More

    ಕೋಟೆಬಾಗಿಲು ದೇವಳದಲ್ಲಿ ದೃಢಕಲಶಾಭಿಷೇಕ

    ಮೂಡುಬಿದಿರೆ: ಕೋಟೆಬಾಗಿಲು ಶ್ರೀ ವೀರಮಾರುತಿ ದೇವಸ್ಥಾನ ಬ್ರಹ್ಮಕಲಶೋತ್ಸವಕ್ಕೆ ಪೂರಕವಾಗಿ ಸಪರಿವಾರ ದೇವರಿಗೆ ದೃಢ ಸಂಪೋಕ್ಷಣಾ ಕಲಶಾಭಿಷೇಕ ಎಡಪದವು ಮುರಳೀಧರ ತಂತ್ರಿ ಪೌರೋಹಿತ್ಯದಲ್ಲಿ ಶನಿವಾರ ಮತ್ತು ಭಾನುವಾರ ನೆರವೇರಿತು.

    ಪ್ರಧಾನ ಅರ್ಚಕ ದತ್ತಾತ್ರೇಯ ಭಟ್ ಪೂಜೆ ನೆರವೇರಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉದಯ ಕುಮಾರ್ ಹೆಗ್ಡೆ, ಗೌರವ ಅಧ್ಯಕ್ಷ ದೇವೇಂದ್ರ ಹೆಗ್ಡೆ, ಡಾ.ಸುರೇಂದ್ರ ಕುಮಾರ್ ಹೆಗ್ಡೆ, ನಂದಕುಮಾರ್ ಹೆಗ್ಡೆ, ದೇವಸ್ಥಾನದ ಆಡಳಿತ ಮೊಕ್ತೇಸರ ಶ್ಯಾಮ ಹೆಗ್ಡೆ, ಕಾರ್ಯದರ್ಶಿ ಶೇಖರ್ ಹೆಗ್ಡೆ, ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ನವೀನ್ ಹೆಗ್ಡೆ, ಕಾರ್ಯದರ್ಶಿ ಪ್ರಣಿಲ್ ಹೆಗ್ಡೆ, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ವಿನೋದಾ ಜಿ.ಹೆಗ್ಡೆ, ಕಾರ್ಯದರ್ಶಿ ಅಶ್ವಿನಿ ಎನ್.ಹೆಗ್ಡೆ ಮತ್ತಿತರರು ಭಾಗವಹಿಸಿದ್ದರು.

    ಧಾರ್ಮಿಕ ವಿಧಿ ವಿಧಾನ

    ಶನಿವಾರ ಸಾಯಂಕಾಲ ದೇವತಾ ಪ್ರಾರ್ಥನೆಯೊಂದಿಗೆ ಧಾರ್ಮಿಕ ವಿಧಿವಿಧಾನ ಆರಂಭಗೊಂಡಿತು. ವಾಸ್ತು ಹೋಮ, ಪ್ರಾಕಾರ ಬಲಿ ನಡೆಯಿತು. ಭಾನುವಾರ ಪುಣ್ಯಾಹ ವಾಚನ, ಗಣಪತಿ ಯಾಗ ಬಳಿಕ ಮಹಾಗಣಪತಿ ಮತ್ತು ದುರ್ಗಾಪರಮೇಶ್ವರಿ ದೇವರಿಗೆ 25 ಕಲಶಾಭಿಷೇಕ, ವೀರಮಾರುತಿ ದೇವರಿಗೆ 49 ಕಲಶಾಭಿಷೇಕ, ನಾಗಸನ್ನಿಧಿಯಲ್ಲಿ ಆಶ್ಲೇಷ ಬಲಿ, ವಟು ಆರಾಧನೆ ಜರುಗಿತು. ಹೆಗ್ಗಡೆ ಯುವ ಘಟಕದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಪ್ರಚಂಡ ಪಾವಮಾನಿ’ ಯಕ್ಷಗಾನ ಬಯಲಾಟ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts