More

    ಜಿಲ್ಲೆ ಅಭಿವೃದ್ಧಿಗೆ ಕಾಂಗ್ರೆಸ್​ ಬೆಂಬಲಿಸಿ

    ಕೋಲಾರ: ನನ್ನ ಬದುಕನ್ನು ದೇವರು ಚೆನ್ನಾಗಿಟ್ಟಿದ್ದಾರೆ. ನನಗೆ ಇನ್ನೇನೂ ಬೇಕಾಗಿಲ್ಲ. ಹಾಗಾಗಿ ನಿಮ್ಮ ಸೇವೆಗಾಗಿ ನನ್ನನ್ನು ಗೆಲ್ಲಿಸಿಕೊಳ್ಳಿ ಎಂದು ಕಾಂಗ್ರೆಸ್​ ಅಭ್ಯರ್ಥಿ ಕೊತ್ತೂರು ಮಂಜುನಾಥ್​ ಮನವಿ ಮಾಡಿದರು.
    ನಗರದ ವಿವಿಧ ಬಡಾವಣೆಗಳಲ್ಲಿ ಭಾನುವಾರ ರಾತ್ರಿ ಭರ್ಜರಿ ರೋಡ್​ ಶೋನಲ್ಲಿ ಅವರು ಮಾತನಾಡಿದರು. ನಾನು ಮುಳಬಾಗಿಲಿನಲ್ಲಿ ಶಾಸಕನಾಗಿದ್ದ ಅವಧಿಯಲ್ಲಿ ಕೆಲಸ ಮಾಡಿದ ರೀತಿಯಲ್ಲಿ ಕೋಲಾರದಲ್ಲೂ ಪ್ರಾಮಾಣಿಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ಇಡಿ ರಾಜ್ಯದಲ್ಲೇ ಕೋಲಾರವನ್ನು ಮಾದರಿ ಕ್ಷೇತ್ರವನ್ನಾಗಿ
    ಮಾಡುತ್ತೇನೆ ಎಂದರು.
    ಕೋಲಾರದಲ್ಲಿ ರಸ್ತೆಗಳು ಹಾಳಾಗಿವೆ, ನಡೆಸಿರುವ ಕಾಮಗಾರಿಗಳು ಗುಣಮಟ್ಟವಾಗಿಲ್ಲ. ವಿದ್ಯುತ್​ ತಂತಿಗಳ ಸಮಸ್ಯೆ ಇದೆ. ಒಳಚರಂಡಿ ಯೋಜನೆ ಹಾಳಾಗಿ ಎಲ್ಲೆಡೆ ಕೊಳಚೆ ಕಟ್ಟಿಕೊಂಡಿದೆ. ಇದನ್ನೆಲ್ಲ ಸರಿಪಡಿಸಲು ಕನಿಷ್ಠ 500 ಕೋಟಿ ರೂಪಾಯಿ ಅಗತ್ಯವಿದೆ. ಮುಂದೆ ಕಾಂಗ್ರೆಸ್​ ಸರ್ಕಾರ ಬಂದಾಗ ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್​ ಮುಖ್ಯಮಂತ್ರಿಯಾಗಲಿದ್ದಾರೆ. ನಾನು ಕೋಲಾರ ಕ್ಷೇತ್ರದ ಅಭಿವೃದ್ಧಿಗೆ ಕೇಳಿದರೆ 500 ಅಲ್ಲ 1000 ಕೋಟಿ ರೂ. ಬೇಕಾದರೂ ಅನುದಾನ ನೀಡುತ್ತಾರೆ ಎಂದರು. ಬಿಜೆಪಿ ಮತ್ತು ಜೆಡಿಎಸ್​ನವರು ಯಾವುದೇ ಸ್ಟಾರ್​ ಪ್ರಚಾರಕರನ್ನು ಕರೆತಂದು ಮತ ಯಾಚಿಸಲಿ, ನನಗೇನೂ ಯೋಚನೆಯಿಲ್ಲ. ಜನ ಸ್ಟಾರ್​ ಪ್ರಚಾರಕರನ್ನು ನೋಡಲು ಬರುತ್ತಾರೆ. ಆದರೆ ವೋಟ್​ ಹಾಕಲ್ಲ ಎಂದು ಮೋದಿ ರ್ಯಾಲಿ ಕುರಿತು ವ್ಯಂಗ್ಯ ಮಾಡಿದ ಕೊತ್ತೂರು ಮಂಜುನಾಥ್​ ಅವರು, ಜಿಲ್ಲೆಯಲ್ಲಿ ಬಿಜೆಪಿ ಹವಾ ಇಲ್ಲ. ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ನಾಯಕರು ಇನ್ನು ಹತ್ತು ಬಾರಿ ಬಂದು ಹೋದರೂ ಭಯವಿಲ್ಲ ಎಂದರು. ಬಡವರ ಬದುಕನ್ನು ಕಸಿದು ಕೊಂಡಿರುವ ಬಿಜೆಪಿಯವರು ಭಾಷಣಗಳ ಮೂಲಕ ಮತದಾರರನ್ನು ಮೋಡಿ ಮಾಡಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರದ ಬೆಲೆ ಏರಿಕೆ, ಜಿಎಸ್​ಟಿ, ಪೆಟ್ರೋಲ್​, ಅಡುಗೆ ತೈಲ, ಸೇರಿದಂತೆ ಬೆಲೆ ಹೆಚ್ಚಳದಿಂದ ಜನ ತತ್ತರಿಸಿದ್ದಾರೆ. ರಾಜ್ಯದ ಜನರು ಬದಲಾವಣೆ ಬಯಸಿದ್ದಾರೆ. ಹಾಗಾಗಿ ಕಾಂಗ್ರೆಸ್​ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತ ಎಂದರು. ವಿಧಾನ ಪರಿಷತ್​ ಸದಸ್ಯ ನಜೀರ್​ ಅಹ್ಮದ್​ ಮಾತನಾಡಿ, ಕೋಮುವಾದಿ ಬಿಜೆಪಿಯನ್ನು ಈಗಾಗಲೇ ರಾಜ್ಯದ ಜನ ತಿರಸ್ಕರಿಸಿದ್ದಾರೆ. ಬಿಜೆಪಿ ಸೋಲಿನ ಸುಳಿವು ಕೆಂದ್ರ ನಾಯಕರಿಗೆ ಗೊತ್ತಾಗಿದೆ. ಅದಕ್ಕಾಗಿ ಕೇಂದ್ರದ ನಾಯಕರು ರಾಜ್ಯದಲ್ಲಿ ಮತ ಯಾಚನೆಗೆ ಪದೇಪದೆ ಬರುತ್ತಿದ್ದಾರೆ. ರಾಜ್ಯದ ಜನ ಬಿಜೆಪಿಯನ್ನು ಈಗಾಗಲೇ ತಿರಸ್ಕರಿಸಿದ್ದಾರೆ ಎಂದರು.ಎಂಎಲ್​.ಸಿ. ಎಂ.ಎಲ್​.ಅನಿಲ್​ ಕುಮಾರ್​ ಮಾತನಾಡಿ, ತಾಲ್ಲೂಕಿನಲ್ಲಿ ಕಾಂಗ್ರೆಸ್​ ಬಲಿಷ್ಠವಾಗಿದೆ. ಸಿದ್ದರಾಮಯ್ಯ ಅವರ ಹವಾ ಕ್ಷೇತ್ರದಲ್ಲಿದೆ. ಕೊತ್ತೂರು ಮಂಜುನಾಥ್​ ಗೆದ್ದರೆ ಸಿದ್ದರಾಮಯ್ಯನವರು ಕೋಲಾರ ಕ್ಷೇತ್ರದಲ್ಲಿ ಗೆದ್ದಂತೆ. ನಮ್ಮ ಚುನಾವಣೆ ಪ್ರಚಾರ ತಡವಾದರೂ ಹೋದ ಕಡೆಯಲ್ಲಿ ಜನರು ಅಭೂತಪೂರ್ವವಾಗಿ ಸ್ವಾಗತಿಸುತ್ತಿದ್ದಾರೆ. ಪಕ್ಷಕ್ಕೆ ಅನೇಕ ಮುಖಂಡರು ಸೇರ್ಪಡೆಯಾಗುತ್ತಿದ್ದಾರೆ ಎಂದರು. ದಲಿತ ಮುಖಂಡರಾದ ಸಿ.ಎಂ.ಮುನಿಯಪ್ಪ, ಕೆ.ಎ.ಅನ್ವರ್​ ಪಾಷಾ, ಎಂ.ಶ್ರೀಕೃಷ್ಣ, ಮುನಿ ಆಂಜಿನಪ್ಪ, ಚೆಂಜಿಮಲೆ ರಮೇಶ್​, ನಂದಿನಿ ಪ್ರವಿಣ್​, ನಗರಸಭೆ ಸದಸ್ಯ ಅಮರೇಶ್​, ಮುರಳಿಗೌಡ, ಯುವ ಕಾಂಗ್ರೆಸ್​ ಅಧ್ಯಕ್ಷ ಜನ್ನಪ್ಪನ್ನಹಳ್ಳಿ ನವೀನ್​ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts