More

    ಒಳಮೀಸಲಾತಿಗಾಗಿ ಹೋರಾಟ ಡಿ.11ರಂದು: ಸಮಿತಿ ಸಂಚಾಲಕ ಅಂಬಣ್ಣ ಅರೋಲಿಕರ್ ಮಾಹಿತಿ

    ಕೊಪ್ಪಳ: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ವಿವಿಧ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಡಿ.11ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿ ಸಂಚಾಲಕ ಅಂಬಣ್ಣ ಅರೋಲಿಕರ್ ಹೇಳಿದರು.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ 20 ವರ್ಷ ರಾಜ್ಯದಲ್ಲಿ ಆಡಳಿತ ನಡೆಸಿದ ಸರ್ಕಾರಗಳು ದಲಿತರನ್ನು ಕಡೆಗಣಿಸುತ್ತ ಬಂದಿವೆ. ಎಸ್ಸಿ, ಎಸ್ಟಿ ಮೀಸಲು ಹೆಚ್ಚಳ, ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ತಕ್ಷಣ ಸ್ಪಂದಿಸಿ ಸಮಿತಿ ರಚಿಸಿ ಅನುಷ್ಠಾನ ಮಾಡುವ ಕೆಲಸ ಮಾಡಲಾಗುತ್ತಿದೆ. ಆದರೆ, ಒಳ ಮೀಸಲಾತಿಗಾಗಿ ಆಯೋಗ ರಚನೆ, ಅನುದಾನ ಬಿಡುಗಡೆ, ವರದಿ ಪಡೆಯಲು ಎರಡು ದಶಕ ಕಳೆದಿವೆ. ಎಲ್ಲದಕ್ಕೂ ನಾವು ಹೋರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಮಾದಿಗರೆಂದರೆ ಕೇವಲ ಒಂದು ಸಮುದಾಯದವರಲ್ಲ. 101 ಜಾತಿಗಳು ಬರುತ್ತವೆ. ಯಾವ ಜಾತಿಯಲ್ಲಿ ಬಹುಸಂಖ್ಯಾತರಿದ್ದಾರೆ. ಅವರಿಗೆ ಅಧಿಕ ಮೀಸಲು ದೊರೆಯಬೇಕೆಂದು ನ್ಯಾ.ಸದಾಶಿವ ಆಯೋಗ ವರದಿ ನೀಡಿದೆ. ಆದರೆ, ಕೆಲವರ ತಪ್ಪು ತಿಳಿವಳಿಕೆಯಿಂದ ವರದಿ ಬಗ್ಗೆ ಚರ್ಚಿಸಲು ಸರ್ಕಾರ ಮುಂದಾಗುತ್ತಿಲ್ಲವೆಂದು ಆರೋಪಿಸಿದರು.

    ಸರ್ಕಾರದ ನಡೆ ಖಂಡಿಸಿ ಡಿ.11ರಂದು ಬೆಂಗಳೂರಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಜನರು ಆಗಮಿಸಲಿದ್ದಾರೆ. ಇದಕ್ಕೆ ಪೂರ್ವದಲ್ಲಿ ನ.28ಕ್ಕೆ ಹರಿಹರದ ಬಿ.ಕೃಷ್ಣಪ್ಪ ಸಮಾಧಿಯಿಂದ ಬೆಂಗಳೂರಿಗೆ ಪಾದಯಾತ್ರೆ ತೆರಳಲಿದೆ. ಯಾತ್ರೆ ಡಿ.11ರ ವೇಳೆಗೆ ಸಮಾವೇಶ ಸ್ಥಳ ತಲುಪುತ್ತದೆ ಎಂದರು. ದಲಿತ ಮುಖಂಡರಾದ ಶಿವರಾಜ ಹಕ್ಕರಕಿ, ಆನಂದ ಭಂಡಾರಿ, ಕೆ.ಎಸ್.ಮೈಲಾರಪ್ಪ, ಭೀಮಣ್ಣ ಬೂದಗುಂಪಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts