More

    ಗವಿಮಠ ಜಾತ್ರೆ, ಅಂಗಾಂಗ ಜಾಗೃತಿ ಜಾಥಾ ನಾಳೆ: ಸಿದ್ಧತೆ ಪರಿಶೀಲಿಸಿದ ಡಿಸಿ, ಎಸ್ಪಿ, ಗವಿಶ್ರೀ

    ಕೊಪ್ಪಳ: ನಾಡಿನ ಆರಾಧ್ಯ ದೈವ ಗವಿಸಿದ್ಧೇಶ್ವರ ಜಾತ್ರೆ ಸಿದ್ಧತೆ ಭರದಿಂದ ಸಾಗಿದ್ದು, ಅಂಗಾಂಗ ದಾನ ಜಾಗೃತಿ ಜಾಥಾ ಮೂಲಕ ಜಾತ್ರೋತ್ಸವಕ್ಕೆ ಇಂದು (ಜ.4) ಅಧಿಕೃತ ಚಾಲನೆ ದೊರೆಯಲಿದೆ.

    ಈ ವರ್ಷ ಜಾತ್ರೆ ಅಂಗವಾಗಿ ಪರೋಪಕಾರಾರ್ಥಂ ಇದಂ ಶರೀರಂ. ಸತ್ತ ಮೇಲೂ ಬದುಕುವ ಯೋಗ, ಸಾಯುವವನಿಗೆ ಅಂಗಾಂಗ ಯೋಗ ಎಂಬ ಘೋಷ ವಾಕ್ಯದೊಂದಿಗೆ ಜ.4ರಂದು ಬೆಳಗ್ಗೆ 8.30ಕ್ಕೆ ಜಾಥಾ ಆರಂಭವಾಗಲಿದೆ. ನಗರದ ತಾಲೂಕು ಕ್ರೀಡಾಂಗಣದಿಂದ ಆರಂಭವಾಗಿ ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರ ಕಂಬ ವೃತ್ತ ಮಾರ್ಗವಾಗಿ ಗವಿಮಠದ ದಾಸೋಹ ಮಂಟಪ ತಲುಪಲಿದೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಕಿಮ್ಸ್ ಇತರ ಸಂಘ, ಸಂಸ್ಥೆಗಳು ಭಾಗಿಯಾಗಲಿದ್ದು, ಮಕ್ಕಳು ಜನರಿಗೆ ಅಂಗಾಂಗ ದಾನದ ಅರಿವು ಮತ್ತು ಮಹತ್ವ ಕುರಿತು ಘೋಷಣೆ ಕೂಗಿ ಜಾಗೃತಿ ಮೂಡಿಸಲಿದ್ದಾರೆ.

    ಸಂಜೆ 5ಕ್ಕೆ ಗವಿಸಿದ್ಧೇಶ್ವರ ಕರ್ತೃ ಗದ್ದುಗೆ ಹತ್ತಿರ ಬಸವಪಟ ಆರೋಹಣ ಕಾರ್ಯಕ್ರಮ ಜರುಗಲಿದೆ. ಭಕ್ತರು ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪ್ರಣವ ಮಂತ್ರವಿರುವ ಬಸವಪಟಕ್ಕೆ ವಿಧ್ಯುಕ್ತವಾಗಿ ಪೂಜೆ ಸಲ್ಲಿಸಿ, ನೈವೇದ್ಯ ಮಾಡುವರು. ಬಳಿಕ ಅದನ್ನು ಶ್ರದ್ಧೆಯಿಂದ ತಲೆಯ ಮೇಲೆ ಹೊತ್ತು ಕರ್ತೃ ಗದ್ದುಗೆಗೆ ಜಯ ಘೋಷ ಹಾಕುತ್ತ ಐದು ಸುತ್ತು ಪ್ರದಕ್ಷಿಣೆ ಹಾಕುವರು. ನಂತರ ಆವರಣದಲ್ಲಿನ ಶಿಲಾಸ್ತಂಭಕ್ಕೆೆ ಬಸವ ಪಟ ಆರೋಹಣಗೊಳಿಸಿ ನಾಡು ಸುಖ, ಶಾಂತಿಯಿಂದ ನೆಲೆಸಲಿ ಎಂದು ಬೇಡಿಕೊಳ್ಳುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts