More

    ಕರೊನಾ ದೇವಿಗೆ ಹೋಳಿಗೆ ನೈವೇದ್ಯ! ಗ್ರಾಮದ ಜನರಿಂದ ಮುಂದುವರಿದ ವಿಚಿತ್ರ ಆಚರಣೆ

    ಕೊಟ್ಟೂರು: ತಾಲೂಕಿನ ಸುಟ್ಟಕೋಡಿಹಳ್ಳಿ ಗ್ರಾಮಸ್ಥರು ಕೋವಿಡ್ ತೊಲಗಲಿ ಎಂದು ಪ್ರಾರ್ಥಿಸಿ ಊರ ಹೊರಗಿನ ಬೇವಿನ ಮರಕ್ಕೆ ಅಲಂಕಾರ ಮಾಡಿ ಕರೊನಾ ದೇವಿ ಹೆಸರಿಟ್ಟು ಹೋಳಿಗೆ ನೈವೇದ್ಯ ಇಟ್ಟು ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು.

    ಕಳೆದ ವರ್ಷವೂ ಗ್ರಾಮಸ್ಥರು ಮೊಸರನ್ನ ಎಡೆ ಮಾಡಿ ಪೂಜೆ ಸಲ್ಲಿಸಿದ್ದರಿಂದ ಗ್ರಾಮಕ್ಕೆ ಒಳಿತಾಯಿತು ಎಂದು ನಂಬಿಕೆಯೊಂದಿಗೆ ಈ ಬಾರಿ ಕರೊನಾ ಎರಡನೇ ಅಲೆಯಿಂದ ರಕ್ಷಿಸುವಂತೆ ಹೋಳಿಗೆ ಎಡೆ ಇಟ್ಟು ಪ್ರಾರ್ಥಿಸಿದ್ದಾರೆ. ಗ್ರಾಮದ ಪೂರ್ವ ದಿಕ್ಕಿನಲ್ಲಿರುವ ಬೇವಿನ ಮರಕ್ಕೆ ಹಸಿರು ವಸ್ತ್ರ ಸುತ್ತಿ, ಅರಿಷಿಣ, ಕುಂಕುಮ ಹಚ್ಚಿ ಮಣ್ಣಿನ ಕುಡಿಕೆ, ಹಸಿರು ಬಳೆ, ಹೂ, ಬಾಳೆ ಹಣ್ಣು ಬೇವಿನ ಸೊಪ್ಪಿನ್ನೊಂದಿಗೆ ಗ್ರಾಮದ ನೂರಾರು ಜನರು ಒಟ್ಟಿಗೆ ತೆರಳಿ ಕರೊನಮ್ಮಗೆ ಅರ್ಪಿಸಿದರು.

    ಈ ವೇಳೆ ಜನರು ಕರೊನಾ ನಿಯಮ ಪಾಲನೆ ಮಾಡಲಿಲ್ಲ. ಮನೆಗೆ ಬಂದ ಗ್ರಾಮಸ್ಥರು ಕರೊನಾ ದೇವಿ ಹೆಸರೇಳಿಕೊಂಡು ಹೋಳಿಗೆ, ಮಾವಿನ ಸೀಕರಣೆ, ತುಪ್ಪದೊಂದಿಗೆ ಸವಿದು ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts