More

    ಕೋಟಿಗೊಬ್ಬ-3 ಟ್ರೇಲರ್​ನಲ್ಲಿ ಕಿಚ್ಚ ಸುದೀಪ್​ ಅಬ್ಬರ; 44 ನಿಮಿಷಗಳಲ್ಲಿ 2.7 ಲಕ್ಷಕ್ಕೂ ಹೆಚ್ಚು ವೀಕ್ಷಣೆ!

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ-3 ಚಿತ್ರ ತಂಡ ಅಭಿಮಾನಿಗಳಿಗೆ ಶಿವರಾತ್ರಿ ಉಡುಗೊರೆ ಎಂದು ಟ್ರೇಲರ್​ ಬಿಡುಗಡೆ ಮಾಡಿದೆ.

    ಕಿಚ್ಚ ಸುದೀಪ್​ ಒಂದೇ ಒಂದು ಮಾತಾಡದೇ ಅಬ್ಬರಿಸಿದ್ದಾರೆ. ಹಿನ್ನೆಲೆಯಲ್ಲಿ ರವಿ ಶಂಕರ್​ ಕೋಟಿಗೊಬ್ಬನ ಮಾತುಗಳು ಕೇಳುತ್ತವೆ.

    ಕೈಯಲ್ಲಿ ಬೇಡಿ ಹಾಕಿಕೊಂಡು ಪೊಲೀಸರಿಗೆ ಹೇಳಿಕೆ ನೀಡುತ್ತಿರುವ ರವಿ ಶಂಕರ್​, “ಆತ ಇಂಟರ್​ನ್ಯಾಷನಲ್​ ಲೆವೆಲ್​ ಸಾರ್​, ಬಿಡಬೇಡಿ. ಬಿಟ್ರೆ ಮತ್ತೆ ಸಿಗೋಲ್ಲ” ಎನ್ನುತ್ತಿದ್ದಂತೆ ಕಿಚ್ಚ ಖದರ್​ ಕಂಡು ಬರುತ್ತದೆ. ಎಂದಿನಂತೆ ತಮ್ಮ ಸ್ಟೈಲಿಷ್​​​ ಲುಕ್​ನಲ್ಲಿ ಕೈಯಲ್ಲಿ ಸಿಗರೇಟ್​ ಹಿಡಿದ ಕಿಚ್ಚ ರಂಜಿಸಿದ್ದಾರೆ. ಅರ್ಜುನ್​ ಜನ್ಯ ನೀಡಿರುವ ಬಿಜಿಎಂ ಅಭಿಮಾನಿಗಳನ್ನು ಎದ್ದೆದ್ದು ಕುಣಿಯುವಂತೆ ಮಾಡುತ್ತದೆ.

    ಯೂಟ್ಯೂಬ್​ನಲ್ಲಿ ಟ್ರೇಲರ್​ ಬಿಡುಗಡೆಯಾದ 44 ನಿಮಿಷದಲ್ಲಿ 2ವರೆ ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡು ಮುನ್ನುಗುತ್ತಿದೆ. ‘ಕೋಟಿಗೊಬ್ಬ 3’ ಚಿತ್ರವನ್ನು ಶಿವಕಾರ್ತಿಕ್ ನಿರ್ದೇಶನ ಮಾಡಿದ್ದು, ‘ರಾಮ್​ಬಾಬು ಪ್ರೊಡಕ್ಷನ್ಸ್’ ಬ್ಯಾನರ್​ನಲ್ಲಿ ಸೂರಪ್ಪ ಬಾಬು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಸುದೀಪ್ ಜತೆ ಮಡೊನ್ನ ಸೆಬಾಸ್ಟಿಯನ್, ಶ್ರದ್ಧಾ ದಾಸ್, ಪಿ. ರವಿಶಂಕರ್, ಅಫ್ತಾಬ್ ಶಿವದಾಸಾನಿ ಹಾಗೂ ನವಾಬ್ ಷಾ ಮುಂತಾದವರು ಅಭಿನಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts