುದು ಸ್ತುತ್ಯಾರ್ಹ ಎಂದು ವಕೀಲ ಎಂ. ಗುರುಸಿದ್ದನಗೌಡ ಹೇಳಿದರು.

    ಉಜ್ಜಿನಿಯ ಯಾತ್ರಾ ನಿವಾಸದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧ್ದಿ ಯೋಜನೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ, ಸ್ಥಳೀಯ ಕಾಲಕ್ಷೇಪನ ಸಂಘ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಹಮ್ಮಿಕೊಂಡಿರುವ 1613ನೇ ಮದ್ಯವರ್ಜನ ಶಿಬಿರದ ಐದನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಾಮಾಜಿಕ ಪರಿವರ್ತನೆಗಾಗಿ, ಬಡವರ ಅಭಿವೃದ್ಧ್ದಿಗಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಡಾ.ವೀರೇಂದ್ರ ಹೆಗಡೆಯವರು ಗ್ರಾಮೀಣ ಪ್ರದೇಶದಲ್ಲಿ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ ಕುಡಿತಕ್ಕೆ ದಾಸರಾದವರನ್ನು ಈ ಹವ್ಯಾಸದಿಂದ ಮುಕ್ತ್ತಗೊಳಿಸಿ ಉತ್ತಮ ಪ್ರಜೆಗಳನ್ನಾಗಿ ಪರಿವರ್ತಿಸುತ್ತಿರುವುದು ಶ್ಲಾಘನೀಯ ಎಂದರು.

    ಪ್ರತಿ ಸಾರ್ವಜನಿಕ ಚುನಾವಣೆ ನಡೆದಾಗಲೂ ಶೇ.20 ಮದ್ಯವೆಸನಿಗಳು ಹೆಚ್ಚಾಗುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಮತ್ತೊಂದು ಕಡೆ ಸರ್ಕಾರ ಮದ್ಯದಂಗಡಿಗಳನ್ನು ತೆರೆದು ಕುಡಿಯಲು ಉತ್ತೇಜಿಸುತ್ತ್ತಿದೆ. ಸಮಾಜದಲ್ಲಿ ಕುಡಿತ ಹೆಚ್ಚಾಗಲು ಜನರು ಹಾಳಾಗಲು ಪ್ರತ್ಯೇಕ್ಷ ಮತ್ತು ಪರೋಕ್ಷವಾಗಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ಮತ್ತು ರಾಜಕೀಯ ಪಕ್ಷಗಳೇ ಕಾರಣವೆಂದು ಆತಂಕ ವ್ಯಕ್ತಪಡಿಸಿದರು.

    ಎಪಿಎಂಸಿ ನಾಮ ನಿರ್ದೇಶಕ ವಿ. ಲೋಕೇಶ, ಸಾಮಾಜಿಕ ಚಿಂತಕ ಟಿ.ಶ್ರೀಧರ ಶೆಟ್ಟಿ ಮಾತನಾಡಿದರು. ಸಹಕಾರ ಸಂಘದ ಅಧ್ಯಕ್ಷ ಓಬಳೇಶ, ಗ್ರಾಪಂ ಸದಸ್ಯ ಸಿದ್ದೇಶ, ರಂಗಪ್ಪ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸಿದ್ಧೇಶ ಪಾಟೀಲ್ ಮಾತನಾಡಿದರು. ಶಿಬಿರದ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಅಧ್ಯಕ್ಷತೆವಹಿಸಿದ್ದರು. ಕಾಲಕ್ಷೇಪನ ಸಂಘದ ಅಧ್ಯಕ್ಷ ಚನ್ನವೀರಸ್ವಾಮಿ ಸ್ವಾಗತಿಸಿದರು. ಮಹಾಂತೇಶ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts