More

    ಸೌಲಭ್ಯ ಪಡೆಯಲು ಸಂಘಟಿತರಾಗಿ, ಕಾರ್ಯಕಾರಣಿ ಸದಸ್ಯ ಎಚ್.ತಿಪ್ಪಣ್ಣ ಯಾಳ್ವಿ ಹೇಳಿಕೆ

    ಕೊಪ್ಪಳ: ವಿವಿಧ ಸೌಲಭ್ಯ ಪಡೆಯಲು ಸಮುದಾಯದ ಸಂಘಟಿತ ಹೋರಾಟ ನಡೆಸುವುದು ಮುಖ್ಯವಾಗಿದೆ ಎಂದು ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಕಾರ್ಯಕಾರಣಿ ಸದಸ್ಯ ಎಚ್.ತಿಪ್ಪಣ್ಣ ಯಾಳ್ವಿ ಹೇಳಿದರು.

    ನಗರದ ಗಣೇಶನಗರದ ಶ್ರೀಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ತಾಲೂಕು ಸವಿತಾ ಸಮಾಜ ಹಾಗೂ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಬುಧವಾರ ಉದ್ಘಾಟಿಸಿ ಮಾತನಾಡಿದರು.

    ಮೂಲ ಕ್ಷೌರಿಕ ವೃತ್ತಿಯ ಮೇಲೆ ಅವಲಂಬಿತಗೊಂಡ ಸವಿತಾ ಸಮಾಜ ಇಂದು ಬಹು ಸಂಖ್ಯಾತ ಹಿಂದುಳಿದ ವರ್ಗಗಳ ಸಮುದಾಯಗಳೊಂದಿಗೆ ತೀವ್ರ ಪೈಪೋಟಿ ನಡೆಸಿ ಸರ್ಕಾರದ ಸೌಲಭ್ಯ ಪಡೆಯಬೇಕಿದೆ. ಸಮಾಜವು ಸರ್ಕಾರದ ಸೌಲಭ್ಯ ಪಡೆಯಲು ಸಂಘಟನೆಗೊಂಡು ಹೋರಾಟ ನಡೆಸಬೇಕು. ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದರು.

    ಜಿಲ್ಲಾಧ್ಯಕ್ಷ ಮಾರೇಶ, ಸವಿತಾ ಸಮಾಜ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ರವಿಕುಮಾರ ಸೂಗುರು, ದೇವಸ್ಥಾನ ಸಮಿತಿ ಅಧ್ಯಕ್ಷ ಜ್ಞಾನೇಶ್ವರ, ತಾಲೂಕು ಸಮಿತಿ ಅಧ್ಯಕ್ಷ ಮಾರುತಿ ಸೂಗುರು, ಉಪಾಧ್ಯಕ್ಷ ಹುಲುಗಪ್ಪ ಇಂದರಗಿ, ಗೌರವಾಧ್ಯಕ್ಷ ಕರಿಯಪ್ಪ ಬೂದಗುಂಪಿ, ಕಾರ್ಯದರ್ಶಿ ಶ್ರೀನಿವಾಸ ಹೊನ್ನುಂಚಿ, ದೇವಸ್ಥಾನ ಸಮಿತಿ ಉಪಾಧ್ಯಕ್ಷ ದೇವಪ್ಪ ಗೌರಿಅಂಗಳ, ಜಿಲ್ಲಾ ಕಾರ್ಯದರ್ಶಿ ತುಕಾರಾಂ, ಖಜಾಂಚಿ ಶಿವಪ್ಪ ಆನೆಗೊಂದಿ ಇತರರಿದ್ದರು.

    ಪದಾಧಿಕಾರಿಗಳ ಆಯ್ಕೆ: ತಾಲೂಕು ಸವಿತಾ ಸಮಾಜಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮಾರುತಿ ವೆಂಕಟೇಶ ಸೂಗೂರು (ತಾಲೂಕು ಅಧ್ಯಕ್ಷ), ಕರಿಯಪ್ಪ ಬೂದಗುಂಪಿ(ತಾಲೂಕು ಸಮಿತಿ ಗೌರವಾಧ್ಯಕ್ಷ), ಹುಲುಗಪ್ಪ ಇಂದರಗಿ (ಉಪಾಧ್ಯಕ್ಷ), ಶ್ರೀನಿವಾಸ ಹೊನ್ನುಂಚಿ(ಕಾರ್ಯದರ್ಶಿ), ಶ್ರೀರಾಮುಲು ಹೊಸಬಂಡಿಹರ್ಲಾಪುರ(ಖಜಾಂಚಿ), ನಿರ್ದೇಶಕರಾಗಿ ಶಿವಮೂರ್ತಿ ಮಾದಿನಾಳ ವೆಂಕಟೇಶ ಗೋಪಲದಿನ್ನಿ, ಬಸವರಾಜ ಹಿಟ್ನಾಳ, ರಾಮಪ್ಪಕಲಕೇರಿ, ಶಂಕ್ರಪ್ಪ ಬಸಾಪುರ, ಶ್ರೀನಿವಾಸ ರಂಗಯ್ಯ ಹುಲಗಿ, ತೋಟಪ್ಪ ಹೊಸಳ್ಳಿ, ಸುಖಮುನಿ ಚಿಲಕಮುಕಿ ಆಯ್ಕೆಗೊಂಡರು.

    ನೂತನ ಪದಾಧಿಕಾರಿಗಳು: ಶ್ರೀ ಲಕ್ಷೀ ವೆಂಕಟೇಶ್ವರ ದೇವಸ್ಥಾನಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಜ್ಞಾನೇಶ್ವರ(ಅಧ್ಯಕ್ಷ), ದೇವಪ್ಪ ಗೌರಿ ಅಂಗಳ (ಉಪಾಧ್ಯಕ್ಷ), ಯಲ್ಲಪ್ಪ ಬಲರಾಮಪ್ಪ(ಕಾರ್ಯದರ್ಶಿ), ಮಾರುತಿ ಸೂಗುರು (ಖಜಾಂಚಿ), ಸದಸ್ಯರಾಗಿ ಮಂಜುನಾಥ ಸವಿತಾ, ಯಮನೂರಪ್ಪ ಕಂಪ್ಲಿ, ಕಾಶಿನಾಥ ಬಾವಿದೊಡ್ಡಿ, ಕಾರ್ತಿಕಗದ್ವಾಲ, ರಾಜೇಶ ಸೂಗೂರು, ವೀರಪ್ಪ ಕಮಲಾಪುರ, ವಿಜಯ ಗೌರಿಅಂಗಳ, ಸಣ್ಣಯಲ್ಲಪ್ಪ, ಮಂಜುನಾಥ ಕರ್ಕಿಹಳ್ಳಿ, ಆನಂದ ಮಾದಿನಾಳ, ಬಸವರಾಜ ಕರ್ಕಿಹಳ್ಳಿ, ವೆಂಕಟೇಶ ಬೂದಗುಂಪ ಪವನಕುಮಾರ ಸೂಗೂರು ಆಯ್ಕೆಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts