More

    ಗುರಿ ತಲುಪದ ಬಿಎಲ್‌ಒಗಳ ವಿರುದ್ಧ ಕ್ರಮ; ಗಂಗಾವತಿ ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ ಎಚ್ಚರಿಕೆ

    ಗಂಗಾವತಿ: ವೋಟರ್ ಕಾರ್ಡ್‌ಗೆ ಆಧಾರ್ ನಂಬರ್ ಜೋಡಿಸುವ ಗುರಿ ತಲುಪದ ಬಿಎಲ್‌ಒಗಳ ವಿರುದ್ಧ ಕ್ರಮಕ್ಕೆ ಶಿಾರಸು ಮಾಡಲಾಗುವುದು ಎಂದು ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಎಚ್ಚರಿಕೆ ನೀಡಿದರು.

    ನಗರಸಭೆ ಆವರಣದಲ್ಲಿ ಗುರುವಾರ ಬಿಲ್ ಕಲೆಕ್ಟರ್ ಮತ್ತು ಬಿಎಲ್‌ಒಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು. ಆ.30ರೊಳಗೆ ಗುರಿ ತಲುಪಬೇಕಿದ್ದು, ಈವರೆಗೆ ಶೇ.40 ಪೂರ್ಣಗೊಂಡಿಲ್ಲ. 10ಕ್ಕೂ ಹೆಚ್ಚು ಬೂತ್‌ನಲ್ಲಿ ಶೇ.6 ಸಾಧನೆ ಆಗಿದೆ. ನಿಗದಿತ ಗುರಿ ತಲುಪದ ಬಿಎಲ್‌ಒ ಮತ್ತು ಬಿಎಲ್ ಕಲೆಕ್ಟರ್ ಅಮಾನತುಗೊಳಿಸಲು ಜಿಲ್ಲಾಡಳಿತಕ್ಕೆ ಶಿಾರಸು ಮಾಡಲಾಗುವುದು. ಚುನಾವಣೆ ಆಯೋಗದ ಸೂಚನೆಯನ್ನು ಯಾರೂ ನಿರ್ಲಕ್ಷಿಸುವಂತಿಲ್ಲ. ಬಿಎಲ್‌ಒಗಳು ಗುರಿ ತಲುಪುವವರೆಗೂ ಅಂಗನವಾಡಿಗೆ ಸಂಬಂಧಿಸಿದ ಯಾವುದೇ ಕಾರ್ಯ ಮಾಡುವಂತಿಲ್ಲ.

    ಬೇಕಾದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ವಾರ್ಡ್‌ನಲ್ಲಿ ಸಮಸ್ಯೆಯಾದರೆ ನಗರಸಭೆ ಅಧಿಕಾರಿಗಳ ನೆರವು ಪಡೆಯುವಂತೆ ಸೂಚನೆ ನೀಡಿದರು. ಸಿಡಿಪಿಒ ಗಂಗಪ್ಪ ಆರೋಲಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಸಂದೀಪ, ಸದಸ್ಯ ಮನೋಹರಸ್ವಾಮಿ ಹಿರೇಮಠ, ಕಂದಾಯ ಅಧಿಕಾರಿ ನಾಗರಾಜ್, ನಿರೀಕ್ಷಕರಾದ ನಿಜಾಮುದ್ದೀನ್ ಖತೀಬ್, ರಾಮಚಂದ್ರಪ್ಪ, ಆರೋಗ್ಯ ನಿರೀಕ್ಷಕ ಎ.ನಾಗರಾಜ್ ಇತರರಿದ್ದರು.

    ಮೈಕ್ ಎಸೆದು ಅಸಮಾಧಾನ
    ಚುನಾವಣೆ ಆಯೋಗದ ಸೂಚನೆ ಪಾಲಿಸದ ಬಿಲ್ ಕಲೆಕ್ಟರ್ ಶಾಮೀದ್‌ರನ್ನು ಸಭೆಯಿಂದ ಹೊರಗೆ ಕಳಿಸಿದ ಪ್ರಸಂಗ ನಡೆಯಿತು. ಶೇ.4ಕ್ಕಿಂತ ಕಡಿಮೆ ಲಿಂಕ್ ಮಾಡಿದ ಬಿಎಲ್‌ಒಗಳನ್ನು ತರಾಟೆಗೆ ತೆಗೆದುಕೊಂಡರು. ಗೈರಾದವರ ಪಟ್ಟಿ ಡಿಸಿಗೆ ಕಳಿಸಲು ಪೌರಾಯುಕ್ತ ಸೂಚನೆ ನೀಡಿದರು. ಮೈಕ್ ಕೈಕೊಟ್ಟಿದ್ದರಿಂದ ಸಹನೆ ಕಳೆದುಕೊಂಡ ಪೌರಾಯುಕ್ತ ವಿರೂಪಾಕ್ಷಮೂರ್ತಿ, ಅದನ್ನು ಎಸೆದು ಅವ್ಯವಸ್ಥೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ಮತದಾರರ ಪಟ್ಟಿಯಲ್ಲಿನ ನ್ಯೂನತೆ ಬಗ್ಗೆ ಬಿಎಲ್‌ಒಗಳು ಎಳೆಎಳೆಯಾಗಿ ಬಿಚ್ಚಿಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts