More

    ಮಠ-ಮಂದಿರಗಳು ಮಕ್ಕಳಿಗೆ ಸಂಸ್ಕಾರ, ಶಿಕ್ಷಣ ನೀಡುವ ಕೇಂದ್ರ; ಸಂತೋಷಕುಮಾರ

    ರಾಣೆಬೆನ್ನೂರ: ಮಠಗಳು ಮಕ್ಕಳಿಗೆ ಸಂಸ್ಕಾರ ಹಾಗೂ ಶಿಕ್ಷಣ ನೀಡುವ ಧಾರ್ಮಿಕ ಕೇಂದ್ರಗಳು ಎಂದು ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಹೇಳಿದರು.
    ತಾಲೂಕಿನ ಕೋಟಿಹಾಳ ಗ್ರಾಮದಲ್ಲಿ ಭಾನುವಾರ ನೂತನವಾಗಿ ನಿರ್ಮಾಣವಾದ ಶ್ರೀ ಸಿದ್ದೇಶ್ವರ ದೇವಸ್ಥಾನ ಮತ್ತು ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಉದ್ಘಾಟನೆಯ ಧರ್ಮಸಭೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಇಂದು ದೇಶದಲ್ಲಿ ಶಾಲೆಗಳಿಂತ ಮಠಗಳು ಹೆಚ್ಚಾಗುತ್ತಿವೆ. ಮಕ್ಕಳಿಗೆ ಸಂಸ್ಕಾರ ನೀಡುವ ಜತೆಗೆ ಶಿಕ್ಷಣ ನೀಡಲಾಗುತ್ತಿದೆ. ಪಾಲಕರು ಸಹ ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರಯುತ ಶಿಕ್ಷಣ ನೀಡುವ ಕೆಲಸ ಮಾಡಬೇಕಾಗಿದೆ ಎಂದರು.
    ಅವರಗೊಳ್ಳ ಹಿರೇಮಠದ ಓಂಕಾರ ಶಿವಾಚಾರ್ಯರು, ದಿಂಡದಹಳ್ಳಿ ಪಶುಪತಿ ಶಿವಾನಂದ ಶಿವಾಚಾರ್ಯರು, ಲಿಂಗದಹಳ್ಳಿ ವೀರಭದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
    ಎಪಿಎಂಸಿ ಮಾಜಿ ಅಧ್ಯಕ್ಷ ಆರ್.ಎಚ್. ಪಾಟೀಲ, ಗ್ರಾಮದ ಮುಖಂಡರಾದ ಪಂಚಪ್ಪ ಮಾಗನೂರ, ಈರನಗೌಡ ಎಡಚಿ, ಬಸನಗೌಡ ಪಾಟೀಲ, ದೊಡ್ಡನಗೌಡ ಎಡಚಿ, ಗಣೇಶ ದಿಟೋರ, ಭರಮಪ್ಪ ಉಜ್ಜನಗೌಡ್ರ, ಶೇಖರ ಯಡಚಿ, ಶೀಲಾ ಹರಿಹರ, ಹೊಳೆಯಪ್ಪ ನಾಗೇನಹಳ್ಳಿ, ಸಿದ್ದಪ್ಪ ಮಾಗೋಡ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts