More

    ಸಂಘಟಿತ ಹೋರಾಟದಿಂದ ಬೇಡಿಕೆ ಈಡೇರಿಕೆ: ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್ ಅಭಿಪ್ರಾಯ

    ಕೊಪ್ಪಳ: ಯಾವುದೇ ಬೇಡಿಕೆಗಳಿರಲಿ, ಎಲ್ಲರೂ ಸಂಘಟಿತರಾಗಿ ಹೋರಾಡಿದಾಗ ಫಲ ದೊರೆಯುತ್ತದೆ. ಶಿಕ್ಷಕರ ಬೇಡಿಕೆ ಈಡೇರಿಸಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನ್ಯಾಯ ಒದಗಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುವೆ ಎಂದು ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್ ಹೇಳಿದರು.

    ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು. ಹಿಂದೆ ವಿಜ್ಞಾನ ಭವನಕ್ಕೆ ಅನುದಾನ ಕೊಡಿಸಿದ್ದೆ. ಭವನದ ಕಾಮಗಾರಿ ಇನ್ನಷ್ಟು ಚುರುಕುಗೊಳ್ಳಬೇಕು. ಶಿಕ್ಷಣ ಸಚಿವ ನಾಗೇಶರನ್ನು ಭೇಟಿ ಮಾಡಿ ಮತ್ತಷ್ಟು ಸೌಲಭ್ಯ ಕಲ್ಪಿಸಲು ಮನವಿ ಮಾಡಲಾಗುವುದು. ಶಿಕ್ಷಕರು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ನಿಮ್ಮ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದ್ದೀರಿ. ಈ ಬಗ್ಗೆ ಸರ್ಕಾರದ ಗಮನ ಸೆಳೆದು ಹಂತ ಹಂತವಾಗಿ ಪರಿಹರಿಸಲಾಗುವುದೆಂದು ಭರವಸೆ ನೀಡಿದರು.

    ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮು ಗುಗ್ಗವಾಡ ಮಾತನಾಡಿ, ನಾವೆಲ್ಲ ಸಂಘಟಿತರಾಗಬೇಕು. ಕಾನೂನು ಚೌಕಟ್ಟಿನಲ್ಲಿ ಹೋರಾಟ ನಡೆಸಿ ಬೇಡಿಕೆ ಈಡೇರಿಸಿಕೊಳ್ಳಬೇಕು. ನಮ್ಮ ಸಂಘ 1986ರಿಂದಲೂ ಸಂಘಟಿತ ಹೋರಾಟಕ್ಕೆ ಹೆಗಲಾಗಿದೆ ಎಂದರು.

    ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಹರ್ತಿ ಮಾತನಾಡಿ, ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಸಂಘ ಎಂದರೆ ಒಂದೇ ರಥದ ಎರಡು ಚಕ್ರಗಳಿದ್ದಂತೆ. ಸಮನ್ವಯದಿಂದ ಕೆಲಸ ಮಾಡಿದಾಗ ಶಿಕ್ಷಕರು ಹಾಗೂ ಮಕ್ಕಳ ಹಿತರಕ್ಷಣೆ ಸಾಧ್ಯ ಎಂದರು. ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ತುಕಾರಾಮ್ ಬಾಗೆನ್ನವರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ್‌ಗೌಡ ಮಾಲಿಪಾಟೀಲ್, ನಿಕಟ ಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ್‌ಗೌಡ ಮಾತನಾಡಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಅರುಣಾ ನರೇಂದ್ರ, ಶಿವಪ್ಪ ದಳವಾಯಿ, ಬಸವರಾಜ ವಾಲಿಕಾರ್, ಮಾರೆಪ್ಪ, ವೀರಯ್ಯ ವಂಟಿಗೋಡಿಮಠ ಹಾಗೂ ವಿಜ್ಞಾನ ಶಿಕ್ಷಕರಾದ ದೇವೇಂದ್ರಪ್ಪ ಜಿರ್ಲಿ, ಸಿದ್ಧಲಿಂಗೇಶ ಭಜಂತ್ರಿ, ಬಸವರಾಜ ಗುರಿಕಾರರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕೋಶಾಧ್ಯಕ್ಷ ವೀರಣ್ಣ ಹೆಬ್ಬಾಳ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗುರುಪ್ಪಯ್ಯ ಹಿರೇಮಠ, ಬಸವರಾಜಯ್ಯ ಹಿರೇಮಠ, ಮಂಜುನಾಥ ದರೋಜಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts