More

    ಮೌಲ್ಯಮಾಪನವಾಗದ 10 ಪುಟಗಳು!; ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆವಾಂತರ

    ನಕಲು ಉತ್ತರ ಪತ್ರಿಕೆಯಿಂದ ಬೆಳಕಿಗೆ

    ಕೊಟ್ಟೂರು (ವಿಜಯನಗರ):
    ದ್ವಿತೀಯ ಪಿಯು ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪಕರ ಎಡವಟ್ಟು ಮತ್ತು ಬೇಜವಾಬ್ದಾರಿಯಿಂದಾಗಿ ಇಲ್ಲಿನ ಸನ್ನಿಧಿ ಪಪೂ ವಿದ್ಯಾರ್ಥಿ ಜಿ.ಎ.ಶೆಕ್ಷಾವಲಿ ಸಂಕಷ್ಟ ಎದುರಿಸಿದ್ದಾನೆ. 14 ಪುಟಗಳ ಉತ್ತರ ಪತ್ರಿಕೆಯಲ್ಲಿ ನಾಲ್ಕು ಪುಟಗಳನ್ನು ಮಾತ್ರ ಮೌಲ್ಯಮಾಪನಮಾಡಿ, ಉಳಿದವನ್ನು ಹಾಗೆಯೇ ಬಿಟ್ಟಿರುವುದು ಬೆಳಕಿಗೆ ಬಂದಿದೆ.

    ಜೀವಶಾಸ್ತ್ರ ವಿಷಯದಲ್ಲಿ 14 ಪುಟಗಳ ಉತ್ತರ ಬರೆದು, ಅದನ್ನು ಮುಖಪುಟದಲ್ಲಿ ವಿದ್ಯಾರ್ಥಿ ನಮೂದಿಸಿದ್ದಾನೆ. ಕೊನೆಯ ಪುಟದಲ್ಲಿ ಪರೀಕ್ಷೆ ಕೇಂದ್ರದ ಮೇಲ್ವಿಚಾರಕ ಸಹಿಯೂ ಮಾಡಿದ್ದಾರೆ. ಮೊದಲ ನಾಲ್ಕು ಪುಟಗಳಲ್ಲಿ ಜೀವಶಾಸ್ತ್ರದ ಉತ್ತರ ಬರೆದಿರುವ ವಿದ್ಯಾರ್ಥಿ, ಎರಡು ಪುಟಗಳನ್ನು ಖಾಲಿ ಬಿಟ್ಟು, ನಂತರದ ಎಂಟು ಪುಟಗಳಲ್ಲಿ ಉತ್ತರ ಬರೆದಿದ್ದಾನೆ. ಆದರೆ, ಸಹಾಯಕ ಮೌಲ್ಯಮಾಪಕ ನಾಲ್ಕು ಪುಟಗಳನ್ನಷ್ಟೇ ಮೌಲ್ಯಮಾಪನ ಮಾಡಿ, 21 ಅಂಕ ನೀಡಿ ಮುಕ್ತಾಮಾಡಿದ್ದಾನೆ. ಉಳಿದ 10 ಪುಟಗಳನ್ನು ಕಣ್ಣೆತ್ತಿಯೂ ನೋಡಿಲ್ಲ. ಇದನ್ನು ಉಪ ಮುಖ್ಯ ಮೌಲ್ಯಮಾಪಕರೂ ಪರಿಶೀಲಿಸಿಲ್ಲ. ಕೇವಲ 21 ಅಂಕ ಬಂದಿದ್ದನ್ನು ನೋಡಿ ಗಾಭರಿಯಾದ ಶೆಕ್ಷಾವಲಿ, ಇಲಾಖೆಯಿಂದ ನಕಲು ಉತ್ತರ ಪತ್ರಿಕೆ ತರಿಸಿಕೊಂಡಾಗ ವಿಷಯ ಗೊತ್ತಾಗಿದೆ. ಈಗ ಮರುಮೌಲ್ಯಮಾಪನ ಮಾಡಲು ಕೋರಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts