More

    ಮದ್ಯ ಬಳಕೆಗೆ ಅವಕಾಶ ನೀಡಿ : ಕೊರವೇ ಒತ್ತಾಯ

    ಮಡಿಕೇರಿ:
    ಸಮಾರಂಭಗಳಲ್ಲಿ ಮದ್ಯವನ್ನು ಬಳಸುವುದು ಕೊಡಗಿನ ಸಂಪ್ರದಾಯವಾಗಿದೆ. ಚುನಾವಣೆ ನೀತಿ ಸಂಹಿತೆಯ ನೆಪದಲ್ಲಿ ಇದಕ್ಕೆ ಕಡಿವಾಣ ಹಾಕುವುದು ಸರಿಯಲ್ಲವೆಂದು ಕೊಡಗು ರಕ್ಷಣಾ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ.

    ಈ ಬಗ್ಗೆ ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿರುವ ಸಣಘಟನೆ ಅಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ, ಸಮಾರಂಭಗಳಲ್ಲಿ ಮದ್ಯವನ್ನು ಬಳಸದಂತೆ ಕಡಿವಾಣ ಹಾಕಿರುವುದರಿಂದ ಕೊಡಗಿನ ಜನರ ಭಾವನೆಗೆ ದಕ್ಕೆಯಾಗಿದೆ. ಮದ್ಯ ಬಳಕೆಗೆ ಅವಕಾಶ ನೀಡದಿದ್ದರೆ ಕೊಡವ ಸಮಾಜ, ಗೌಡ ಸಮಾಜ ಸೇರಿದಂತೆ ವಿವಿಧ ಸಮಾಜಗಳ ಸಹಕಾರದೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಚುನಾವಣೆ ಸಂದರ್ಭ ರೂ.೧೧,೫೦೦ ಸನ್ನದು ಶುಲ್ಕ ಪಾವತಿಸಿ ಸಭೆ, ಸಮಾರಂಭಗಳಲ್ಲಿ ಮದ್ಯವನ್ನು ಬಳಕೆ ಮಾಡಲು ಅನುಮತಿ ಪಡೆಯಬಹುದಾಗಿತ್ತು. ಆದರೆ ಅಬಕಾರಿ ಇಲಾಖೆಯ ಅಧಿಕಾರಿಗಳ ಸೂಚನೆಯ ಹಿನ್ನೆಲೆ ಏ.೧೨ ರಿಂದ ಅನುಮತಿ ನೀಡಲಾಗುತ್ತಿಲ್ಲ. ಇದು ತಪ್ಪು ನಿರ್ಧಾರವಾಗಿದ್ದು, ಅಧಿಕಾರಿಗಳು ಜಿಲ್ಲೆಯ ಜನರ ಭಾವನೆಗಳಿಗೆ ದಕ್ಕೆ ತಾರದೆ ತಮ್ಮ ನಿಲುವನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಕೊಡಗಿನಲ್ಲಿ ಯಾವುದೇ ಸಮಾರಂಭಗಳಲ್ಲಿ ಮದ್ಯವನ್ನು ನ್ಯಾಯಯುತವಾಗಿ ಖರೀದಿಸಿ ವಿತರಿಸಲಾಗುತ್ತದೆ. ಅಲ್ಲದೆ ಇಲ್ಲಿಯವರೆಗೆ ಮದ್ಯ ಸೇವನೆಯಿಂದ ಅಶಾಂತಿ ಸೃಷ್ಟಿಯಾದ ಉದಾಹರಣೆಗಳಿಲ್ಲ. ರಾಜಕಾರಣಿಗಳು ನೀಡುವ ಮದ್ಯವನ್ನು ಬಳಕೆ ಮಾಡುವಷ್ಟು ಕೀಳು ಮಟ್ಟಕ್ಕೆ ಇಲ್ಲಿನ ಜನ ಇಳಿದಿಲ್ಲ. ವಿನಾಕಾರಣ ಜನರಿಗೆ ತೊಂದರೆ ನೀಡದೆ ಯಥಾಸ್ಥಿತಿ ಕಾಯ್ದುಕೊಂಡು ಮದ್ಯ ಬಳಕೆಗೆ ಅವಕಾಶ ನೀಡಬೇಕೆಂದು ಪವನ್ ಪೆಮ್ಮಯ್ಯ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts