More

    ಕೋಟತಟ್ಟು ಪಿಡಿಒ – ಕಾರ್ಮಿಕರ ವಾಗ್ವಾದ, ಕಿಟ್ ಪಡೆಯಲು ಕೋವಿಡ್ ಟೆಸ್ಟ್ ಕಡ್ಡಾಯ ನಿಯಮಕ್ಕೆ ಆಕ್ರೋಶ

    ಕೋಟ: ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಮಿಕರಿಗೆ ಕಿಟ್ ನೀಡುವ ಸಂಬಂಧ ಕಾರ್ಮಿಕರು ಮತ್ತು ಪಿಡಿಒ ಜತೆ ಗುರುವಾರ ವಾಗ್ವಾದ ನಡೆಯಿತು.

    ಪಂಚಾಯಿತಿ ಸಭಾಂಗಣದಲ್ಲಿ ನೀಡಲಾಗುತ್ತಿರುವ ಕಿಟ್ ಪಡೆಯಲು ಕೋವಿಡ್ ಟೆಸ್ಟ್ ಕಡ್ಡಾಯ ಎಂಬ ಜಿಪಂ ಸಿಇಒ ಆದೇಶದ ಹಿನ್ನೆಲೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಟೆಸ್ಟ್ ನಡೆಸಿ ಕಿಟ್ ಪಡೆದುಕೊಳ್ಳಿ ಎಂದು ಪಿಡಿಒ ಆದೇಶಕ್ಕೆ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

    ಕೋಟದ ಕಾರಂತ ಥೀಂ ಪಾರ್ಕ್‌ನಲ್ಲಿ ಬುಧವಾರ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಲಸಿಕೆ ಪಡೆದಿದ್ದೇವೆ. ಇಂದು ಕೋವಿಡ್ ಟೆಸ್ಟ್‌ಗೊಳಪಡಿಸಿ ಕಿಟ್ ಪಡೆದುಕೊಳ್ಳಿ ಎಂಬುವುದರಲ್ಲಿ ಯಾವ ನ್ಯಾಯ ಇದೆ ಎಂದು ಕಾರ್ಮಿಕರು ಪಂಚಾಯಿತಿಯನ್ನು ಪ್ರಶ್ನಿಸಿದರು. ಅಲ್ಲದೆ ಕೋಟ ಗ್ರಾಪಂ ವ್ಯಾಪ್ತಿಯ ಕಾರ್ಮಿಕರಿಗೆ ಯಾವುದೇ ಷರತ್ತು ವಿಧಿಸದೆ ಕಿಟ್ ನೀಡಿದ್ದಾರೆ. ನಮಗೊಂದು ನ್ಯಾಯ ಅವರಿಗೊಂದು ನ್ಯಾಯ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಮೇಲಧಿಕಾರಿಗಳ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ಪಿಡಿಒಗಳ ಈ ಕ್ರಮಕ್ಕೆ ಪಂಚಾಯಿತಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ದಿನಕ್ಕೊಂದು ನಿಯಮ ಹೇರಿದರೆ ನಮಗೆ ಆ ಭಾಗಕ್ಕೆ ಮುಖ ಹಾಕಿ ನೋಡಲು ಸಾಧ್ಯವಿಲ್ಲ ಎಂದು ಪಿಡಿಒ ತರಾಟೆಗೆ ತೆಗೆದುಕೊಂಡರು. ಬಳಿಕ ಯಥಾಸ್ಥಿತಿಯಂತೆ ಕಿಟ್ ವಿತರಿಸಲಾಯಿತು. ಅಲ್ಲದೆ ಕಾರ್ಮಿಕರು ಕೋವಿಡ್ ನಿಯಮ ಪಾಲಿಸದೆ ಗುಂಪು ಗುಂಪಾಗಿರುವ ದೃಶ್ಯ ಸಾಮಾನ್ಯವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts