More

    ಆನೆಗೊಂದಿ ದುರ್ಗಾಮಾತಾ ಗೋಶಾಲೆಯಲ್ಲಿ ಪುಣ್ಯಕೋಟಿ ದತ್ತು ಯೋಜನೆಗೆ ಚಾಲನೆ

    ಗಂಗಾವತಿ: ಆನೆಗೊಂದಿ ವಾಲಿಕಿಲ್ಲಾ ಮ್ಯಾಗೋಟದ ಶ್ರೀ ಆದಿಶಕ್ತಿ ದೇವಾಲಯದ ದುರ್ಗಾಮಾತಾ ಗೋಶಾಲೆಯಲ್ಲಿ ಪುಣ್ಯಕೋಟಿ ದತ್ತು ಯೋಜನೆಗೆ ಸೋಮವಾರ ಚಾಲನೆ ನೀಡಲಾಯಿತು. ದೇವಾಲಯದ ವ್ಯವಸ್ಥಾಪಕ ರಾಜಣ್ಣ ಸ್ವಾಮಿ ಮಾತನಾಡಿ, ದೇವಸ್ಥಾನದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಗೋವುಗಳಿದ್ದು, ದತ್ತು ಯೋಜನೆ ಮೂಲಕ ಗೋವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಗೋವು ಉತ್ಪನ್ನಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. 10 ಗೋವುಗಳನ್ನು ದತ್ತು ಪಡೆದ ಉದ್ಯಮಿ ಉಗಂರಾಜ್ ಬಂಬ್‌ರನ್ನು ಸನ್ಮಾನಿಸಲಾಯಿತು. ಸಾನ್ನಿಧ್ಯ ವಹಿಸಿದ್ದ ದೇವಾಲಯದ ಮುಖ್ಯಸ್ಥ ಬ್ರಹ್ಮಾನಂದಯ್ಯ ಸ್ವಾಮೀಜಿ ಮಾತನಾಡಿದರು. ದೇವಸ್ಥಾನದ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು. ರೋಟರಿ ಕ್ಲಬ್ ಪದಾಧಿಕಾರಿಗಳಾದ ಟಿ.ಆಂಜನೇಯ, ಸದಾನಂದ ಶೇಟ್, ಮಂಜುನಾಥ, ಮಹಾವೀರ ಜೈನ್, ಬಾಬುಲಾಲ್ ಬಾಂಠಿಯಾ, ರೋಷನ್ ಲಾಲ್, ವಿಶ್ವನಾಥ, ಡುಮ್ಮರಚಂದ್, ಸುರೇಶ, ಸುಬ್ರಹ್ಮಣ್ಯ ರಾಯ್ಕರ್ ಇತರರಿದ್ದರು.

    ಆನೆಗೊಂದಿ ದುರ್ಗಾಮಾತಾ ಗೋಶಾಲೆಯಲ್ಲಿ ಪುಣ್ಯಕೋಟಿ ದತ್ತು ಯೋಜನೆಗೆ ಚಾಲನೆ
    ಆನೆಗೊಂದಿಯ ದುರ್ಗಾಮಾತಾ ಗೋಶಾಲೆಯಲ್ಲಿ ಪುಣ್ಯಕೋಟಿ ದತ್ತು ಯೋಜನೆಗೆ ಚಾಲನೆ ನೀಡಲಾಯಿತು. ದೇವಾಲಯ ಮುಖ್ಯಸ್ಥ ಬ್ರಹ್ಮಾನಂದಯ್ಯ ಸ್ವಾಮೀಜಿ, ಉದ್ಯಮಿ ಉಗಂರಾಜ್ ಬಂಬ್, ವ್ಯವಸ್ಥಾಪಕ ರಾಜಣ್ಣ ಸ್ವಾಮಿ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts