More

    ಕೊಪ್ಪಳದಲ್ಲಿ ಸೆ.6-7ರಂದು ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ

    ಕೊಪ್ಪಳ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೆ.6 ಹಾಗೂ 7ರಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಆಯೋಜಿಸಲಾಗಿದೆ.

    ಅಥ್ಲೆಟಿಕ್ಸ್, ವಾಲಿಬಾಲ್, ಫುಟ್‌ಬಾಲ್, ಖೋಖೋ, ಕಬಡ್ಡಿ, ಬಾಸ್ಕೆಟ್‌ಬಾಲ್, ಕುಸ್ತಿ, ಥ್ರೋಬಾಲ್, ಹ್ಯಾಂಡ್‌ಬಾಲ್, ಹಾಕಿ, ಟೇಬಲ್ ಟೆನ್ನಿಸ್, ಬಾಲ್ ಬ್ಯಾಡ್ಮಿಂಟನ್ ಮತ್ತು ಆಯ್ಕೆ ಕ್ರೀಡೆಗಳಾದ ಟೆನ್ನಿಸ್, ನೆಟ್‌ಬಾಲ್ ಮತ್ತು ಈಜು ಕ್ರೀಡೆಗಳು ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆಯಲಿವೆ. ಭಾಗವಹಿಸಲಿಚ್ಛಿಸುವ ಕ್ರೀಡಾಪಟುಗಳಿಗೆ ವಯಸ್ಸಿನ ನಿರ್ಬಂಧವಿಲ್ಲ.

    ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ ಗಂಗಾವತಿ, ಕಾರಟಗಿ ಹಾಗೂ ಕನಕಗಿರಿಯ ಕೀಡಾ ಅಧಿಕಾರಿ ರಂಗಸ್ವಾಮಿ (ಮೊ.7411755523), ಕುಕನೂರ ಹಾಗೂ ಯಲಬುರ್ಗಾದ ಹನುಮಂತಪ್ಪ ವಗ್ಗ್ಯಾನನವರ್ (ಮೊ.8970288857), ಕುಷ್ಟಗಿಯ ಮಾಹಾಂತೇಶ ಜಾಲಿಗಿಡದ (ಮೊ.9945501033), ಕೊಪ್ಪಳದ ಶರಣಬಸವ ಬಂಡಿಹಾಳ (ಮೊ.9591292420) ಮತ್ತು ಖೋಖೋ ತರಬೇತುದಾರ ಯತಿರಾಜು (ಮೊ.9448633146), ವಾಲಿಬಾಲ್ ತರಬೇತುದಾರ ಸುರೇಶ ಯಾದವ್ (ಮೊ. 9901527333)ರನ್ನು ಸಂಪರ್ಕಿಸಬಹುದು ಎಂದು ಕ್ರೀಡಾ ಇಲಾಖೆಯ ಎಡಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts