More

    ಕೊಪ್ಪಳದಲ್ಲಿ ಅ.19ರಂದು ಆರೈಕೆದಾರರ ದಿನಾಚರಣೆ: ಸಾಮರ್ಥ್ಯ ಸಂಸ್ಥೆ ನಿರ್ದೇಶಕ ಬಿ.ಹಂಪಣ್ಣ ಮಾಹಿತಿ

    ಕೊಪ್ಪಳ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಅಂಗವಿಕಲರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಅ.19ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ಆರೈಕೆದಾರರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಾಮರ್ಥ್ಯ ಸಂಸ್ಥೆ ನಿರ್ದೇಶಕ ಬಿ.ಹಂಪಣ್ಣ ತಿಳಿಸಿದರು.

    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಕಾರ್ಯಕ್ರಮ ಉದ್ಘಾಟಿಸುವರು. ವೈದ್ಯ ಡಾ.ಕೆ.ಜಿ.ಕುಲಕರ್ಣಿ, ಬಿಜೆಪಿ ಮುಖಂಡ ಸಿ.ವಿ.ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಇತರರು ಭಾಗಿಯಾಗುವರು. 19ರ ಬೆಳಗ್ಗೆ 10ಗಂಟೆಗೆ ಕೊಪ್ಪಳ ಬಸ್ ನಿಲ್ದಾಣದಿಂದ ಅಶೋಕ ವೃತ್ತದವರೆಗೆ ರ‌್ಯಾಲಿ ನಡೆಸಲಾಗುವುದೆಂದು ಮಾಹಿತಿ ನೀಡಿದರು.

    ತೀವ್ರತರ ಅಂಗವಿಕಲರನ್ನು ಆರೈಕೆ ಮಾಡುವುದು ಸವಾಲಿನ ಕೆಲಸ. ಆರೈಕೆದಾರರು ಇಂದು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಅವರಿಗಾಗಿ ಯಾವುದೇ ಯೋಜನೆ ರೂಪಿಸಿಲ್ಲ. ಕೆಲವರು ಹುಟ್ಟು ಅಂಗವಿಕಲರಾದರೆ, ಇನ್ನು ಕೆಲವರು ಅಪಘಾತಕ್ಕೀಡಾಗಿ ವಿಕಲರಾಗುತ್ತಾರೆ. ಅಂಥವರನ್ನು ನೋಡಿಕೊಳ್ಳುವುದು ಸವಾಲಿನ ಕೆಲಸ. ಹೇಗೆ ನೋಡಿಕೊಳ್ಳಬೇಕೆಂಬ ಮಾಹಿತಿ ಇರುವುದಿಲ್ಲ. ನಮ್ಮ ಸಂಸ್ಥೆ ಕಳೆದ 8 ವರ್ಷಗಳಿಂದ ಅಂಥವರ ಸಬಲೀಕರಣಕ್ಕಾಗಿ ದುಡಿಯುತ್ತಿದೆ. ಆರೈಕೆದಾರರಿಗೆ ಆತ್ಮಸ್ಥೈಯ ತುಂಬುವುದು, ತೀವ್ರತರ ಅಂಗವಿಕಲರು ವೈಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳುವಂತೆ ತರಬೇತಿ ನೀಡಲಾಗುತ್ತಿದೆ. ಸರ್ಕಾರ ಇಂಥವರಿಗಾಗಿ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು. ಸಾಮರ್ಥ್ಯ ಸಂಸ್ಥೆಯ ಪ್ರಭಾಕರ, ವಿಶ್ವಚೇತನ ಆರೈಕೆದಾರರ ಸಂಸ್ಥೆ ಅಧ್ಯಕ್ಷೆ ವರ್ಷಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts