More

    ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಎಸ್ಕಲೇಟರ್ ಆರಂಭ

    ಕೊಪ್ಪಳ: ನಗರದ ರೈಲ್ವೆ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ಎಸ್ಕಲೇಟರ್ ಗೆ ಸಂಸದ ಸಂಗಣ್ಣ ಕರಡಿ ಸೋಮವಾರ ಚಾಲನೆ ನೀಡಿದರು.

    ನಂತರ ಮಾತನಾಡಿ, ಬೇರೆ ಜಿಲ್ಲೆಗೆ ಹೋಲಿಸಿದಲ್ಲಿ ನಮ್ಮ ರೈಲ್ವೆ ನಿಲ್ದಾಣ ಸಾಕಷ್ಟು ಅಭಿವೃದ್ಧಿಯಾಗಿದೆ. ರೈಲ್ವೆ ಅಧಿಕಾರಿಗಳು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನಸಂದಣಿ‌ ಆದರಿಸಿ ಕಾಮಗಾರಿಗಳನ್ನು ನಡೆಸಲಾಗುವುದು. ಹುಲಿಗಿಗೆ ಸಾಕಷ್ಟು ಜನ ಬರ್ತಾರೆ. ಹೀಗಾಗಿ ಅದನ್ನು ನವೀಕೃತ ನಿಲ್ದಾಣ ಮಾಡಲಾಗುವುದು. ದೇಶದ ಬಹುದೊಡ್ಡ ಸಾರಿಗೆಯಾಗಿರುವ ರೈಲ್ವೆಯನ್ನು ಬಹುಪಾಲು ಬಡವರು ಅವಲಂಬಿಸಿದ್ದಾರೆ.

    ಜನಪ್ರತಿನಿಧಿಗಳಿಗೆ ಜನಸಂಖ್ಯೆ ಮತ್ತಿತರ ಮಾಹಿತಿ ಇರಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೊಸ ಯೋಜನೆ ಬದಲು ಈಗಾಗಲೇ ಘೋಷಿಸಿದ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಿದೆ. ನಾನು ಶಾಸಕನಾದಾಗ ಮುನಿರಾಬಾದ-ಮೆಹಬೂಬ ನಗರ ಯೋಜನೆ ಆರಂಭಿಸಲಾಯಿತು. 16ವರ್ಷ ಆದರೂ ರೈಲು ಬರಲಿಲ್ಲ. ನಾನು ಸಂಸದನಾದ ನಂತರ ವೇಗ ಪಡೆದಿದೆ. ಶೀಘ್ರ ಸಿಂಧನೂರು ತಲುಪಲಿದೆ. ಗದಗ ವಾಡಿ ರೈಲು  ಮಾರ್ಚ್ ವೇಳೆಗೆ ಕುಷ್ಟಗಿ ತಲುಪಲಿದೆ.

    ಆಲಮಟ್ಟಿ ಚಿತ್ರದುರ್ಗ ಹೊಸ ಯೋಜನೆ ಜಾರಿಯಾಗಲಿದೆ. 8455 ಕೋಟಿ ರೂ.ವೆಚ್ಚ ಆಗಲಿದೆ. ದರೋಜಿ ಗಂಗಾವತಿ  ಸರ್ವೆ ನಡೆಯುತ್ತಿದೆ. ಬರುವ ಬಜೆಟ್ ನಲ್ಲಿ ಘೋಷಣೆ ಆಗಲಿದೆ. ಗಂಗಾವತಿ ರೈಲ್ವೆ ನಿಲ್ದಾಣದಿಂದ ಅಂಜನಾದ್ರಿವರೆಗೆ ಕೇಬಲ್ ಕಾರ್ ನಡೆಸುವ ಯೋಜನೆ ಇದೆ ಎಂದರು.
    ಶಾಸಕರಾದ ಅಮರೇಗೌಡ ಬಯ್ಯಾಪುರ, ರಾಘವೇಂದ್ರ ಹಿಟ್ನಾಳ್, ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿದರು. ರೈಲ್ವೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts