More

  ಬಿಜೆಪಿ ಆಡಳಿತದಲ್ಲಿ ಬಡವರ ಬದುಕು ದುಸ್ತರ

  ಕೋಲಾರ: ಮಹಿಳೆಯರಿಗೆ ಉಚಿತ ಬಸ್​ ಸೌಲಭ್ಯ ಸೇರಿ ಕಾಂಗ್ರೆಸ್​ ಪ್ರಣಾಳಿಕೆಯ ಎಲ್ಲ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ಜನ ಸಾಮಾನ್ಯರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಕೋಲಾರ ಕಾಂಗ್ರೆಸ್​ ಅಭ್ಯರ್ಥಿ ಕೊತ್ತೂರು ಜಿ.ಮಂಜುನಾಥ್​ ಹೇಳಿದರು.
  ಚಂಜಿಮಲೆ ಗ್ರಾಮದಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿದ್ದ 10 ಕೆ.ಜಿ ಅಕ್ಕಿಗೆ ಬಿಜೆಪಿ ಸರ್ಕಾರ 5 ಕೆ.ಜಿಗೆ ಕಡಿತಗೊಳಿಸಿತು. ವಿದ್ಯಾರ್ಥಿವೇತನ ರದ್ದು, ಕೃಷಿ ಹೊಂಡ, ಡ್ರಿಪ್​ ಇರಿಗೇಷನ್​ ಸಬ್ಸಿಡಿ ಸೇರಿ ಅನೇಕ ಸೌಲಭ್ಯಗಳಿಗೆ ಬಿಜೆಪಿ ಸರ್ಕಾರ ಕತ್ತರಿ ಹಾಕಿದ್ದು, ಈ ಬಾರಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಅವೆಲ್ಲ ಯೋಜನೆಗಳನ್ನು ಮರುಜಾರಿಗೊಳಿಸಲಾಗುವುದು ಎಂದರು.
  ದಿನಬಳಕೆ ವಸ್ತುಗಳಾದ ಅಡುಗೆ ಅನಿಲ, ಹಾಲು, ಮೊಸರು ಸೇರಿ ಹಣೆಗೆ ಇಡುವ ಸ್ಟಿಕ್ಕರ್​ ಮೇಲೆಯೂ ಜಿಎಸ್​ಟಿ ವಿಧಿಸಿ ಬಡವರ ಜೀವನವನ್ನೇ ಬಿಜೆಪಿ ಸರ್ಕಾರ ದುಸ್ತರಗೊಳಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಪ್ರಧಾನಿ ಪದೇಪದೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಆದರೆ ಮೋದಿ ಅವರ ಪ್ರಚಾರದಿಂದಲೇ ಕಾಂಗ್ರೆಸ್​ಗೆ
  ಶೇ.5-&10 ರಷ್ಟು ಮತಗಳು ಹೆಚ್ಚಾಗಲಿವೆ. ಅತಿವೃಷ್ಟಿ&ಅನಾವೃಷ್ಟಿ ಉಂಟಾಗಿ ರಾಜ್ಯದಲ್ಲಿ ಸಾವಿರಾರು ಜನರು ಮೃತರಾದರೂ ಕರ್ನಾಟಕದತ್ತ ತಿರುಗಿ ನೋಡದ ಅವರಿಗೆ ಚುನಾವಣೆ ಸಂದರ್ಭದಲ್ಲಿ ಜ್ಞಾನೋದಯವಾದಂತಿದೆ ಎಂದರು. ಕ್ಷೇತ್ರದಲ್ಲಿ ನನ್ನ ಬಗ್ಗೆ ಟೀಕೆ ಮಾಡುವವರಿಗೆ ಚುನಾವಣೆ ಮೂಲಕ ಉತ್ತರ ಕೊಡುತ್ತೇನೆ. ಮುಳಬಾಗಿಲಿನಲ್ಲಿ ಶಾಸಕನಾಗಿದ್ದ
  ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ದೇವಸ್ಥಾನ, ಮಂದಿರ&ಮಸೀದಿಗಳ ಜೀಣೋರ್ದ್ಧಾರಗೊಳಿಸಿದಂತೆ ಕೋಲಾರ ಕ್ಷೇತ್ರದಲ್ಲಿಯೂ ಅಂತಹುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು. ಎಂಎಲ್​ಸಿ ಅನಿಲ್​ಕುಮಾರ್​ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್​ ವರ್ಚಸ್ಸನ್ನು ಸಹಿಸದ ವಿಪಕ್ಷಗಳು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಸದ್ಯ ಇಂತಹ ಅಪ್ರಚಾರಗಳತ್ತ ಗಮನಹರಿಸುವುದಕ್ಕಿಂತ ಕೋಲಾರದಲ್ಲಿ ಕಾಂಗ್ರೆಸ್​ ಗೆಲ್ಲಿಸುವುದೇ ಮುಖ್ಯವಾಗಿದ್ದು, ಒಗ್ಗಟ್ಟಿನಿಂದ ಕೆಲಸ ಮಾಡಲಾಗುತ್ತಿದೆ ಎಂದರು.
  ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್​ ಬಲಿಷ್ಠವಾಗಿದೆ. ಕ್ಷೇತ್ರದಲ್ಲಿ 20 ವರ್ಷಗಳ ನಂತರ ಕಾಂಗ್ರೆಸ್​ ಗೆಲುವಿನ
  ಹಸ್ತ ಚಾಚಲಿದ್ದು, ಇದು ಸಿದ್ದರಾಮಯ್ಯ ಅವರ ಗೆಲುವಾಗಲಿದೆ. ಕಾಂಗ್ರೆಸ್​ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡಲಾಗುತ್ತಿದೆ ಎಂದರು.
  ಡಿಸಿಸಿ ಬ್ಯಾಂಕ್​ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕಡಗಟ್ಟೂರು ದಯಾನಂದ್​, ನಂದಿನಿ ಪ್ರವಿಣ್​ಗೌಡ, ಯೂನಿಯನ್​ ನಿರ್ದೇಶಕ ಚಂಜಿಮಲೆ ರಮೇಶ್​, ತಿಪ್ಪೇನಹಳ್ಳಿ ನಾಗೇಶ್​, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಪ್ರಸಾದ್​ ಬಾಬು, ಗ್ರಾಮೀಣ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ವಿಜಯಕುಮರ್​, ನಗರಸಭಾ ಸದಸ್ಯ ಅಂಬರೀಶ್​ ಮತ್ತಿತರರಿದ್ದರು.

  ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್​ ಅಧಿಕಾರಕ್ಕೆ ಬರುವುದು ಗ್ಯಾರಂಟಿ. ಬಡವರಿಗೆ 10 ಕೆಜಿ ಉಚಿತ ಅಕ್ಕಿ ವಿತರಣೆ, ಜಿಲ್ಲೆಯ ಅಂತರಗಂಗೆ ಸೇರಿ ಎಲ್ಲ ಧಾರ್ಮಿಕ ಸ್ಥಳಗಳು ಒಳಗೊಂಡಂತೆ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಕೋಲಾರ ನಗರದ ಸುತ್ತಲೂ ವರ್ತುಲ ರಸ್ತೆ, ನಗರದ ಒಳಭಾಗದಲ್ಲೂ ಸುಗಮ ಸಂಚಾರ, ಬಡವರಿಗೆ ಹಾಗೂ ಕಾರ್ಮಿಕರಿಗೆ ಹೈಟೆಕ್​ ಆಸ್ಪತ್ರೆ ವ್ಯವಸ್ಥೆ, ಎಪಿಎಂಸಿ ಮಾರುಕಟ್ಟೆಗೆ ಹೆಚ್ಚುವರಿ ಜಾಗ ಮಂಜೂರು ಮಾಡಿ ಮೇಲ್ದರ್ಜೆಗೆ ಏರಿಸಲಾಗುವುದು.

  l ಕೊತ್ತೂರು ಜಿ.ಮಂಜುನಾಥ್​,
  ಕೋಲಾರ ಅಭ್ಯರ್ಥಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts