More

    ಸಹಕಾರ ಸಂಘಗಳಿಂದ ಅಭಿವೃದ್ಧಿ ಸಾಧ್ಯ: ಸಚಿವ ಹಾಲಪ್ಪ ಆಚಾರ್ ಅಭಿಮತ

    ಕುಕನೂರು: ಸಹಕಾರ ಸಂಘಗಳು ಬಲಿಷ್ಠವಾದರೆ ಗ್ರಾಮಾಭಿವೃದ್ಧಿ ಸಾಧ್ಯ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
    ದ್ಯಾಂಪುರ ಗ್ರಾಮದ ಹಾಲು ಉತ್ಪಾದಕರ ಸಂಘದ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಸಂಘದ ಕಟ್ಟಡ ಗುಣಮಟ್ಟದಿಂದ ನಿರ್ಮಾಣವಾಗಿದೆ. ಹಾಲು ಉತ್ಪಾದಕ ಸಂಘಗಳು ಸ್ವಾವಲಂಬಿ ಬದುಕಿಗೆ ಆಸರೆ ಆಗಿವೆ. ತಾಲೂಕಿನಲ್ಲಿ ದ್ಯಾಂಪುರ ಗ್ರಾಮದ ಸಂಘ ನಾನಾ ಕಾರ್ಯ ಚಟುವಟಿಕೆಯಿಂದ ಹೆಸರು ಮಾಡಿದೆ. ಪ್ರಾಮಾಣಿಕ ಕಾರ್ಯಕ್ಕೆ ಮಾದರಿಯಾಗಿದೆ ಎಂದರು.

    ರಾಬಕೊ ಹಾಲು ಒಕ್ಕೂಟದ ನಿರ್ದೇಶಕರಾದ ಶಿವಪ್ಪ ವಾದಿ, ವೆಂಕನಗೌಡ ಹಿರೇಗೌಡ್ರು, ಉಪವ್ಯವಸ್ಥಾಪಕ ಜಿ.ಐ.ಪಡಸಲಗಿ ಮಾತನಾಡಿದರು. ಅನ್ನದಾನೀಶ್ವರ ಶಾಖಾಮಠದ ಮಹಾದೇವ ದೇವರು ಸಾನ್ನಿಧ್ಯ ವಹಿಸಿದರು. ಉಪನ್ಯಾಸಕ ರವಿತೇಜ ಅಬ್ಬಿಗೇರಿ, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಮುಖಂಡ ಬಸವನಗೌಡ ತೊಂಡಿಹಾಳ, ಶಂಭು ಜೋಳದ, ಸಂಘದ ಅಧ್ಯಕ್ಷ ಬಸವರಾಜಸ್ವಾಮಿ ಕಂದಗಲ್ಲಮಠ, ಉಪಾಧ್ಯಕ್ಷ ಈರಪ್ಪ ಸದರಿ, ಗ್ರಾಪಂ ಅಧ್ಯಕ್ಷೆ ರತ್ನಮ್ಮ ಆಡೂರು, ರಾಬಕೊ ಒಕ್ಕೂಟದ ನಿರ್ದೇಶಕಿ ಕವಿತಾ ಗುಳಗಣ್ಣವರ್, ಕ್ಷೇತ್ರ ಸಹಾಯಕ ಬಸವರಾಜ ಯರದೊಡ್ಡಿ, ಸಮಾಲೋಚಕ ಸೋಮಶೇಖರ ಗುರಿಕಾರ, ಕ್ಷೇತ್ರಸಹಾಯಕಿ ರತ್ಮಮ್ಮ ಹಕ್ಕಂಡಿ, ಕಾರ್ಯದರ್ಶಿ ಶಿವಕುಮಾರ ಸಿದ್ನೇಕೊಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts