More

    ಯಾವ ಪಕ್ಷವೂ ಬಹುಮತ ಪಡೆಯಲ್ಲ: ಸ್ವತಂತ್ರ ಸಮೀಕ್ಷೆ ತಂಡದ ಡಾ.ಪ್ರಕಾಶ ಕಮ್ಮರಡಿ ಮಾಹಿತಿ

    ಕೊಪ್ಪಳ: ರಾಜ್ಯ, ದೇಶದ ಭವಿಷ್ಯ ದೃಷ್ಟಿಯಲ್ಲಿಟ್ಟುಕೊಂಡು ಸಮಾಜವಾದಿ ವೇದಿಕೆ, ಜನತಾಂತ್ರಿಕ ಸಮಾಜವಾದ ಸಂಘಟನೆಯಿಂದ ಮುಕ್ತ ಮತದಾನ-ಸಮರ್ಥ ಸರ್ಕಾರ ವಿಷಯದಡಿ ಸ್ವತಂತ್ರ ಸಮೀಕ್ಷೆ ಕೈಗೊಂಡಿತ್ತು. ಅದರಲ್ಲಿ ಮತದಾರರು ಯಾವೊಂದು ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬರುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ ಎಂದು ಸಮೀಕ್ಷಾ ತಂಡದ ಡಾ.ಟಿ.ಎನ್.ಪ್ರಕಾಶ ಕಮ್ಮರಡಿ ತಿಳಿಸಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದ 20 ಜಿಲ್ಲೆಗಳಲ್ಲಿ ಎಲ್ಲ ವಯಸ್ಸು, ಜಾತಿ, ಧರ್ಮದ ಮತದಾರರನ್ನು ಸಮೀಕ್ಷೆಯಲ್ಲಿ ಮಾತನಾಡಿಸಲಾಗಿದೆ. 2022ರ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಸಮೀಕ್ಷೆ ಕೈಗೊಂಡಿದ್ದು, ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ ಜನರನ್ನು ಬಾಧಿಸುತ್ತಿದೆ. ಕೋಮುಗಲಭೆಗಳು ಸಹಜವಾಗಿಲ್ಲ. ಬದಲಿಗೆ ಸೃಷ್ಟಿಸಲಾಗಿದೆ. ಸರ್ಕಾರದ ಸಾಧನೆಗಳು ಚುನಾವಣಾ ನಿರ್ಣಾಯಕ ವಿಚಾರಗಳಲ್ಲ. ಹಣ, ಆಮಿಷ, ಸುಳ್ಳು ಪ್ರಚಾರ ಮುಖ್ಯವಾಗಿವೆ. ಬಿಜೆಪಿ, ಕಾಂಗ್ರೆಸ್‌ನಿಂದ ಭ್ರಷ್ಟಾಚಾರ ಮುಕ್ತ ಆಡಳಿತದ ನಿರೀಕ್ಷೆ ಇಲ್ಲವೆಂದು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.

    ತಕ್ಷಣಕ್ಕೆ ಚುನಾವಣೆ ನಡೆದರೂ ಬಿಜೆಪಿಗೆ ಹೆಚ್ಚು ಸ್ಥಾನ ಬರಲಿದೆ ಎಂದರೂ ಯಾವ ಪಕ್ಷಕ್ಕೂ ಬಹುಮತ ಬರುವುದಿಲ್ಲ. ನಾಯಕತ್ವ ವಿಚಾರಕ್ಕೆ ಬಂದಾಗ ಸಿದ್ದರಾಮಯ್ಯ ಸಮರ್ಥ ನಾಯಕನೆಂದರೆ, ಬಿಜೆಪಿಯಲ್ಲಿ ಹೊಸ ಮುಖ ಬಂದರೆ ಉತ್ತಮ ಆಡಳಿತ ನಿರೀಕ್ಷಿಸಬಹುದೆಂಬ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ. ಇದಕ್ಕೆ ಅಲ್ಪಸಂಖ್ಯಾತರು ದನಿಗೂಡಿಸಿದ್ದಾರೆ. ಹೊಸಬರು ಬಂದಲ್ಲಿ ಕೋಮು ಗಲಭೆ ನಿಯಂತ್ರಣವಾಗಬಹುದೆಂಬ ನಿರೀಕ್ಷೆಯಲ್ಲಿ ಮತದಾರರಿದ್ದಾರೆ. ಜನಪರ ಸಂಘಟನೆಗಳ ಹೋರಾಟ ವಿಚಾರಗಳು ಮುಖ್ಯವಾಗಿದ್ದು, ಸಂಘಟನೆಗಳು ರಾಜಕೀಯ ಪ್ರವೇಶ ಮಾಡಬೇಕೆಂದು ಬಹುಪಾಲು ಜನ ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಮತದಾರರು ಧನಾತ್ಮಕವಾಗಿ ಯೋಚಿಸಿ ಉತ್ತಮರನ್ನು ಆಯ್ಕೆ ಮಾಡಬೇಕಿದೆ ಎಂದರು.

    ಆರ್ಥಿಕ ತಜ್ಞ ಜಿ.ವಿ.ಸುಂದರ್, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಹೋರಾಟಗಾರರಾದ ಮಹಾಂತೇಶ ಕೊತಬಾಳ, ಬಸವರಾಜ ಶೀಲವಂತರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts