More

    ಕುಟುಂಬ ಸದಸ್ಯರ ಎಡವಟ್ಟು: ಕರೊನಾ ಸೋಂಕಿಲ್ಲದಿದ್ದರೂ ಆಸ್ಪತ್ರೆಯಲ್ಲೇ ಒದ್ದಾಡಿ ಪ್ರಾಣಬಿಟ್ಟ ರೋಗಿ

    ಕೋಟಾ: ಕುಟುಂಬದ ಸದಸ್ಯರು ವೆಂಟಿಲೇಟರ್​ ಪ್ಲಗ್ ತೆಗೆದು ಏರ್​ ಕೂಲರ್​ ಪ್ಲಗ್​ ಇನ್​ ಮಾಡಿದ ಪರಿಣಾಮ 40 ವರ್ಷದ ರೋಗಿಯೊಬ್ಬ ಸಾವಿಗೀಡಾಗಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

    ರೋಗಿಯು ಕರೊನಾ ಸೋಂಕಿನಿಂದ ಬಳಲುತ್ತಿದ್ದ ಎಂದು ಹೇಳಲಾಗಿದೆ. ಜೂನ್​ 13ರಂದು ಕೋಟಾದ ಮಹಾರಾವ್​ ಭೀಮ್​ ಸಿಂಗ್​ (ಎಂಬಿಎಸ್) ಆಸ್ಪತ್ರೆಗೆ ದಾಖಲಿಸಲಾಗಿದ್ದ ಅವರನ್ನು ಐಸಿಯುನಲ್ಲಿ ಇಡಲಾಗಿತ್ತು. ಆದರೆ, ವರದಿ ನಗೆಟಿವ್​ ಬಂದಿತ್ತು. ಆದರೂ, ಐಸಿಯು ವಾರ್ಡ್​ನಲ್ಲಿ ಮತ್ತೊಬ್ಬ ರೋಗಿಗೆ ಕರೊನಾ ಸೋಂಕು ಇದ್ದಿದ್ದರಿಂದ ರೋಗಿಯನ್ನು ಪ್ರತ್ಯೇಕ ವಾರ್ಡ್​ಗೆ ಜೂನ್ 15ರಂದು ಸ್ಥಳಾಂತರಿಸಲಾಗಿತ್ತು. ಇದನ್ನೂ ಓದಿ: ಡಿಸೆಂಬರ್​​ನಲ್ಲೇ ವಕ್ಕರಿಸಿದೆ ಕರೊನಾ…ಒಳಚರಂಡಿಯ ತ್ಯಾಜ್ಯದಲ್ಲಿ ಅಡಗಿ ಕುಳಿತಿತ್ತು !

    ರೋಗಿಯು ಪ್ರತ್ಯೇಕ ವಾರ್ಡ್​ನಲ್ಲಿ ತುಂಬಾ ಸೆಕೆ ಇದ್ದುದ್ದರಿಂದ ಕುಟುಂಬದ ಸದಸ್ಯರು ಆತನಿಗಾಗಿ ಅದೇ ದಿನ ಏರ್​ ಕೂಲರ್ ಅನ್ನು ಕೊಂಡು ತಂದಿದ್ದರು. ಆದರೆ, ಕೂಲರ್​ ಪ್ಲಗ್​ ಅಳವಡಿಸಲು ಸಾಕೆಟ್​ ಹುಟುಕಾಡಿದ್ದಾರೆ. ಕೊನೆಗೂ ತಿಳಿಯದೇ ವೆಂಟಿಲೇಟರ್​ ಪ್ಲಗ್​ ತೆಗೆದು ಕೂಲರ್​ ಪ್ಲಗ್​ ಅಳವಡಿಸಿದ್ದಾರೆ. ಸುಮಾರು ಅರ್ಧ ಗಂಟೆ ವೆಂಟಿಲೇಟರ್​ ಆಫ್​ ಆಗಿದೆ.​ ಬಳಿಕ ರೋಗಿಯ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದನ್ನು ನೋಡಿ ಕುಟುಂಬದ ಸದಸ್ಯರು ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸಿದ್ದಾರೆ. ಬಂದು ಪರೀಕ್ಷಿಸಿದಾದರೂ ಆಗಲೇ ಮೃತಪಟ್ಟಿರುವುದಾಗಿ ತಿಳಿಸಿದರು.

    ಕ್ಷಣ ಕ್ಷಣದ ಮಾಹಿತಿ ಹಾಗೂ ಕುತೂಹಲಕಾರಿ ಸುದ್ದಿಗಳಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಫಾಲೋ ಮಾಡಲು ಇಲ್ಲಿ ಕ್ಲಿಕ್ಕಿಸಿ

    ಘಟನೆ ಬಗ್ಗೆ ಮಾತನಾಡಿರುವ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ನವೀನ್​ ಸಕ್ಸೇನಾ, ಪ್ರಕರಣದ ತನಿಖೆಗೆ ಸಮಿತಿ ರಚಿಸಲಾಗಿದ್ದು, ಶನಿವಾರ ವರದಿ ಸಲ್ಲಿಸಲಿದ್ದಾರೆ. ಪ್ರತ್ಯೇಕ ವಾರ್ಡ್​ನಲ್ಲಿದ್ದ ವೈದ್ಯಕೀಯ ಸಿಬ್ಬಂದಿ ವಿಚಾರಣೆಗೆ ಉತ್ತರಿಸಿದ್ದಾರೆ. ಆದರೆ, ಕುಟುಂಬದ ಸದಸ್ಯರು ಮಾತ್ರ ಉತ್ತರಿಸಿಲ್ಲ ಎಂದು ಆರೋಪಿಸಿದ್ದಾರೆ. ಇದರಲ್ಲಿ ಯಾರೇ ಹೊಣೆಯಾಗಿದ್ದರು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಒಂದೇ ತಿಂಗಳಲ್ಲಿ ಮೂರು ಮರ್ಯಾದೆ ಹತ್ಯೆ: ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟ ಯುವತಿಯರು

    ಕೂಲರ್​ ಪ್ಲಗ್ ಅಳವಡಿಸಲು ಕುಟುಂಬದ ಸದಸ್ಯರು ಯಾವುದೇ ಅನುಮತಿಯನ್ನು ಪಡೆದಿಲ್ಲ. ರೋಗಿ ಸತ್ತಾಗ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಅವರು ಅಸಭ್ಯವಾಗಿ ವರ್ತಿಸಿದರು ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಆಪಾದಿಸಿದೆ. (ಏಜೆನ್ಸೀಸ್​)

    ಹಣ್ಣು, ತರಕಾರಿ ಸಾಗಿಸುತ್ತಿದ್ದ ಚಾಲಕನಿಗೂ ಕರೊನಾ, ರಾತ್ರೋರಾತ್ರಿ ಸೀಲ್​ಡೌನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts