More

    ರೈತರು ತೊಗರಿ ಖರೀದಿ ಕೇಂದ್ರ ಸದ್ಬಳಕೆ ಮಾಡಿಕೊಳ್ಳಲಿ

    ದೇವರಹಿಪ್ಪರಗಿ: ಕೋರವಾರ ವ್ಯಾಪ್ತಿಯ ಎಲ್ಲ ರೈತರ ಅನುಕೂಲಕ್ಕಾಗಿ ತೊಗರಿ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ರೈತ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂಗಮೇಶ ಛಾಯಾಗೋಳ ಹೇಳಿದರು.
    ತಾಲೂಕಿನ ಕೋರವಾರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಮಂಗಳವಾರ ತೊಗರಿ ಖರೀದಿ ಕೇಂದ್ರದ ತೂಕದ ಯಂತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಅವರು ಮಾತನಾಡಿದರು.
    ಜಿಲ್ಲಾಧಿಕಾರಿಗಳು ಕೋರವಾರ ವ್ಯಾಪ್ತಿಯ ತೊಗರಿ ಬೆಳೆದ ರೈತರ ಅನುಕೂಲಕ್ಕಾಗಿ ಖರೀದಿ ಕೇಂದ್ರ ಆರಂಭಕ್ಕೆ ಅನುಮತಿ ನೀಡಿದ್ದಾರೆ. ಈ ಭಾಗದ ಪ್ರತಿಯೊಬ್ಬ ರೈತರ ತೊಗರಿ ಖರೀದಿಯಾಗುವವರೆಗೂ ಎಲ್ಲವನ್ನೂ ಪ್ರಾಮಾಣಿಕವಾಗಿ ಖರೀದಿಸಲಾಗುವುದೆಂದು ತಿಳಿಸಿದರು.
    ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನಿರ್ದೇಶಕರುಗಳಾದ ಸುಬ್ಬನಗೌಡ ಪಾಟೀಲ, ಹಣಮಂತ್ರಾಯ ಸುಂಬಡ, ಇಸ್ಮಾಯಿಲ್ ವಡಗೇರಿ, ಸುರೇಶ ಪಾಟೀಲ, ಗುರಣ್ಣ ಅಂಗಡಿ, ಚಿದಾನಂದ ಚವಾಣ್, ಭೋಜನಗೌಡ ಬಿರಾದಾರ, ಭೀಮಪ್ಪ ಹೊನಮಟ್ಟಿ, ಪ್ರಭುಲಿಂಗಯ್ಯ ಮೇಲಿನಮಠ, ಗುರಪ್ಪ ದಿಂಡವಾರ, ಮುಖ್ಯಕಾರ್ಯನಿರ್ವಾಹಕ ಶಾಂತಗೌಡ ಭೋರಾವತ್, ಮಹಾಂತಗೌಡ ಪಾಟೀಲ, ಶಾಂತು ಸಿಂಪಿಗೇರ, ಬಸವರಾಜ ಜಾಧವ, ಗುಂಡು ಚವಾಣ್, ಮಲ್ಲು ಖೇಮಶೆಟ್ಟಿ, ಶ್ರೀಹರಿ ಚವಾಣ್, ನಜೀರ್ ಚಾಂದಕವಟೆ, ಬನ್ನೆಪ್ಪ ಮನಹಳ್ಳಿ, ವಿಠ್ಠಲ ಜಾಧವ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts